HOME » NEWS » Coronavirus-latest-news » CORONAVIRUS UPDATES IN MIDDLE OF MAY MONTH CORONA CASES AT PEAK IN INDIA SAYS IIT SCIENTISTS DBDEL LG

Coronavirus: ಮೇ ತಿಂಗಳ ಮಧ್ಯದಲ್ಲಿ ಭಾರತಕ್ಕೆ ಕಾದಿದೆ ಕೊರೋನಾ ಆಪತ್ತು; ಭಯಾನಕ ಭವಿಷ್ಯ ನುಡಿದಿದ್ದಾರೆ ಐಐಟಿ ವಿಜ್ಞಾನಿಗಳು

ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ ಎಂದಿರುವ ವಿಜ್ಞಾನಿಗಳು ಅದಕ್ಕೂ ಮೊದಲು ಮೇ 11ರಿಂದ15ರ ನಡುವೆ 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳಾಗುವ ಸಾಧ್ಯತೆ ಇದೆ ಹೇಳಿದ್ದಾರೆ. ಹಾಗೆಯೇ ಮೇ ಮಧ್ಯದಲ್ಲಿ ಗರಿಷ್ಠ ಹಂತ ತಲುಪಿ ನಂತರ ಮೇ ತಿಂಗಳ ಕಡೆಯಲ್ಲಿ ಇಳಿಮುಖವಾಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ.

news18-kannada
Updated:April 27, 2021, 9:22 AM IST
Coronavirus: ಮೇ ತಿಂಗಳ ಮಧ್ಯದಲ್ಲಿ ಭಾರತಕ್ಕೆ ಕಾದಿದೆ ಕೊರೋನಾ ಆಪತ್ತು; ಭಯಾನಕ ಭವಿಷ್ಯ ನುಡಿದಿದ್ದಾರೆ ಐಐಟಿ ವಿಜ್ಞಾನಿಗಳು
ಪ್ರಾತಿನಿಧಿಕ ಚಿತ್ರ.
  • Share this:
 ನವದೆಹಲಿ(ಏ.‌ 27): ದೇಶದಲ್ಲಿ ಎರಡನೇ ಸುತ್ತಿನಲ್ಲಿ ಮಾರಕ‌ ಕಾಯಿಲೆ ಕೊರೋನಾ ಅಲೆ ವ್ಯಾಪಕವಾಗಿ ಹರಡುತ್ತಿದ್ದು ಆತಂಕವನ್ನು ಸೃಷ್ಟಿಸುತ್ತಿದೆ. ಹಲವು ನಿರ್ಬಂಧಗಳ ನಡುವೆಯೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಕೊರೋನಾ ಸೋಂಕಿತರು ಪತ್ತೆ ಆಗುತ್ತಿದ್ದಾರೆ‌.‌ ಪ್ರತಿದಿನ ಮೂರು ಲಕ್ಷಕ್ಕೂ ಹೆಚ್ಚು ಕೊರೊನಾ ಪ್ರಕರಣಗಳು ಗೋಚರಿಸಲು ಆರಂಭಿಸಿವೆ. ಆದರೀಗ ಮೇ ತಿಂಗಳ ಮಧ್ಯಭಾಗದಲ್ಲಿ ಇನ್ನೂ ದೊಡ್ಡ ಆಪತ್ತು ಕಾದಿದೆ ಎಂದು ಐಐಟಿ ವಿಜ್ಞಾನಿಗಳು ಭಯಾನಕ ಭವಿಷ್ಯ ನುಡಿದಿದ್ದಾರೆ.

ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ (IIT) ವಿಜ್ಞಾನಿಗಳು ಗಣಿತಶಾಸ್ತ್ರೀಯ ಮಾದರಿಯಲ್ಲಿ ಅಧ್ಯಯನ ನಡೆಸಿದ್ದಾರೆ. ಅವರ ಅಧ್ಯಯನದ ಪ್ರಕಾರ ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ. ಆಗ ದೇಶದಲ್ಲಿ 38ರಿಂದ 48 ಲಕ್ಷ ಸಕ್ರಿಯ ಪ್ರಕರಣಗಳು ಇರಲಿವೆ. ಆ ಅವಧಿಯಲ್ಲಿ ಪ್ರತಿದಿನ 4.4 ಲಕ್ಷದಷ್ಟು ಹೊಸ ಕೇಸುಗಳು ಪತ್ತೆಯಾಗುವ ಸಾಧ್ಯತೆ ಇದೆ ಎಂದು ತಿಳಿಸಿದ್ದಾರೆ.

ಕಾನ್ಪುರ ಮತ್ತು ಹೈದರಾಬಾದ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯ ವಿಜ್ಞಾನಿಗಳು ಗಣಿತಶಾಸ್ತ್ರೀಯದಲ್ಲಿನ  'ಸೂತ್ರ' ಎಂಬ ಮಾದರಿಯ ಆಧಾರದ ಮೇಲೆ ದೇಶದಲ್ಲಿ ಕಂಡುಬರುತ್ತಿರುವ ಕೊರೋನಾ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ. ಈ ‘ಸೂತ್ರ’ ಮಾದರಿಯು ಹಲವು ಬಗೆಯ ವೈಶಿಷ್ಟ್ಯಗಳನ್ನು ಹೊಂದಿದೆ ಮತ್ತು ಹೊಸ ಮಾದರಿಯಾಗಿದೆ.

ಕೊರೋನಾ ಬಂದ ಕೂಡಲೇ ಆಸ್ಪತ್ರೆಗೆ ದಾಖಲಾಗಬೇಕಿಲ್ಲ; ಮನೆಯಲ್ಲೇ ಆರೈಕೆಗೆ ಸರ್ಕಾರದಿಂದ ಮಾರ್ಗದರ್ಶನ

ಮೂರು ಪ್ರಮುಖ ಸಂಗತಿಗಳನ್ನು ಒಳಗೊಂಡ ಸೂತ್ರ ಮಾದರಿಯನ್ನು ಅಭಿವೃದ್ಧಿಪಡಿಸಲಾಗಿದೆ. ಕೊರೋನಾ ವೈರಸ್ ತಗುಲಿದ ವ್ಯಕ್ತಿಯು ಪ್ರತಿ ದಿನ ಎಷ್ಟು ಜನರಿಗೆ ಸೋಂಕು ಹರಡುತ್ತಾನೆ ಎಂಬ ಸಂಖ್ಯೆ, ನಾಗರಿಕರು ಯಾವ ರೀತಿಯಲ್ಲಿ ಮುನ್ನೆಚ್ಚರಿಕೆ ವಹಿಸುತ್ತಿದ್ದಾರೆ ಎಂಬ ಅಂಶ  ಹಾಗೂ ದೃಢಪಡದ ಪ್ರಕರಣಗಳ ಸಂಖ್ಯೆಯನ್ನು ಅಧ್ಯಯನ ನಡೆಸಲಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ. ಆದರೆ ತಮ್ಮ ಅಧ್ಯಯನ ವರದಿಯನ್ನು ವಿಜ್ಞಾನಿಗಳು ಪ್ರಕಟಣೆ ಮಾಡಿಲ್ಲ‌.

ಮೇ 14ರಿಂದ 18ರವರೆಗಿನ‌ ಅವಧಿಯಲ್ಲಿ ಕೊರೋನಾ ಎರಡನೇ ಅಲೆಯು ಗರಿಷ್ಠ ಹಂತ ತಲುಪಲಿದೆ ಎಂದಿರುವ ವಿಜ್ಞಾನಿಗಳು ಅದಕ್ಕೂ ಮೊದಲು ಮೇ 11ರಿಂದ15ರ ನಡುವೆ 33ರಿಂದ 35 ಲಕ್ಷ ಸಕ್ರಿಯ ಪ್ರಕರಣಗಳಾಗುವ ಸಾಧ್ಯತೆ ಇದೆ ಹೇಳಿದ್ದಾರೆ. ಹಾಗೆಯೇ ಮೇ ಮಧ್ಯದಲ್ಲಿ ಗರಿಷ್ಠ ಹಂತ ತಲುಪಿ ನಂತರ ಮೇ ತಿಂಗಳ ಕಡೆಯಲ್ಲಿ ಇಳಿಮುಖವಾಗಲಿದೆ ಎಂಬುದಾಗಿಯೂ ತಿಳಿಸಿದ್ದಾರೆ. ತಮ್ಮ ಈ ಭವಿಷ್ಯ ನಿಜವಾಗಲಿದೆ ಎಂದು ಪ್ರಾಧ್ಯಾಪಕ ಮನಿಂದರ್ ಅಗರ್‌ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
Youtube Video
ಎರಡನೇ ಅಲೆ ಶುರುವಾದ ಮೇಲೆ ಇದೇ ಮೊದಲ ಬಾರಿಗೆ ಏಪ್ರಿಲ್ 4ರಂದು 1,03,558 ಪ್ರಕರಣಗಳು ಪತ್ತೆಯಾಗಿದ್ದವು. ನಂತರ ಏಪ್ರಿಲ್ 5ರಂದು 96,982, ಏಪ್ರಿಲ್ ‌6ರಂದು 1,15,736, ಏಪ್ರಿಲ್ 7ರಂದು 1,26,789, ಏಪ್ರಿಲ್ 8ರಂದು 1,31,968, ಏಪ್ರಿಲ್ 9ರಂದು 1,45,384, ಏಪ್ರಿಲ್ 10ರಂದು 1,52,879, ಏಪ್ರಿಲ್ 11ರಂದು 1,68,912, ಏಪ್ರಿಲ್ 12ರಂದು 1,61,736, ಏಪ್ರಿಲ್ 13ರಂದು 1,84,372, ಏಪ್ರಿಲ್ 14ರಂದು 2,00,739, ಏಪ್ರಿಲ್ 15ರಂದು 2,17,353, ಏಪ್ರಿಲ್ 16ರಂದು 2,34,692, ಏಪ್ರಿಲ್ 17ರಂದು 2,61,500 ಏಪ್ರಿಲ್ 18ರಂದು 2,73,810, ಏಪ್ರಿಲ್ 19ರಂದು 2,59,170, ಏಪ್ರಿಲ್ 20ರಂದು 2,95,041, ಏಪ್ರಿಲ್ 21ರಂದು 3,14,835, ಏಪ್ರಿಲ್ 22ರಂದು 3,32,730, ಏಪ್ರಿಲ್ 23ರಂದು 3,46,786, ಏಪ್ರಿಲ್ 24ರಂದು 3,49,691 ಹಾಗೂ ಏಪ್ರಿಲ್ 25ರಂದು 3,52,991 ಪ್ರಕರಣಗಳು ಪತ್ತೆಯಾಗಿವೆ.
Published by: Latha CG
First published: April 27, 2021, 9:22 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories