Coronavirus Vaccine: ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆ ಪ್ರಯೋಗಕ್ಕೆ ಚೀನಾ ಒಪ್ಪಿಗೆ

ಚೀನಾ ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆಯನ್ನು ಕಂಡುಹಿಡಿದಿದ್ದು, ನವೆಂಬರ್ ತಿಂಗಳಲ್ಲಿ ಇದರ ಮೊದಲ ಹಂತದ ಪ್ರಯೋಗವನ್ನು ಆರಂಭಿಸಲಿದೆ.

news18-kannada
Updated:September 11, 2020, 10:57 AM IST
Coronavirus Vaccine: ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆ ಪ್ರಯೋಗಕ್ಕೆ ಚೀನಾ ಒಪ್ಪಿಗೆ
ಕೊರೋನಾ ವೈರಸ್
  • Share this:
ನವದೆಹಲಿ (ಸೆ. 11): ಕೊರೋನಾ ವೈರಸ್​​ ಅಟ್ಟಹಾಸ ಹೆಚ್ಚುತ್ತಲೇ ಇದ್ದು, ಜಗತ್ತಿನ ಬಹುತೇಕ ಎಲ್ಲ ದೇಶಗಳೂ ಕೊರೋನಾ ಸೋಂಕಿಗೆ ಲಸಿಕೆ ಕಂಡುಹಿಡಿಯಲು ಪೈಪೋಟಿ ನಡೆಸುತ್ತಿವೆ. ಈಗಾಗಲೇ ಇಂಗ್ಲೆಂಡ್​ನ ಆಕ್ಸ್​ಫರ್ಡ್​ ವಿಶ್ವವಿದ್ಯಾಲಯ ಸಿದ್ಧಪಡಿಸುತ್ತಿರುವ ಕೊರೋನಾ ಔಷಧದ ಪ್ರಯೋಗವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಆ ಲಸಿಕೆಯನ್ನು ಪ್ರಯೋಗ ಮಾಡಲಾಗಿದ್ದ ರೋಗಿಯ ಆರೋಗ್ಯದಲ್ಲಿ ಅಡ್ಡ ಪರಿಣಾಮ ಉಂಟಾದ ಕಾರಣದಿಂದ ಔಷಧದ ಪ್ರಯೋಗವನ್ನು ತಡೆಹಿಡಿಯಲಾಗಿದೆ. ಇದೀಗ ಚೀನಾ ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆಯೊಂದನ್ನು ಸಿದ್ಧಪಡಿಸಲು ಮುಂದಾಗಿದ್ದು, ಈ ಪ್ರಯೋಗಕ್ಕೆ ಅಲ್ಲಿನ ಸರ್ಕಾರ ಅನುಮತಿ ನೀಡಿದೆ.

ಈ ಮೂಲಕ ಜಗತ್ತಿನಾದ್ಯಂತ 27 ಮಿಲಿಯನ್​ಗೂ ಹೆಚ್ಚು ಜನರನ್ನು ಬಾಧಿಸುತ್ತಿರುವ ಕೊರೋನಾ ವೈರಸ್​​ಗೆ ಚಿಕಿತ್ಸೆ ಕಂಡುಹಿಡಿಯಲು ಚೀನಾ ಮುಂದಾಗಿದೆ ಎಂದು ಚೀನಾದ ಮಾಧ್ಯಮಗಳು ವರದಿ ಮಾಡಿವೆ. ಚೀನಾ ಮೂಗಿನ ಮೂಲಕ ಸಿಂಪಡಿಸುವ ಕೊರೋನಾ ಲಸಿಕೆಯನ್ನು ಕಂಡುಹಿಡಿದಿದ್ದು, ನವೆಂಬರ್ ತಿಂಗಳಲ್ಲಿ ಇದರ ಮೊದಲ ಹಂತದ ಪ್ರಯೋಗವನ್ನು ಆರಂಭಿಸಲಿದೆ. ಇದಕ್ಕಾಗಿ 100 ಸ್ವಯಂಸೇವಕರನ್ನು ನೇಮಕ ಮಾಡಿಕೊಳ್ಳಲು ನಿರ್ಧರಿಸಲಾಗಿದೆ. ಚೀನಾದ ನ್ಯಾಷನಲ್ ಮೆಡಿಕಲ್ ಪ್ರೊಡಕ್ಟ್ ಅಡ್ಮಿನಿಸ್ಟ್ರೇಷನ್​ನಿಂದ ಅನುಮತಿ ಪಡೆದ ಏಕೈಕ ಔಷಧ ಪ್ರಯೋಗ ಇದಾಗಿದೆ.

ಇದನ್ನೂ ಓದಿ: Ragini Dwivedi: ಸ್ಯಾಂಡಲ್​ವುಡ್​ ಡ್ರಗ್​ ಪ್ರಕರಣ; ನಟಿ ರಾಗಿಣಿ ದ್ವಿವೇದಿಗೆ ಇಂದು ಜೈಲಾ? ಜಾಮೀನಾ?

ಹಾಂಗ್​ಕಾಂಗ್ ಮತ್ತು ಚೀನಾ ಸಹಯೋಗದಲ್ಲಿ ಈ ಔಷಧವನ್ನು ಸಿದ್ಧಪಡಿಸಲು ನಿರ್ಧರಿಸಲಾಗಿದೆ. ಹಾಂಗ್​ಕಾಂಗ್ ವಿಶ್ವವಿದ್ಯಾಲಯ, ಕ್ಲಿಯಾಮನ್ ಇಶ್ವವಿದ್ಯಾಲಯ, ಬೀಜಿಂಗ್ ವಂಟೈ ಬಯಾಲಾಜಿಕಲ್ ಫಾರ್ಮಸಿಯ ಸಂಶೋಧಕರು ಈ ಔಷಧ ಪ್ರಯೋಗವನ್ನು ನಡೆಸಲಿದ್ದಾರೆ ಎಂದು ಮನಿ ಕಂಟ್ರೋಲ್ ವರದಿ ಮಾಡಿದೆ. ಈ ಲಸಿಕೆ ಕೇವಲ ಕೊರೋನಾ ವೈರಸ್​​ ಅನ್ನು ಮಾತ್ರವಲ್ಲದೆ ಹೆಚ್​1ಎನ್1, ಹೆಚ್​3ಎನ್​2, ಬಿ ಇನ್​ಫ್ಲುಯೆಂಜಾ ವೈರಸ್​ ಅನ್ನು ಕೂಡ ನಿಯಂತ್ರಿಸಬಲ್ಲದು. ಇನ್ನೊಂದು ವರ್ಷದಲ್ಲಿ ಈ ಲಸಿಕೆಯ ಕ್ಲಿನಿಕಲ್ ಪ್ರಯೋಗ ಪೂರ್ಣಗೊಳ್ಳಲಿದೆ ಎನ್ನಲಾಗಿದೆ.

ಈಗಾಗಲೇ ಆಕ್ಸ್‌ಫರ್ಡ್‌ ಮತ್ತು ಅಸ್ಟ್ರಾಜೆನೆಕಾ ಜಂಟಿಯಾಗಿ ಅಭಿವೃದ್ಧಿ ಪಡಿಸಿದ AZD1222 ಹೆಸರಿನ ಲಸಿಕೆ ಪ್ರಯೋಗವನ್ನು ತಾತ್ಲಾಕಿಕವಾಗಿ ಸ್ಥಗಿತಗೊಳಿಸಲಾಗಿದೆ. ವಿಶ್ವ ಆರೋಗ್ಯ ಸಂಸ್ಥೆಯ ಮಾಹಿತಿ ಪ್ರಕಾರ ವಿಶ್ವದಲ್ಲಿ ಒಟ್ಟು 180 ಲಸಿಕೆಗಳು ಅಭಿವೃದ್ಧಿಯಾಗುತ್ತಿದೆ. ಈ ಪೈಕಿ ಎಲ್ಲರ ನಿರೀಕ್ಷೆ ಆಕ್ಸ್‌ಫರ್ಡ್‌ ಲಸಿಕೆಯ ಮೇಲಿತ್ತು. ಮೊದಲ ಕ್ಲಿನಿಕಲ್‌ ಟ್ರಯಲ್‌ ಯಶಸ್ವಿಯಾಗಿತ್ತು. 1,077 ಮಂದಿ ಆರೋಗ್ಯಕರ ಸ್ವಯಂಸೇವಕರ ಮೇಲೆ ನಡೆಸಿದ ಆರಂಭಿಕ ಹಂತದ ಕ್ಲಿನಿಕಲ್ ಟ್ರಯಲ್‌ ಯಶಸ್ವಿಯಾಗಿದೆ ಎಂದು ಅಂತಾರಾಷ್ಟ್ರೀಯ ಮಾಧ್ಯಮ ವರದಿ ಮಾಡಿತ್ತು.
Published by: Sushma Chakre
First published: September 11, 2020, 10:57 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading