Coronavirus Karnataka Updates: ರಾಜ್ಯದಲ್ಲಿಂದು 5072 ಕೊರೋನಾ ಪ್ರಕರಣಗಳು ಪತ್ತೆ, 72 ಬಲಿ; 90 ಸಾವಿರ ದಾಟಿದ ಸೋಂಕಿತರ ಸಂಖ್ಯೆ

ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ. 37.1ರಷ್ಟು ಇದ್ದರೆ, ಬೆಂಗಳೂರಿನಲ್ಲಿ ಶೇ. 24.7 ರಷ್ಟು ಇದೆ. ಅದೇ ರೀತಿಯಾಗಿ ರಾಜ್ಯದಲ್ಲಿ ಮರಣ ಪ್ರಮಾಣ ಶೇ. 1.97 ಇದ್ದರೆ, ಬೆಂಗಳೂರಿನಲ್ಲಿ ಶೇ. 1.98 ರಷ್ಟು ಇದೆ.

news18-kannada
Updated:July 25, 2020, 7:11 PM IST
Coronavirus Karnataka Updates: ರಾಜ್ಯದಲ್ಲಿಂದು 5072 ಕೊರೋನಾ ಪ್ರಕರಣಗಳು ಪತ್ತೆ, 72 ಬಲಿ; 90 ಸಾವಿರ ದಾಟಿದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜು.25): ರಾಜ್ಯದಲ್ಲಿ ಕೊರೋನಾ ರಣಕೇಕೆ ಮುಂದುವರೆದಿದ್ದು, ಈಗ ದಿನವೊಂದಕ್ಕೆ ಸರಾಸರಿ 5 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗುತ್ತಿವೆ. ಇಂದು ಕರ್ನಾಟಕದಲ್ಲಿ ಒಟ್ಟು 5072 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮಾರಕ ಕೊರೋನಾಗೆ ಇಂದು ರಾಜ್ಯದಲ್ಲಿ 72 ಮಂದಿ ಬಲಿಯಾಗಿದ್ದಾರೆ.

ಇಂದು 2403 ಮಂದಿ ಕೊರೋನಾದಿಂದ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆ ಮೂಲಕ ಗುಣಮುಖರಾದವರ ಸಂಖ್ಯೆ 33,750ಕ್ಕೆ ಏರಿಕೆಯಾಗಿದೆ. ರಾಜ್ಯದಲ್ಲಿ ಒಟ್ಟು ಕೊರೋನಾ ಪ್ರಕರಣಗಳ ಸಂಖ್ಯೆ 90942ಕ್ಕೆ ಏರಿಕೆಯಾಗಿದೆ. ಅವುಗಳಲ್ಲಿ 55,388 ಸಕ್ರಿಯ ಪ್ರಕರಣಗಳಾಗಿವೆ.

ಹಲೋ ಸರ್ ನಿಮಗೆ ಪಾಸಿಟಿವ್ ಇದೆ ಎಲ್ಲಿದ್ದೀರಿ ? ಹೀಗಂತ ಡಿಸಿಗೆ ಫೋನ್ ಮಾಡಿದ ಸಿಬ್ಬಂದಿ; ಜಿಲ್ಲಾಧಿಕಾರಿ ನಂಬರ್ ಕೊಟ್ಟು ಕಿತಾಪತಿ ಮಾಡಿದ ಸೋಂಕಿತ

ಇನ್ನು ರಾಷ್ಟ್ರ ರಾಜಧಾನಿ ಬೆಂಗಳೂರಿನಲ್ಲಿ ಇಂದು ಹೊಸದಾಗಿ 2036 ಪ್ರಕರಣಗಳು ಪತ್ತೆಯಾಗಿವೆ. ಇನ್ನು, ಸಿಲಿಕಾನ್ ಸಿಟಿಯಲ್ಲಿ ಇಂದು ಕೊರೋನಾದಿಂದ ಸಾವನ್ನಪ್ಪಿದವರು 30 ಮಂದಿ. ಬೆಂಗಳೂರಿನಲ್ಲಿ ಕೊರೋನಾದಿಂದ ಗುಣಮುಖರಾಗಿ ಇಂದು 686 ಮಂದಿ ಡಿಸ್ಚಾರ್ಜ್ ಆಗಿದ್ದಾರೆ. ನಗರದಲ್ಲಿ 31,881 ಕೊರೋನಾ ಸಕ್ರಿಯ ಪ್ರಕರಣಗಳಿವೆ.

ಇನ್ನು, ರಾಜ್ಯದಲ್ಲಿ ಚೇತರಿಕೆ ಪ್ರಮಾಣ ಶೇ. 37.1ರಷ್ಟು ಇದ್ದರೆ, ಬೆಂಗಳೂರಿನಲ್ಲಿ ಶೇ. 24.7 ರಷ್ಟು ಇದೆ. ಅದೇ ರೀತಿಯಾಗಿ ರಾಜ್ಯದಲ್ಲಿ ಮರಣ ಪ್ರಮಾಣ ಶೇ. 1.97 ಇದ್ದರೆ, ಬೆಂಗಳೂರಿನಲ್ಲಿ ಶೇ. 1.98 ರಷ್ಟು ಇದೆ.
Published by: Latha CG
First published: July 25, 2020, 7:00 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading