HOME » NEWS » Coronavirus-latest-news » CORONAVIRUS LOCKDOWN OR JANATA CURFEW GOVERNMENT TO DECIDE TOMORROW EVENING MAK

CoronaVirus: ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂ?; ನಾಳೆ ಸಂಜೆ ನಿರ್ಧರಿಸಲಿರುವ ಸರ್ಕಾರ!

ಮೊನ್ನೆ ನಡೆದ ಕ್ಯಾಬಿನೆಟ್​ ಸಭೆಯಲ್ಲೂ ಸಹ ಈ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ಸಿಎಂ ಯಡಿಯೂರಪ್ಪ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಮಿತಿ ಮೀರಿದೆ.

news18-kannada
Updated:May 6, 2021, 8:11 PM IST
CoronaVirus: ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂ?; ನಾಳೆ ಸಂಜೆ ನಿರ್ಧರಿಸಲಿರುವ ಸರ್ಕಾರ!
ಸಾಂದರ್ಭಿಕ ಚಿತ್ರ.
  • Share this:
ಬೆಂಗಳೂರು (ಮೇ 06); ರಾಜ್ಯದಲ್ಲಿ ಕೊರೋನಾ ಕೇಕೆ ಮುಂದುವರೆದಿದ್ದು, ಸೋಂಕಿತರ ಸಂಖ್ಯೆ ದಿನೇ ದಿನೇ ಅಧಿಕವಾಗುತ್ತಲೇ ಇದೆ. ಈಗಾಗಲೇ ಜನತಾ ಕರ್ಫ್ಯೂ ಚಾಲ್ತಿಯಲ್ಲಿದೆ. ಆದರೂ ಕೊರೋನಾ ಸೋಂಕಿತರ ಸಂಖ್ಯೆ ಮಾತ್ರ ಇಳಿಮುಖವಾಗುವಂತೆ ಕಾಣುತ್ತಿಲ್ಲ. ಹೀಗಾಗಿ ರಾಜ್ಯಾದ್ಯಂತ ಲಾಕ್​ಡೌನ್ ಮಾಡಬೇಕು ಎಂಬ ಕೂಗು ಕೇಳಿಬರುತ್ತಿದೆ. ಮೊನ್ನೆ ನಡೆದ ಕ್ಯಾಬಿನೆಟ್​ ಸಭೆಯಲ್ಲೂ ಸಹ ಈ ಬಗ್ಗೆ ಚರ್ಚೆ ಮಾಡಲಾಗಿತ್ತಾದರೂ ಸಿಎಂ ಯಡಿಯೂರಪ್ಪ ಯಾವುದೇ ನಿರ್ಧಾರ ತೆಗೆದುಕೊಂಡಿರಲಿಲ್ಲ. ಆದರೆ, ಇದೀಗ ರಾಜ್ಯದಲ್ಲಿ ಸೋಂಕಿತರ ಹಾಗೂ ಸಾವಿನ ಸಂಖ್ಯೆ ಮಿತಿ ಮೀರಿದೆ. ಹೀಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ನಾಳೆ ಸಂಜೆ 6 ಗಂಟೆಗೆ ಮಹತ್ವದ ಸಭೆ ಕರೆದಿದ್ದಾರೆ. ಈ ಸಭೆಯಲ್ಲಿ ಕೋವಿಡ್ ಉಸ್ತುವಾರಿ ಸಚಿವರು, ಹಿರಿಯ ಅಧಿಕಾರಿಗಳು ಭಾಗವಹಿಸಲಿದ್ದು, ಚರ್ಚೆಯ ನಂತರ ಲಾಕ್​ಡೌನ್ ಅಥವಾ ಜನತಾ ಕರ್ಫ್ಯೂವನ್ನು ಮುಂದುವರೆಸುವುದಾ? ಎಂದು ಸಿಎಂ ತಿರ್ಮಾನಿಸಲಿದ್ದಾರೆ ಎಂದು ತಿಳಿದುಬಂದಿದೆ.

ತಜ್ಞರು ಈಗಾಗಲೇ ಕೊರೋನಾ ನಿಯಂತ್ರಣಕ್ಕೆ ಲಾಕ್​ಡೌನ್​ ಒಂದೇ ಪರಿಹಾರ ಎಂದು ವರದಿ ನೀಡಿದ್ದಾರೆ. ಲಾಕ್ ಡೌನ್ ನಿಂದ ಮಾತ್ರ ಕೋವಿಡ್ ಚೈನ್ ಲಿಂಕ್ ಕಟ್ ಮಾಡಬಹುದು. ಮುಂಬೈನಲ್ಲಿ ಲಾಕ್ ಡೌನ್ ನಿಂದ ಕೋವಿಡ್ ಕಂಟ್ರೋಲ್ ಗೆ ಬಂದಿದೆ. ಬೆಂಗಳೂರಿನಲ್ಲಿ ಸೋಂಕಿತರ ಸಂಖ್ಯೆ ಸಾವಿನ ಸಂಖ್ಯೆ ಮಿತಿ ಮೀರುತ್ತಿದೆ. ಹತ್ತು ಜಿಲ್ಲೆಗಳಲ್ಲಿ ಕೊರೋನಾ ಕಂಟ್ರೋಲ್ ಗೆ ಬರುತ್ತಿಲ್ಲ. ಈ ನಡುವೆ ಜನತಾ ಕರ್ಫ್ಯೂ ವರ್ಕೌಟ್ ಆಗಿಲ್ಲ.

ಆಕ್ಸಿಜನ್ ಕೊರತೆಯಿಂದಲೆ ಹೆಚ್ಚು ಸಾವುಗಳಾಗುತ್ತಿವೆ. ಬೆಡ್ , ಐಸಿಯು, ವೆಂಟಿಲೇಟರ್ ಸಮಸ್ಯೆ ದಿನೇ ದಿನೇ ದ್ವಿಗುಣವಾಗುತ್ತಿದೆ. ಸಿಎಂ ಮನೆ ಮುಂದೆ , ವಿಧಾನಸೌಧದ ಮುಂದೆ ಕೋವಿಡ್ ಸೋಂಕಿತರು ಬೆಡ್ ವ್ಯವಸ್ಥೆ ಮಾಡಿ ಎಂದು ಬರುತ್ತಿದ್ದಾರೆ. ಇಷ್ಟೆಲ್ಲ ಸಮಸ್ಯೆ ಇದೆ. ಹೀಗಾಗಿ ಈ ಎಲ್ಲಾ ಸಮಸ್ಯೆಗೆ ಲಾಕ್​ಡೌನ್ ಒಂದೇ ಪರಿಹಾರ ಎಂದು ತಜ್ಞರು ವರದಿ ನೀಡಿದ್ದಾರೆ. ಹೀಗಾಗಿ ನಾಳೆ ಸಚಿವರ ಹಾಗೂ ಅಧಿಕಾರಿಗಳ ಸಭೆ ಕರೆದಿರುವ ಸಿಎಂ ಜನತಾ ಕರ್ಫ್ಯೂವನ್ನು ಮತ್ತಷ್ಟು ಬಿಗಿಗೊಳಿಸೋದಾ ? ಅಥವಾ 12 ನೇ ತಾರೀಖಿನ ಬಳಿಕ ಲಾಕ್ ಡೌನ್ ಘೋಷಣೆ ಮಾಡೋದಾ? ಎಂದು ನಿರ್ಧರಿಸಲಿದ್ದಾರೆ ಎಂದು ತಿಳಿದುಬಂದಿದೆ.

ಈ ನಡುವೆ ರಾಜ್ಯ ರಾಜಧಾನಿ ಬೆಂಗಳೂರು ಕೊರೋನಾ ಭೀಕರತೆಯಿಂದಾಗಿ ಅಕ್ಷರಶಃ ಸ್ಮಶಾನದಂತೆ ಭಾಸವಾಗುತ್ತಿದೆ. ಪ್ರತಿದಿನ ಸಾವಿರಾರು ಜನ ಸೋಂಕಿಗೆ ತುತ್ತಾಗುತ್ತಿದ್ದರೆ, ನೂರಾರು ಜನ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಬೆಂಗಳೂರಿನ ಎಲ್ಲಾ ವಾರ್ಡ್​​ ಸ್ಮಶಾನಗಳು ಇದೀಗ 24 ಗಂಟೆ ಹೆಣ ಸುಡುವ ಕೆಲಸದಲ್ಲಿ ಬ್ಯುಸಿ ಆಗಿವೆ. ಬೆಂಗಳೂರಿನಲ್ಲಿ ವಿದ್ಯುತ್​ ಚಿತಾಗಾರಗಳಿಗಿಂತ ಸೌದೆಯಲ್ಲಿ ಅಂತ್ಯ ಸಂಸ್ಕಾರ ಮಾಡುವ ಚಿತಾಗಾರಗಳ ಸಂಖ್ಯೆಯೇ ಅಧಿಕ. ಹೀಗಾಗಿ, ಹೆಣಗಳ ಅಂತ್ಯ ಸಂಸ್ಕಾರಕ್ಕೆ ಇದೀಗ ಸೌದೆಗಳ ಅಭಾವ ಎದುರಾಗಿದ್ದು, ಸೌದೆಯನ್ನು ಹೊಂಚುವುದೇ ಇದೀಗ ಬಿಬಿಎಂಪಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ: Corona Death: ಬೆಂಗಳೂರಿನಲ್ಲಿ ಕೊರೋನಾ ಮರಣ ಮೃದಂಗ; ಶವ ಸಂಸ್ಕಾರಕ್ಕೆ ಸೌದೆ ಅಭಾವ!

ಲೆಕ್ಕಾಚಾರದಂತೆ ಪ್ರತಿ ವ್ಯಕ್ತಿಯ ಮೃತದೇಹವನ್ನು ಸುಡಲು ಸುಮಾರು 1500 ಕೆಜಿ ಸೌದೆ ಅಗತ್ಯವಿದೆ. ಇದೀಗ ಬೆಂಗಳೂರಿನಲ್ಲಿ ಹೆಣ ಸುಡಲೆಂದು ಸಂಗ್ರಹಿಸಿದ್ದ ಎಲ್ಲಾ ಸೌದೆಗಳು ಖಾಲಿಯಾಗಿದೆ. ಈಗಾಗಲೇ ಸ್ಮಶಾನಗಳ ಎದುರು ಹೆಣಗಳ ರಾಶಿ ಸಾಲು ಸಾಲಾಗಿದ್ದು, ಈ ನಡುವೆ ಬೆಂಗಳೂರಿನಲ್ಲಿ ಕೊರೋನಾ ಹೆಣಗಳನ್ನು ಸುಡಲು ಸೌದೆ ಅಭಾವ ಸೃಷ್ಟಿಯಾಗಿರುವುದು ಹಾಗೂ ನಿತ್ಯ ಸೌದೆ ಸಂಗ್ರಹ ಮಾಡುವುದು ಬಿಬಿಎಂಪಿಗೆ ಭಾರಿ ತಲೆನೋವಿಗೆ ಕಾರಣವಾಗಿದೆ ಎನ್ನಲಾಗುತ್ತಿದೆ.
Youtube Video
ಪ್ರತಿ ಶವಗಾರದಲ್ಲಿ ನಿತ್ಯ 40ಕ್ಕಿಂತ ಹೆಚ್ಚು ಶವಗಳನ್ನು ಸುಡಲಾಗುತ್ತಿದೆ. ಅಲ್ಲದೆ, ಈ ಸಂಖ್ಯೆ ದಿನದಿಂದ ದಿನಕ್ಕೆ ಅಧಿಕವಾಗುತ್ತೇ ಇದೆ. ಹೀಗಾಗಿ ಶವ ಸುಡಲು ಸೌದೆಗೂ ಹಾಹಾಕಾರ ಶುರುವಾಗುತ್ತಾ? ಪರಿಸ್ಥಿತಿ ನಿಭಾಯಿಸಲು ಬಿಬಿಎಂಪಿ ಹೆಚ್ಚು ಮರಗಳನ್ನು ಕಡಿಯುತ್ತಾ? ಎಂಬ ಪ್ರಶ್ನೆಗಳು ಇದೀಗ ಉದ್ಭವವಾಗಿದೆ.
Published by: MAshok Kumar
First published: May 6, 2021, 8:03 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories