ಭಾರತದಲ್ಲಿ ನಿಲ್ಲದ ಕೊರೋನಾ ಹಾವಳಿ; ನಿನ್ನೆ ದೇಶದಲ್ಲಿ 92,071 ಕೇಸ್ ಪತ್ತೆ

ಶನಿವಾರ 1,136 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 79 ಸಾವಿರದ ಗಡಿ‌ ದಾಟಿದ್ದು 79,722ಕ್ಕೆ ಏರಿಕೆಯಾಗಿದೆ.

news18-kannada
Updated:September 14, 2020, 11:35 AM IST
ಭಾರತದಲ್ಲಿ ನಿಲ್ಲದ ಕೊರೋನಾ ಹಾವಳಿ; ನಿನ್ನೆ ದೇಶದಲ್ಲಿ 92,071 ಕೇಸ್ ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, (ಸೆ. 14): ಕೊರೋನಾ ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು, ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರಿರುವ ದೇಶಗಳ ಪಟ್ಟಿಯಲ್ಲಿ ಭಾರತ ಮೊದಲನೆ ಸ್ಥಾನದತ್ತ ಬಿರಬಿರನೆ ಸಾಗುತ್ತಿದೆ. ಈಗಾಗಲೇ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 48 ಲಕ್ಷದ ಗಡಿಯನ್ನೂ ದಾಟಿದೆ. ಜೊತೆಗೆ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳುತ್ತಿವೆ. ದೇಶದಲ್ಲಿ ಆಗಸ್ಟ್ 6ರ ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು.

ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು. ಸೆಪ್ಟೆಂಬರ್ 9ರಿಂದ 95 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಗೋಚರಿಸಲಾರಂಭಿಸಿದ್ದವು. ಸೆಪ್ಟೆಂಬರ್ 12ರಿಂದ ಮತ್ತೆ ತುಸು ಕಡಿಮೆ ಆಗಿದೆ. ಸೆಪ್ಟೆಂಬರ್ 12ರಂದು 94,372 ಪ್ರಕರಣಗಳು ವರದಿಯಾಗಿದ್ದವು. ಸೆಪ್ಟೆಂಬರ್ 13ರಂದು 92,071 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 48,46,428ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Mandya: ಮಂಡ್ಯ ಅರ್ಚಕರ ಕೊಲೆ ಪ್ರಕರಣ; ಆರೋಪಿಗಳಿಂದ ಪೊಲೀಸರ ಮೇಲೆ ಗುಂಡಿನ ದಾಳಿ

ಇದಲ್ಲದೆ ಶನಿವಾರ 1,136 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 79 ಸಾವಿರದ ಗಡಿ‌ ದಾಟಿದ್ದು 79,722ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 37,80,108 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,86,598 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ, ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706, ಸೆಪ್ಟೆಂಬರ್ 9ರಂದು 95,735, ಸೆಪ್ಟೆಂಬರ್ 10ರಂದು 96,551, ಸೆಪ್ಟೆಂಬರ್ 11ರಂದು 97,570, ಸೆಪ್ಟೆಂಬರ್ 12ರಂದು 94,372 ಹಾಗೂ ಸೆಪ್ಟೆಂಬರ್ 13ರಂದು 92,071ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: September 14, 2020, 11:35 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading