Coronavirus Update: ದೇಶದಲ್ಲಿ ಕೋವಿಡ್​​-19 ಆರ್ಭಟ: ಒಂದೇ ದಿನ 80 ಸಾವಿರ ಕೇಸ್​​​, 38 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಸೆಪ್ಟೆಂಬರ್ 1ರಿಂದ ಮತ್ತೆ ಹೆಚ್ಚಾಗಿವೆ. ಸೆಪ್ಟೆಂಬರ್ 1ರಂದು 78,357 ಪ್ರಕರಣಗಳು ಕಂಡುಬಂದಿದ್ದವು. ಸೆಪ್ಟೆಂಬರ್ 2ರಂದು ದಾಖಲೆಯ 83,883 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ.

news18-kannada
Updated:September 3, 2020, 2:37 PM IST
Coronavirus Update: ದೇಶದಲ್ಲಿ ಕೋವಿಡ್​​-19 ಆರ್ಭಟ: ಒಂದೇ ದಿನ 80 ಸಾವಿರ ಕೇಸ್​​​, 38 ಲಕ್ಷ ದಾಟಿದ ಸೋಂಕಿತರ ಸಂಖ್ಯೆ
ಕೊರೋನಾ
  • Share this:
ನವದೆಹಲಿ(ಸೆ.03): ದೇಶದಲ್ಲಿ ಕೊರೋನಾ ಕಾಣಿಸಿಕೊಂಡು 7 ತಿಂಗಳಾದರೂ ಅದರ ಅಬ್ಬರ ಅಡಗಿಲ್ಲ. ಶರವೇಗದಲ್ಲಿ ಸಾಗುತ್ತಿದೆ. ಇದೇ ಮೊದಲ ಬಾರಿಗೆ ಈಗ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಂಡಿದ್ದು, ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 38 ಲಕ್ಷ‌ದ ಗಡಿಯನ್ನೂ ದಾಟಿದೆ. 

ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಂಡುಬಂದಿದ್ದವು.‌

ಆಗಸ್ಟ್ 26ರಂದು 75,760 ಪ್ರಕರಣಗಳು, ಆಗಸ್ಟ್ 27ರಂದು 77,266 ಪ್ರಕರಣಗಳು, ಆಗಸ್ಟ್ 28ರಂದು 76,472 ಪ್ರಕರಣಗಳು, ಆಗಸ್ಟ್ 29ರಂದು 78,761 ಪ್ರಕರಣಗಳು ಹಾಗೂ ಆಗಸ್ಟ್ 30ರಂದು 78,512 ಪ್ರಕರಣಗಳು ಪತ್ತೆಯಾಗಿದ್ದವು. ಆಗಸ್ಟ್ 31ರಂದು ತುಸು ಕಡಿಮೆಯಾಗಿ 69,921ವರದಿಯಾಗಿದ್ದವು.

ಸೆಪ್ಟೆಂಬರ್ 1ರಿಂದ ಮತ್ತೆ ಹೆಚ್ಚಾಗಿವೆ. ಸೆಪ್ಟೆಂಬರ್ 1ರಂದು 78,357 ಪ್ರಕರಣಗಳು ಕಂಡುಬಂದಿದ್ದವು. ಸೆಪ್ಟೆಂಬರ್ 2ರಂದು ದಾಖಲೆಯ 83,883 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೋನಾ ಪೀಡಿತರ ಸಂಖ್ಯೆ 38,53,407ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಮಂಗಳವಾರ 1,043 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 67 ಸಾವಿರದ ಗಡಿ‌ ದಾಟಿದ್ದು 67,376ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 29,70,493 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 8,15,538 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Narendra Modi: ಪ್ರಧಾನಿ ನರೇಂದ್ರ ಮೋದಿ ಅವರ ವೈಯಕ್ತಿಕ ಟ್ವಿಟ್ಟರ್ ಖಾತೆ ಹ್ಯಾಕ್ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಆಗಸ್ಟ್ 1ರಂದು 54,736, ಆಗಸ್ಟ್ 2ರಂದು 52,972, ಆಗಸ್ಟ್ 3ರಂದು 52,050, ಆಗಸ್ಟ್ 4ರಂದು 52,509, ಆಗಸ್ಟ್ 5ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537, ಆಗಸ್ಟ್ 8ರಂದು 64,399, ಆಗಸ್ಟ್ 9ರಂದು 62,064, ಆಗಸ್ಟ್ 10ರಂದು  53,601, ಆಗಸ್ಟ್ 11ರಂದು 60,963, ಆಗಸ್ಟ್ 12ರಂದು 66,999, ಆಗಸ್ಟ್ 13ರಂದು 64,553, ಆಗಸ್ಟ್ 14ರಂದು 65,002, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531, ಆಗಸ್ಟ್ 19ರಂದು 69,652, ಆಗಸ್ಟ್ 20ರಂದು 68,898, ಆಗಸ್ಟ್ 21ರಂದು 69,878, ಆಗಸ್ಟ್ 22ರಂದು 69,239, ಆಗಸ್ಟ್ 23ರಂದು 61,408, ಆಗಸ್ಟ್‌ 24ರಂದು 60,975, ಆಗಸ್ಟ್ 25ರಂದು 67,151, ಆಗಸ್ಟ್ 26ರಂದು 75,760, ಆಗಸ್ಟ್ 27ರಂದು 77,266, ಆಗಸ್ಟ್ 28ರಂದು 76,472, ಆಗಸ್ಟ್ 29ರಂದು 78,761, ಆಗಸ್ಟ್ 30ರಂದು 78,512, ಆಗಸ್ಟ್ 31ರಂದು 69,921, ಸೆಪ್ಟೆಂಬರ್ 1ರಂದು 78,357 ಹಾಗೂ ಸೆಪ್ಟೆಂಬರ್ 2ರಂದು 83,883 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Ganesh Nachikethu
First published: September 3, 2020, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading