ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು: ಸೆರೋ ಸಮೀಕ್ಷೆ ಅಂದಾಜು

ಮೇ ತಿಂಗಳ ಮಧ್ಯಭಾಗದ ವೇಳೆಗೆ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು ತಗುಲಿದ್ದಿರಬಹುದು. ಮೇ 11ರಿಂದ ಜೂನ್ 4ರವರೆಗೆ ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ.

news18
Updated:September 11, 2020, 12:13 PM IST
ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು: ಸೆರೋ ಸಮೀಕ್ಷೆ ಅಂದಾಜು
ಸಾಂದರ್ಭಿಕ ಚಿತ್ರ
  • News18
  • Last Updated: September 11, 2020, 12:13 PM IST
  • Share this:
ನವದೆಹಲಿ(ಸೆ. 11): ಭಾರತದಲ್ಲಿ ಈವರೆಗೆ ದಾಖಲಾಗಿರುವ ಕೊರೋನಾ ಪ್ರಕರಣಗಳ ಸಂಖ್ಯೆ 40 ಲಕ್ಷ ಗಡಿ ದಾಟಿ ಹೋಗಿದೆ. ಅಮೆರಿಕ ಬಿಟ್ಟರೆ ವಿಶ್ವದಲ್ಲಿ ಭಾರತವೇ ಅತಿ ಹೆಚ್ಚು ಪ್ರಕರಣಗಳನ್ನ ಹೊಂದಿರುವುದು. ಆದರೆ, ವಾಸ್ತವವಾಗಿ ಪ್ರಕರಣಗಳು ಇನ್ನೂ ಹೆಚ್ಚಿವೆ ಎಂದು ತಜ್ಞರು ಆಗಾಗ ಹೇಳುತ್ತಲೇ ಬಂದಿದ್ದಾರೆ. ಐಸಿಎಂಆರ್ ನಡೆಸಿದ ಸೆರೋ ಸಮೀಕ್ಷೆ ಕೂಡ ಈ ವಾದವನ್ನು ಪುಷ್ಟೀಕರಿಸುವಂತಿದೆ. ಈ ಸಮೀಕ್ಷೆ ಪ್ರಕಾರ ನಾಲ್ಕು ತಿಂಗಳ ಹಿಂದೆಯೇ ಭಾರತದಲ್ಲಿ 64 ಲಕ್ಷ ಮಂದಿಗೆ ಸೋಂಕು ತಗುಲಿದ್ದಿರಬಹುದು. ಮೇ 11ರಿಂದ ಜೂನ್ 4ರವರೆಗೆ ನಡೆಸಿದ ಸೆರೋ ಸಮೀಕ್ಷೆಯಲ್ಲಿ ಈ ಅಂಶ ಬೆಳಕಿಗೆ ಬಂದಿದೆ. ಕೊರೋನಾ ಪತ್ತೆಗಾಗಿ ನಡೆಸಲಾಗುತ್ತಿದ್ದ ಆರ್​ಟಿ-ಪಿಸಿಆರ್ ಪರೀಕ್ಷೆಯಲ್ಲಿ ಒಂದು ಪ್ರಕರಣ ದೃಢಪಟ್ಟರೆ 82-130 ಮಂದಿಯ ಸೋಂಕು ಗುಪ್ತವಾಗಿಯೇ ಉಳಿದುಹೋಗಿತ್ತು ಎನ್ನಲಾಗುತ್ತಿದೆ.

ಫೆಬ್ರವರಿ ತಿಂಗಳಲ್ಲಿ ಭಾರತದಲ್ಲಿ ಮೊದಲ ಕೊರೋನಾ ಪ್ರಕರಣ ಪತ್ತೆಯಾಗಿದ್ದು. ಅದಾಗಿ 2-3 ತಿಂಗಳಲ್ಲೇ ದೇಶಾದ್ಯಂತ ಬರೋಬ್ಬರಿ 64 ಲಕ್ಷ ಮಂದಿಗೆ ಕೊರೋನಾ ಸೋಂಕು ತಗುಲಿದಂತಾಗಿದೆ. ಮಾರ್ಚ್ ತಿಂಗಳಿಂದ ಕಟ್ಟುನಿಟ್ಟಾಗಿ ಲಾಕ್ ಡೌನ್ ಹಾಕಿದ್ದರೂ ಪ್ರಕರಣಗಳು ಏರುಗತಿಯಲ್ಲಿ ಸಾಗಿರುವುದು ಸ್ಪಷ್ಟವಾಗಿದೆ. ಆದರೂ ಕೂಡ ಈ ಹಂತದಲ್ಲಿ ದೇಶದ ಜನಸಂಖ್ಯೆ ಒಂದು ಪ್ರತಿಶತದಷ್ಟು ಮಂದಿಗೂ ಸೋಂಕು ವ್ಯಾಪಿಸಿರಲಿಲ್ಲ.

ಇದನ್ನೂ ಓದಿ: ಮಾಸ್ಕೋ ಸಭೆ ನಂತರವೂ ಗಡಿಬಿಕ್ಕಟ್ಟಿಗೆ ಪರಿಹಾರ ಅನುಮಾನ; ಮುಂದುವರಿಯುತ್ತಾ ಚೀನಾ ಹಠಮಾರಿತನ?

ಏನಿದು ಸೆರೋ ಸರ್ವೇ?

ಇದು ಒಂದು ಮಾದರಿಯ ರಕ್ತದ ಪರೀಕ್ಷೆ. ರಕ್ಷದಲ್ಲಿ ಪ್ರತಿಕಾಯಗಳು (Antibodies) ಸೃಷ್ಟಿಯಾಗಿದೆಯಾ ಎಂಬುದನ್ನು ಪತ್ತೆ ಮಾಡಲು IgG(ಇಮ್ಯೂನೋಗ್ಲೋಬುಲಿನ್ ಜಿ) ಪರೀಕ್ಷೆಗೆ ರಕ್ತದ ಸೆರಮ್​ನ ಸಮೀಕ್ಷೆ ಇದಾಗಿದೆ. ದೇಹದಲ್ಲಿ ಪ್ರತಿಕಾಯಗಳನ್ನ ಹೊಂದಿದ್ದರೆ ಆ ವ್ಯಕ್ತಿಗೆ 2 ವಾರಕ್ಕಿಂತ ಮುಂಚೆಯೇ ಸೋಂಕು ಬಂದು ಹೋಗಿದೆ ಎಂದರ್ಥ. ಜೂನ್ 4ರವರೆಗೆ ಸಮೀಕ್ಷೆ ನಡೆಸಲಾಗಿದೆ ಎಂದರೆ ಮೇ 20ಕ್ಕಿಂತ ಮುಂಚಿನ ಸ್ಥಿತಿಯನ್ನು ಇದು ವ್ಯಕ್ತಪಡಿಸುತ್ತದೆ.

ಇದು 21 ರಾಜ್ಯಗಳ 70 ಜಿಲ್ಲೆಗಳ 700 ಪ್ರದೇಶಗಳಲ್ಲಿನ 28 ಸಾವಿರ ವ್ಯಕ್ತಿಗಳ ರಕ್ತದ ಮಾದರಿ ಸಂಗ್ರಹಿಸಿ ಈ ಸಮೀಕ್ಷೆ ನಡೆಸಲಾಗಿದೆ. ಈ 28 ಸಾವಿರ ಮಂದಿ ಪೈಕಿ 256 ಮಂದಿಗೆ ಪಾಸಿಟಿವ್ ಬಂದಿದೆ. ಹಾಗೆಯೇ 290 ಮಂದಿಗೆ ಯೂರೋಇಮ್ಮೂನ್ ELISA ಬಳಸಿ ಮರುಪರೀಕ್ಷೆ ನಡೆಸಿದಾಗ 157 ಜನರಿಗೆ ಪಾಸಿಟಿವ್ ಬಂದಿದೆ. ಇದರ ಆಧಾರದ ಮೇಲೆ ದೇಶಾದ್ಯಂತ ಕೊರೋನಾ ಸೋಂಕು ಶೇ. 0.73ರಷ್ಟು ಇದ್ದಿರಬಹುದು ಎಂಬ ಅಂದಾಜಿಗೆ ಬರಲಾಗಿದೆ.
Published by: Vijayasarthy SN
First published: September 11, 2020, 12:13 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading