ಕೊರೋನಾ ನೆಪ ಹೇಳಿ ಸೋಮಾರಿಗಳಾದ ಜನ: ಇದುವೇ ನಾನಾ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ

ಇನ್ನು, ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ಅಥವಾ ಪಿಸಿಒಎಸ್ ಹೆಚ್ಚಾಗಿದೆ. 13 ವರ್ಷದ ಬಾಲಕಿಯರಿಂದ ಹಿಡಿದು ಹಿರಿಯ ಮಹಿಳೆಯರವರಗೆ ಅನೇಕರು ಈ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ. ದೈಹಿಕ ವ್ಯಾಯಾಮದ ಕೊರತೆ ಮತ್ತು ಹೆಚ್ಚಿದ ದೇಹತೂಕ ಈ ಸಮಸ್ಯೆಗೆ ಅತಿ ದೊಡ್ಡ ಕಾರಣ ಎನ್ನುತ್ತಾರೆ ಸ್ತ್ರೀ ರೋಗ ತಜ್ಞೆ ಡಾ ವಿದ್ಯಾ ಭಟ್.

news18-kannada
Updated:September 2, 2020, 7:57 AM IST
ಕೊರೋನಾ ನೆಪ ಹೇಳಿ ಸೋಮಾರಿಗಳಾದ ಜನ: ಇದುವೇ ನಾನಾ ಆರೋಗ್ಯ ಸಮಸ್ಯೆಗಳಿಗೆ ಮುಕ್ತ ಆಹ್ವಾನ
ಇತ್ತೀಚೆಗೆ ಕೊರೋನಾವನ್ನು ನಿಯಂತ್ರಿಸುವ ಸಲುವಾಗಿ ಪಂಜಾಬ್ ಮತ್ತು ಹರಿಯಾಣ ರಾಜ್ಯಗಳು ವಾರಾಂತ್ಯದ ಲಾಕ್‌ಡೌನ್ ಮತ್ತು ರಾತ್ರಿ ಕರ್ಫ್ಯೂಗೆ ಮುಂದಾಗಿವೆ.
  • Share this:
ಬೆಂಗಳೂರು(ಸೆ.02): ಕೊರೋನಾ ಲಾಕ್​​ಡೌನ್​​ನಿಂದಾಗಿ ನಮ್ಮೆಲ್ಲರ ಜೀವನಶೈಲಿ ಸಂಪೂರ್ಣ ಏರುಪೇರಾಗ್ಬಿಟ್ಟಿದೆ. ಈ ಏರುಪೇರು ಮೇಲ್ನೋಟಕ್ಕೆ ಏನೂ ಅನ್ನಿಸದೇ ಇರಬಹುದು. ಆದ್ರೆ ನಿಧಾನಕ್ಕೆ ಜನರ ಆರೋಗ್ಯಕ್ಕೆ ದೊಡ್ಡ ಹೊಡೆತ ಕೊಡುತ್ತಿದೆ. ಕಂಟ್ರೋಲ್ ತಪ್ಪಿದ ಡಯಾಬಿಟಿಸ್, ಪಿಸಿಒಎಸ್, ಮಾನಸಿಕ ಒತ್ತಡ ಮುಂತಾದ ಸಮಸ್ಯೆಗಳು ಆರೋಗ್ಯವಾಗಿ ಇದ್ದವರನ್ನು ಹೆಚ್ಚೆಚ್ಚು ಕಾಡ್ತಿದೆ. ಇದಕ್ಕೆಲ್ಲಾ ಕಾರಣ ಕೋವಿಡ್ ಆ? ಅಥವಾ ಆ ನೆಪದಲ್ಲಿ ನಾವೇ ಮೈಮೇಲೆ ಎಳೆದುಕೊಂಡ ಆಪತ್ತುಗಳಾ? ಇಲ್ಲಿದೆ ಫುಲ್ ಡೀಟೆಲ್ಸ್.

ಬೆಳಗ್ಗೆ ಎದ್ದಾಗಿಂದ ರಾತ್ರಿ ಮಲಗೋವರಗೆ ಮುಕ್ಕಾಲು ಪಾಲು ಸಮಯ ಟಿವಿ ಅಥವಾ ಕಂಪ್ಯೂಟರ್ ಮುಂದೆ ಕುಳಿತೇ ಕಾಲ ಕಳೆಯೋದು. ಮೊದ್ಲಾದ್ರೆ ಬೆಳಗ್ಗೆ ಒಂದು ವಾಕಿಂಗ್, ಸಂಜೆ ಫ್ರೆಂಡ್ಸ್ ಮೀಟಿಂಗ್, ವೀಕೆಂಡ್ ಸುತ್ತಾಟ ಅಂತಾದ್ರೂ ಒಂದಷ್ಟು ರುಟೀನ್ ಇತ್ತು. ಏನೂ ಇಲ್ಲದಿದ್ರೆ ಕನಿಷ್ಠ ಮನೆಯಿಂದ ಆಫೀಸಿಗೆ ಹೋಗೋ ಕೆಲಸವಾದ್ರೂ ಇತ್ತು. ಈಗ ಅದೆಲ್ಲದಕ್ಕೂ ಬ್ರೇಕ್ ಬಿದ್ದಿದೆ. ಪರಿಣಾಮವಾಗಿ ಉತ್ತಮ ಆರೋಗ್ಯಕ್ಕೂ ಬ್ರೇಕ್ ಬಿದ್ದಿದೆ.

ಮಧುಮೇಹ ಇದ್ದವ್ರು ರೆಗ್ಯುಲರ್ ಚೆಕಪ್​​ಗಳಿಗೆ, ಫಾಲೊ ಅಪ್​​ಗಳಿಗೆ ವೈದ್ಯರ ಬಳಿ ಹೋಗಲು ಸಾಧ್ಯವಾಗಲಿಲ್ಲ. ಅದೆಷ್ಟೇ ದೂರವಾಣಿ ಮೂಲಕ, ವಿಡಿಯೋ ಕಾಲ್ ಮೂಲಕ ವೈದ್ಯರನ್ನು ಸಂಪರ್ಕಿಸೋದು ಅನೇಕ ಸಂದರ್ಭಗಳಲ್ಲಿ ಸಾಲುವುದಿಲ್ಲ. ಹೀಗಾಗಿ ಮಧುಮೇಹ ಹತೋಟಿ ತಪ್ಪಿರುವ ಪ್ರಕರಣಗಳೇ ಜಾಸ್ತಿ. ಮನೆಯಲ್ಲೇ ಕುಳಿತು, ಅಂಕೆ ಮೀರಿ ಆಹಾರ ಸೇವನೆ ಇಂದ ಬೊಜ್ಜು ಕೂಡಾ ಅನೇಕರಿಗೆ ಹೆಚ್ಚಿದೆ. ಇದು ಅನೇಕ ಆರೋಗ್ಯ ಸಮಸ್ಯೆಗಳನ್ನು ಹುಟ್ಟುಹಾಕಿದೆ ಎನ್ನುವುದು ಸಿನರ್ಜಿ ಕ್ಲಿನಿಕ್ ನ ತಜ್ಞವೈದ್ಯ ಡಾ ವೆಂಕಟಕೃಷ್ಣ ರಾವ್ ಅಭಿಪ್ರಾಯ.

ಇನ್ನು, ಮಹಿಳೆಯರಲ್ಲಿ ಪಾಲಿಸಿಸ್ಟಿಕ್ ಒವೇರಿಯನ್ ಸಿಂಡ್ರೋಮ್ ಅಥವಾ ಪಿಸಿಒಎಸ್ ಹೆಚ್ಚಾಗಿದೆ. 13 ವರ್ಷದ ಬಾಲಕಿಯರಿಂದ ಹಿಡಿದು ಹಿರಿಯ ಮಹಿಳೆಯರವರಗೆ ಅನೇಕರು ಈ ಸಮಸ್ಯೆಯಿಂದ ಹೆಚ್ಚು ಬಳಲುತ್ತಿದ್ದಾರೆ. ದೈಹಿಕ ವ್ಯಾಯಾಮದ ಕೊರತೆ ಮತ್ತು ಹೆಚ್ಚಿದ ದೇಹತೂಕ ಈ ಸಮಸ್ಯೆಗೆ ಅತಿ ದೊಡ್ಡ ಕಾರಣ ಎನ್ನುತ್ತಾರೆ ಸ್ತ್ರೀ ರೋಗ ತಜ್ಞೆ ಡಾ ವಿದ್ಯಾ ಭಟ್.

ಇದನ್ನೂ ಓದಿ: ‘ಕಾಲಕ್ಕೆ ತಕ್ಕಂತೆ ಮಾತು ಬದಲಿಸುವ ಎಚ್​​.ಡಿ ಕುಮಾರಸ್ವಾಮಿ‘ - ಸಚಿವ ಜಗದೀಶ್​​ ಶೆಟ್ಟರ್​​

ಜೀವನಶೈಲಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಸರಿಪಡಿಸಿಕೊಳ್ಳಲು ಸಾಧ್ಯ. ಮನೆಯಿಂದ ಹೊರಹೋಗಿ ವಾಕಿಂಗ್, ಜಿಮ್ ಸಾಧ್ಯವಿಲ್ಲ ಎಂದ ಕೂಡಲೇ ಮನೆಯಲ್ಲಿ ಸುಮ್ಮನೇ ಇದ್ದುಬಿಡಬಾರದು. ಮನೆಯೊಳಗೇ ಆದಷ್ಟು ವ್ಯಾಯಾಮ ಮಾಡಬೇಕು. ತಿನ್ನುವ ಆಹಾರದ ಮೇಲೂ ಹಿಡಿತ ಇರಬೇಕು. ತಪ್ಪದೇ ಔಷಧ ತೆಗೆದುಕೊಳ್ಳುವುದು, ಮನಸ್ಸಿನ ನೆಮ್ಮದಿಗೆ ಧ್ಯಾನ ಮುಂತಾದವನ್ನು ಮಾಡುವುದು ಬಹಳ ಮುಖ್ಯ. ಮನೆಯಲ್ಲೇ ಇದ್ದರೂ ಶಿಸ್ತನ್ನು ರೂಢಿಸಿಕೊಳ್ಳಬೇಕು. ಇದೆಲ್ಲಾ ಮಾಡಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ. ಇಲ್ಲದಿದ್ದರೆ ಆರು ತಿಂಗಳ ಅನಾರೋಗ್ಯ ಸರಿ ಮಾಡಲು ಹೆಚ್ಚಿನ ಸಮಯ ಬೇಕಾಗಬಹುದು ಎನ್ನುವುದು ವೈದ್ಯರ ಕಿವಿಮಾತು.
Published by: Ganesh Nachikethu
First published: September 2, 2020, 7:52 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading