news18-kannada Updated:April 26, 2021, 8:43 PM IST
ಸಾಂದರ್ಭಿಕ ಚಿತ್ರ
ನವದೆಹಲಿ: ಭಾರತದಲ್ಲಿ ಪ್ರಸ್ತುತ ಬಳಕೆಯಲ್ಲಿರುವ ಎರಡು ಲಸಿಕೆಗಳ ತಯಾರಕ ಸಂಸ್ಥೆಗಳಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ಗೆ ಲಸಿಕೆ ದರವನ್ನು ಕಡಿಮೆ ಮಾಡುವಂತೆ ಕೇಂದ್ರ ಸರ್ಕಾರ ಕೇಳಿದೆ ಎಂದು ಅಧಿಕೃತ ಮೂಲಗಳನ್ನು ಉಲ್ಲೇಖಿಸಿ ಪಿಟಿಐ ಸುದ್ದಿ ಸಂಸ್ಥೆ ಸೋಮವಾರ ವರದಿ ಮಾಡಿದೆ.
ದೇಶದಲ್ಲಿ ಮಾರಕ ಕೊರೋನಾ ವೈರಸ್ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮೇ 1 ರಿಂದ 18ರಿಂದ 45 ವರ್ಷದವರೂ ಲಸಿಕೆ ಪಡೆಯಬಹುದು ಎಂದು ಲಸಿಕೆ ನೀತಿಯನ್ನು ಮಾರ್ಪಡಿಸಿದೆ. ಎರಡು ಲಸಿಕೆ ತಯಾರಕಾ ಸಂಸ್ಥೆಗಳು ಬೆಲೆಗಳನ್ನು ಘೋಷಿಸಿರುವುದು ಹಲವು ಆರೋಪಗಳಿಗೆ ಕಾರಣವಾಗಿದೆ. ಒಂದು ರಾಷ್ಟ್ರಕ್ಕೆ ಒಂದೇ ದರ ಇರಬೇಕು ಎಂದು ಕೆಲವರು ವಾದಿಸಿದ್ದಾರೆ.
ಇದನ್ನು ಓದಿ: Karnataka Lockdown: ಕರ್ನಾಟಕದಲ್ಲಿ 14 ದಿನಗಳ ಕಾಲ ಲಾಕ್ಡೌನ್; ಬೆ.6-10 ಗಂಟೆವರೆಗೆ ಮಾತ್ರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ!
ಲಸಿಕೆಯ ಹೊಸ ದರವನ್ನು ಇತ್ತೀಚೆಗೆ ಕಂಪನಿಗಳು ಘೋಷಿಸಿದ್ದವು. ಕೇಂದ್ರ ಸರ್ಕಾರವು ಮೇ 1 ರಿಂದ 18 ರಿಂದ 45 ವರ್ಷಗಳ ನಡುವೆ ಇರುವವರು ಲಸಿಕೆ ಪಡೆದುಕೊಳ್ಳಬಹುದು ಎಂದು ಹೇಳಿದೆ. ಇವರಿಗೆ ಈ ದರ ಅನ್ವಯಿಸಲಿದೆ. 45 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಉಚಿತ ಲಸಿಕೆ ಹಾಕಲು ಸರ್ಕಾರ ಹೇಳಿದೆ ಮತ್ತು ಆರೋಗ್ಯ ರಕ್ಷಣೆ ಮತ್ತು ಮುಂಚೂಣಿ ಕಾರ್ಮಿಕರು ಸರ್ಕಾರಿ ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ಪಡೆದುಕೊಳ್ಳಬಹುದಾಗಿದೆ. ಲಸಿಕೆ ಅಭಿಯಾನ ಮೊದಲಿನಂತೆ ಮುಂದುವರಿಯುತ್ತದೆ.
ಭಾರತದಲ್ಲಿ ಆಕ್ಸ್‌ಫರ್ಡ್-ಅಸ್ಟ್ರಾಜೆನೆಕಾದ ಕೋವಿಶೀಲ್ಡ್ ತಯಾರಿಸುವ ಎಸ್‌ಐಐ, ರಾಜ್ಯ ಸರ್ಕಾರಗಳಿಗೆ 400 ರೂ. ಮತ್ತು ಖಾಸಗಿ ಆಸ್ಪತ್ರೆಗಳಿಗೆ 600 ರೂಪಾಯಿ ದರ ನಿಗದಿಪಡಿಸಿದೆ. ಪ್ರಸ್ತುತ ಕೇಂದ್ರ ಸರ್ಕಾರಕ್ಕೆ ಅಸ್ತಿತ್ವದಲ್ಲಿರುವ ಸರಬರಾಜುಗಳಿಗೆ ಪ್ರತಿ ಡೋಸ್‌ಗೆ 150 ರೂ. ನಿಗದಿಪಡಿಸಿದೆ. "ಕೋವಿಶೀಲ್ಡ್ ಇಂದು ಮಾರುಕಟ್ಟೆಯಲ್ಲಿ ಲಭ್ಯವಿರುವ ಅತ್ಯಂತ ಒಳ್ಳೆ COVID-19 ಲಸಿಕೆ" ಎಂದು ಎಸ್‌ಐಐ ಹೇಳಿದೆ. ಆರಂಭಿಕ ಬೆಲೆಗಳನ್ನು ಜಾಗತಿಕವಾಗಿ ತೀರಾ ಕಡಿಮೆ ಮಾಡಲಾಗಿದೆ ಎಂದು ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹೇಳಿದೆ.
Published by:
HR Ramesh
First published:
April 26, 2021, 8:43 PM IST