ಕೊರೋನಾ ಭಯದಿಂದ ಹೆಂಡತಿ, ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ

ಮಗಳಿಗೆ ಜ್ವರ ಕಡಿಮೆಯಾಗದಿದ್ದಾಗ ಮೌನೇಶ್​​ಗೆ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಡೆತ್ ನೋಟ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೋನಾ ಭಯ ಎಂದು ಬರೆದಿರುವ ಬಗ್ಗೆ ಸಂಬಂಧಿಗಳೇ ಹೇಳಿದ್ದಾರೆ.

news18-kannada
Updated:July 25, 2020, 2:30 PM IST
ಕೊರೋನಾ ಭಯದಿಂದ ಹೆಂಡತಿ, ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ
ಪ್ರಾತಿನಿಧಿಕ ಚಿತ್ರ
  • Share this:
ಧಾರವಾಡ(ಜು.25): ಕೊರೋನಾ ಭಯದಿಂದ ವ್ಯಕ್ತಿಯೊಬ್ಬ ತನ್ನ ಹೆಂಡತಿ ಹಾಗೂ ನಾಲ್ಕು ವರ್ಷದ ಮಗುವಿಗೆ ವಿಷ ನೀಡಿ ತಾನು ಸಹ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಹೃದಯ ವಿದ್ರಾವಕ ಘಟನೆ ಧಾರವಾಡದಲ್ಲಿ ನಡೆದಿದೆ.

ಧಾರವಾಡದ ಕವಳಿಕಾಯಿ ಚಾಳದ‌ ನಿವಾಸಿಯಾದ ಮೌನೇಶ ಪತ್ತಾರ (26), ಹೆಂಡತಿ ಅರ್ಮಿತಾ (28) ಹಾಗೂ ನಾಲ್ಕು ವರ್ಷದ ಮಗಳು ಸುಕೃತಾ ಮೃತಪಟ್ಟವರು ಎಂದು ತಿಳಿದು ಬಂದಿದೆ.

ಆತ್ಮಹತ್ಯೆಗೆ ಕೊರೋನಾ ಭಯವೇ ಕಾರಣ ಎಂದು ಮೌನೇಶ ಡೆತ್ ನೋಟ್ ನಲ್ಲಿ ಬರೆದಿದ್ದಾರೆ. ಮನೆಯಲ್ಲಿ ಹೆಂಡತಿ, ಮಗಳಿಗೆ ಕೊರೋನಾ ಲಕ್ಷಣ ಕಂಡು ಬಂದಿದ್ದ ಶಂಕೆ ವ್ಯಕ್ತವಾಗಿತ್ತು. ಹೀಗಾಗಿ ಮೌನೇಶ್ ಸ್ಥಳೀಯ ವೈದ್ಯರೊಬ್ಬರ ಬಳಿ ತೋರಿಸಿದ್ದರು. ಪತ್ನಿಗೆ ಲೋ ಬಿಪಿ ಮತ್ತು ಮಗಳಿಗೆ ಜ್ವರ ಲಕ್ಷಣ‌ ಕಂಡು ಬಂದಿತ್ತು.

ಮಗಳಿಗೆ ಜ್ವರ ಕಡಿಮೆಯಾಗದಿದ್ದಾಗ ಮೌನೇಶ್​​ಗೆ ಆತಂಕ ಶುರುವಾಗಿದೆ. ಈ ಹಿನ್ನೆಲೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಎನ್ನಲಾಗುತ್ತಿದೆ. ಡೆತ್ ನೋಟ್​ನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೊರೋನಾ ಭಯ ಎಂದು ಬರೆದಿರುವ ಬಗ್ಗೆ ಸಂಬಂಧಿಗಳೇ ಹೇಳಿದ್ದಾರೆ.

ರಾವಣ ವಿಶ್ವದ ಮೊದಲ ವಿಮಾನಯಾನಿ?; ಶ್ರೀಲಂಕಾ ಸಂಶೋಧನೆಗೆ ಸಲ್ಲಿಕೆಯಾಯ್ತು 100ಕ್ಕೂ ಹೆಚ್ಚು ದಾಖಲೆಗಳು

ಆತ್ಮಹತ್ಯೆ ಮಾಡಿಕೊಂಡ ಮೌನೇಶ ಧಾರವಾಡದ ಟಾಟಾ ಮಾರ್ಕೊಪೋಲೊ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ. ಈ ಕಾರ್ಖಾನೆಯಲ್ಲಿ ಕೊರೋನಾ ಪಾಸಿಟಿವ್ ಸಂಖ್ಯೆ ಹೆಚ್ಚಾಗಿದ್ದು ಸಹ ಆತಂಕ ಮೂಡಿಸಿದೆ. ತನಗೂ ಹಾಗೂ ತನ್ನ ಕುಟುಂಬಕ್ಕೆ ಕೊರೋನಾ ವೈರಸ್ ಹರಡಿರಬಹುದೆಂಬ ಭಯದಿಂದ ಮೌನೇಶ ತನ್ನ ಪತ್ನಿ ಹಾಗೂ ನಾಲ್ಕು ವರ್ಷದ ಮಗುವಿಗೆ ವಿಷ ನೀಡಿ ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಮೌನೇಶ ಮೂಲತಃ ಗದಗ ಜಿಲ್ಲೆಯ ರೋಣ ತಾಲೂಕಿನ ಅಸೂಟಿ ಗ್ರಾಮದವರು. ಕೆಲಸಕ್ಕಾಗಿ ಧಾರವಾಡದಲ್ಲಿ ನೆಲೆಸಿದ್ದರು. ಕಳೆದ 8 ವರ್ಷಗಳಿಂದ ಧಾರವಾಡದಲ್ಲಿ ನೆಲೆಸಿದ್ದ ಮೌನೇಶ ಕೊರೋನಾ ಭಯಕ್ಕೆ ತನ್ನ ಪತ್ನಿ ಹಾಗೂ ಮಗುವಿಗೆ ವಿಷ ನೀಡಿ ತಾನೂ ಸಹ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಧಾರವಾಡ ಉಪನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಒಟ್ಟಾರೆಯಾಗಿ ಕೊರೋನಾ ಕೇಕೆಯನ್ನು ಮುಂದುವರೆಸಿದ್ದು,  ಸುಂದರ‌ ಕುಟುಂಬ ಕೊರೋನಾ ವೈರಸ್ ಗೆ ಭಯಪಟ್ಟು ಇಡೀ ಕುಟುಂಬವೇ ಇಹಲೋಕ ತ್ಯಜಿಸಿರುವುದು ಮಾತ್ರ ವಿಪರ್ಯಾಸದ ಸಂಗತಿ.
Published by: Latha CG
First published: July 25, 2020, 2:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading