ಕೊರೋನಾ ಭೀತಿ: ಚಿತ್ರದುರ್ಗದಲ್ಲಿ ಗೌರಸಮುದ್ರ ಮಾರಮ್ಮ ಜಾತ್ರೆ ರದ್ದು

ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಪ್ರತಿ ಪ್ರತೀ ವರ್ಷವೂ ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲಿಲ್ಲದ ಸಡಗರ ಮತ್ತು ಸಂಭ್ರಮ. ಯಾಕಂದ್ರೆ ಈ ಗ್ರಾಮದಲ್ಲಿ ಶ್ರಾವಣ ಮಾಸ ಮುಗಿದ ಮೊದಲ ಮಂಗಳವಾರ ಬುಡಕಟ್ಟು ಜಾತ್ರೆಯಾದ ಮಾರಮ್ಮ‌ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ.

news18-kannada
Updated:August 24, 2020, 8:49 AM IST
ಕೊರೋನಾ ಭೀತಿ: ಚಿತ್ರದುರ್ಗದಲ್ಲಿ ಗೌರಸಮುದ್ರ ಮಾರಮ್ಮ ಜಾತ್ರೆ ರದ್ದು
ಸಾಂದರ್ಭಿಕ ಚಿತ್ರ.
  • Share this:
 ಚಿತ್ರದುರ್ಗ(ಆ.24): ಗೌರಸಮುದ್ರ ಮಾರಮ್ಮ ಜಾತ್ರೆ ಅಂದ್ರೆ ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ಒಂದು. ಮಧ್ಯ ಕರ್ನಾಟಕದ ಹೆಬ್ಬಾಗಿಲು ಚಿತ್ರದುರ್ಗದಲ್ಲಿ ನಡೆಯುವ ಈ  ವಿಶೇಷ ಜಾತ್ರಾ ಮಹೋತ್ಸವ ವರ್ಷದ ಬುಡಕಟ್ಟು ಆಚರಣೆಗಳ ಮುನ್ನುಡಿ. ಆದ್ರೆ ಕೊರೋನಾ ಆರ್ಭಟದ ಮಧ್ಯೆ ಈ ಬಾರಿ ಜಾತ್ರೆಗೆ ಬ್ರೇಕ್ ಬಿದಿದ್ದೆ‌. ಪ್ರತೀ ವರ್ಷವೂ ಜಾತ್ರೆಗೆ ಮೊದಲೇ  ಗಿಜಿ ಗುಡುತ್ತಿದ್ದ ಊರಿಗ ಬಿಕೋ ಅನ್ನುತ್ತಿದೆ. ಜಾತ್ರೆ ನಡೆಯಬೇಕಾದ ದಿನದಲ್ಲಿ ಭಕ್ತಾಧಿಗಳಿಲ್ಲದೆ ದೇವಸ್ಥಾನ ಖಾಲಿ ಖಾಲಿಯಾಗಿದೆ .ಜಾತ್ರೆಗೆ ಬಂದ ಭಕ್ತರು ತಂಗುತ್ತಿದ್ದ ಜಾಗ ಬೀಡಾರಗಳಿಲ್ಲದೇ ಬಿಕೋ ಎನ್ನುತ್ತಿದೆ.

ಹೌದು, ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ಗೌರಸಮುದ್ರ ಗ್ರಾಮದಲ್ಲಿ ಪ್ರತಿ ಪ್ರತೀ ವರ್ಷವೂ ಶ್ರಾವಣ ಮಾಸ ಮುಗಿಯುತ್ತಿದ್ದಂತೆ ಎಲ್ಲಿಲ್ಲದ ಸಡಗರ ಮತ್ತು ಸಂಭ್ರಮ. ಯಾಕಂದ್ರೆ ಈ ಗ್ರಾಮದಲ್ಲಿ ಶ್ರಾವಣ ಮಾಸ ಮುಗಿದ ಮೊದಲ ಮಂಗಳವಾರ ಬುಡಕಟ್ಟು ಜಾತ್ರೆಯಾದ ಮಾರಮ್ಮ‌ದೇವಿಯ ಜಾತ್ರೆ ವಿಜೃಂಭಣೆಯಿಂದ ನಡೆಯುತ್ತದೆ. ಅಷ್ಟೆ ಅಲ್ಲದೆ ರಾಜ್ಯ ಹೊರ ರಾಜ್ಯಗಳಿಂದಲೂ ಕೂಡಾ ಲಕ್ಷಾಂತರ ಭಕ್ತಾಧಿಗಳು, ಮಾರಮ್ಮನ ದೇವಿಯ ದರ್ಶನಕ್ಕೆ ಪಾತ್ರರಾಗುತ್ತಾರೆ. ಆದರೆ ಈ ಬಾರಿ ಮಾತ್ರ ಈ ಜಾತ್ರೆ ಮಹೋತ್ಸವಕ್ಕೆ ಕೊರೋನಾ ಮಹಾಮಾರಿ ಎಫೆಕ್ಟ್​​​ ತಟ್ಟಿದೆ.

ಪ್ರತಿ ವರ್ಷ ನಡೆಯುತ್ತಿದ್ದ ಜಾತ್ರೆ ಸಂಪೂರ್ಣ ಬಂದ್ ಆಗಿದೆ. ಇನ್ನೂ ರಾಜ್ಯದಲ್ಲಿ ಕೊರೋನಾ ವ್ಯಾಪಕವಾಗಿ ಹರಡುತ್ತಿದೆ. ಹೀಗಾಗಿ ಚಿತ್ರದುರ್ಗದಲ್ಲೂ ಈ ಸೋಂಕು ತೀವ್ರಗೊಂಡಿದೆ. ಇದೀಗ ಸೋಂಕು ಹರಡುವಿಕೆ ತಡೆಗಟ್ಟುವ ನಿಟ್ಟಿನಲ್ಲಿ ಚಿತ್ರದುರ್ಗ ಜಿಲ್ಲಾಧಿಕಾರಿ ಕವಿತಾ. ಎಸ್ ಮನ್ನಿಕೇರಿ ಈ ನಿರ್ಧಾರ ತೆಗೆದುಕೊಂಡಿದ್ದಾರೆ.

ಗೌರಸಮುದ್ರ ಮಾರಮ್ಮನ್ನ ಜಾತ್ರೆ ಸಂಪೂರ್ಣ ರದ್ದುಗೊಳಿಸಲಾಗಿದೆ. ಜಾತ್ರೆ ರದ್ದು ಮಾಡಿರುವ ಕುರಿತು ಭಕ್ತರಲ್ಲಿ ಜಾಗೃತಿ ಮೂಡಿಸಲು ಬ್ಯಾನರ್​​​ಗಳನ್ನ ಹಾಕಲಾಗಿದೆ. ಜತೆಗೆ ದೇವಿಯ ದರ್ಶನಕ್ಕೆ ಬರುವ ಭಕ್ತರಿಗೆ ನಿರಾಸೆ ಆಗದಂತೆ ಜಿಲ್ಲಾಡಳಿತ ನಿತ್ಯವೂ ಪೂಜೆಗೆ ಅವಕಾಶ ಕಲ್ಪಿಸಿಕೊಟ್ಟಿದೆ. ಈ ಬಾರಿ ಜಾತ್ರೆ ಇಲ್ಲವಾದ್ದರಿಂದ ಬರುವ ಭಕ್ತಾಧಿಗಳಿಗೆ ದರ್ಶನಕ್ಕೆ ಅವಕಾಶ ಕಲ್ಪಿಸಿದೆ. ಅಲ್ಲದೇ ಕೊರೋನಾ ಸೋಂಕಿನಿಂದ ಜನರನ್ನ ರಕ್ಷಣೆ ಮಾಡೋಕೆ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಭಕ್ತಾಧಿಗಳಿಗೆ ಬಾಕ್ಸ್ ಸೌಲಭ್ಯ ಮಾಡಲಾಗಿದೆ.

ದೇವರ ದರ್ಶನಕ್ಕೆ ಬರುವ ಎಲ್ಲಾ ಭಕ್ತರಿಗೂ ಸ್ಯಾನಿಟೈಸ್​​​ ವ್ಯವಸ್ಥೆ ಕೂಡ ಮಾಡಲಾಗಿದೆ. ಪ್ರತಿಬಾರಿ ಜಾತ್ರೆ ಆರಂಭದ ದಿನವೇ ಭಕ್ತಾಧಿಗಳಿಂದ ತುಂಬಿ ತುಳುಕುತಿದ್ದ ಗೌರಸಮುದ್ರ ಗ್ರಾಮ, ಈ ಬಾರಿ ಮಾತ್ರಾ ಈ ಗ್ರಾಮ ಬಿಕೋ ಎನ್ನುತ್ತಿದೆ. ವರ್ಷಕ್ಕೊಮ್ಮೆ ಬಂದು ಬಳಗದ ಜೊತೆ ಸೇರಿ ಜಾತ್ರೆ ಆಚರಿಸುತ್ತಿದ್ದ ಗ್ರಾಮ ಜನರಿಗೆ ಈ ಸಾರಿ ಜಾತ್ರೆ ಇಲ್ಲದೆ ನಿರಾಸೆ ಆಗಿದೆ.

ಇದನ್ನೂ ಓದಿ: ಇಂದು ಕಾಂಗ್ರೆಸ್​ ಕಾರ್ಯಕಾರಿ ಸಮಿತಿ ಸಭೆ - ಗಾಂಧಿ ಕುಟುಂಬ ಹೊರತಾದ ಎಐಸಿಸಿ ಅಧ್ಯಕ್ಷರ ಆಯ್ಕೆ ಬಗ್ಗೆ ಚರ್ಚೆಒಟ್ಟಾರೆ ಕೋಟೆನಾಡಲ್ಲಿ ನಡೆಯಬೇಕಿದ್ದ ಗೌರಸಮುದ್ರ ಮಾರಮ್ಮ ದೇವಿಯ ಜಾತ್ರೆಯನ್ನ ಮಹಾಮಾರಿ ಕೊರೋನಾ ಸೋಂಕು ಆಚರಿಸದಂತೆ ಮಾಡಿದೆ. ಬುಡಕಟ್ಟು ಆಚರಣೆಗಳ ಜಾತ್ರೆಗಳಿಗೆ ಮುನ್ನುಡಿಯಾಗಿದ್ದ ವರ್ಷದ ಮೊದಲ ಜಾತ್ರೆ ನಂತಿರುವುದು ಲಕ್ಷಾಂತರ ಭಕ್ತರ ಸಂತಸದ ಕ್ಷಣಗಳಿಗೆ  ಉಳಿ ಹಿಂಡಿದಂತಾಗಿದೆ. ಇದ್ರಿಂದಾಗಿ ಇಡೀ ಗ್ರಾಮಕ್ಕೆ ಗ್ರಾಮವೇ ಜಾತ್ರೆಯ ಕಲರವ, ರಂಗು, ಗುಂಗಿಲ್ಲದೇ ಬಿಕೋ ಎನ್ನುತ್ತಿದೆ. ಇದ್ರಿಂದ ಬೇಸರಗೊಂಡುರೋ ಜನರು ಈ ಕೊರೋನಾ ಯಾಕಾದ್ರು ಬಂತಪ್ಪಾ ಅಂತ ಮನಸಲ್ಲೆ ಶಾಪ ಹಾಕುವಂತಾಗಿದೆ.
Published by: Ganesh Nachikethu
First published: August 24, 2020, 8:46 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading