Coronavirus India Updates: ದೇಶದಲ್ಲಿ ಕೊರೋನಾ ಹಾವಳಿ; ಒಂದೇ ದಿನ 18,522 ಕೇಸ್​​, ಐದೂವರೆ ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ

ಸೋಮವಾರ 418 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ 16,893ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 3,34,822 ಜನ ಮಾತ್ರ. ದೇಶದಲ್ಲಿ ಇನ್ನೂ 2,15,125 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

news18-kannada
Updated:June 30, 2020, 10:52 AM IST
Coronavirus India Updates: ದೇಶದಲ್ಲಿ ಕೊರೋನಾ ಹಾವಳಿ; ಒಂದೇ ದಿನ 18,522 ಕೇಸ್​​, ಐದೂವರೆ ಲಕ್ಷದ ಗಡಿ ದಾಟಿದ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜೂ.30): ಕೊರೋನಾ ಸೋಂಕು ಹರಡುವಿಕೆ ಬಹಳ‌ ಕಡಿಮೆ ಇದ್ದಾಗ ಲಾಕ್ಡೌನ್ ಜಾರಿ ಮಾಡಬೇಕಿತ್ತು. ಸೋಂಕು ಹರಡುವಿಕೆ ಹೆಚ್ಚಾದಾಗ ನಾಮಕಾವಸ್ತೆಗೆ ಮಾತ್ರ ಲಾಕ್ಡೌನ್ ಜಾರಿಗೊಳಿಸಿದ ಪರಿಣಾಮ ಅನ್​​ಲಾಕ್ 2 ಅನುಷ್ಠಾನಕ್ಕೆ ಬರುವ ವೇಳೆಗೆ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಐದೂವರೆ ಲಕ್ಷದ ಗಡಿ ದಾಟಿದೆ.

ಭಾರತದಲ್ಲಿ ಪ್ರತಿದಿನ ಜೂನ್ 11ರಿಂದ 10 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 12ತಾರೀಖಿನಿಂದ 11 ಸಾವಿರಕ್ಕೂ ಹೆಚ್ಚು‌ ಪ್ರಕರಣಗಳು, ಜೂನ್ 17ರಿಂದ 12 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 18ರಿಂದ 13 ಸಾವಿರಕ್ಕೂ‌ ಹೆಚ್ಚು‌ ಪ್ರಕರಣಗಳು, ಜೂನ್ 19ರಿಂದ 14 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 23ರಿಂದ 15 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 24ರಿಂದ 16 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್  25ರಿಂದ17 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜೂನ್ 26ರಿಂದ 18 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗುತ್ತಿದ್ದವು. ಇದೇ ಟ್ರೆಂಡ್ ಮುಂದುವರೆದಿದ್ದು ಜೂನ್ 29ರಂದು 18,522 ಪ್ರಕರಣಗಳು ಕಂಡುಬಂದಿವೆ. ದೇಶದ ಕೊರೋನಾ ಪೀಡಿತರ ಸಂಖ್ಯೆ 5,66,840ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಸೋಮವಾರ 418 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ 16,893ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 3,34,822 ಜನ ಮಾತ್ರ. ದೇಶದಲ್ಲಿ ಇನ್ನೂ 2,15,125 ಜನರಲ್ಲಿ ಕೊರೋನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Vizag Gas Leak: ವಿಶಾಖಪಟ್ಟಣದ ವೈಜಾಗ್​ನಲ್ಲಿ ಮತ್ತೆ ಗ್ಯಾಸ್ ಸೋರಿಕೆ; ಇಬ್ಬರು ಸಾವು, ನಾಲ್ವರ ಸ್ಥಿತಿ ಗಂಭೀರ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಮೇ 10ರಿಂದ  ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಪ್ರತಿನಿತ್ಯ ನಾಲ್ಕು ಸಾವಿರಕ್ಕಿಂತ ಹೆಚ್ಚಾಗುತ್ತಲೇ ಇದೆ.‌ ಮೇ 10ರಂದು 4,213 ಜನರಿಗೆ, ಮೇ 11ರಂದು 3,064 ಮಂದಿಗೆ, ಮೇ 12 ರಂದು 3,525 ಜನರಿಗೆ, ಮೇ13ರಂದು 3,722 ಮಂದಿಗೆ ಹಾಗೂ ಮೇ 14ರಂದು 3,967 ಜನರಿಗೆ, ಮೇ 15ರಂದು 3,970 ಮಂದಿಗೆ, ಮೇ 16ರಂದು 4,987 ಜನರಿಗೆ, ಮೇ 17ರಂದು 5,242, ಮೇ 18ರಂದು 4,970, ಮೇ 19ರಂದು 5,611, ಮೇ 20ರಂದು 5,609, ಮೇ 21ರಂದು 6,088, ಮೇ 22ರಂದು 6,654, ಮೇ 23ರಂದು 6,767, ಮೇ 24ರಂದು 6,977, ಮೇ 25ರಂದು 6,535, ಮೇ 26ರಂದು 6,387, ಮೇ 27ರಂದು 6,566, ಮೇ 28ರಂದು 7,466, ಮೇ 29ರಂದು 7,964, ಮೇ 30ರಂದು 8,380, ಮೇ 31ರಂದು 8,392, ಜೂನ್ 1ರಂದು 8,171, ಜೂನ್ 2ರಂದು 8,909, ಜೂನ್ 3ರಂದು 9,304, ಜೂನ್ 4ರಂದು 9,851, ಜೂನ್ 5ರಂದು 9,887, ಜೂನ್ 6ರಂದು 9,971, ಜೂ 7ರಂದು 9,983, ಜೂನ್ 8ರಂದು 9987, ಜೂನ್‌ 9ರಂದು 9,985, ಜೂನ್ 10ರಂದು 9,996, ಜೂನ್ 11ರಂದು 10,956, ಜೂನ್ 12ರಂದು‌ 11,458, ಜೂನ್ 13ರಂದು 11,929, ಜೂನ್ 14ರಂದು 11,502, ಜೂನ್ 15ರಂದು 10,667, ಜೂನ್ 16ರಂದು 10,974, ಜೂನ್ 17ರಂದು 12,881, ಜೂನ್‌ 18ರಂದು 13,586, ಜೂನ್ 19ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22ರಂದು 14,933, ಜೂನ್ 23ರಂದು 15,968, ಜೂನ್ 24ರಂದು‌ 16,922, ಜೂನ್ 25ರಂದು 17,296, ಜೂನ್ 26ರಂದು 18,552, ಜೂನ್ 27ರಂದು 19,906, ಜೂನ್ 28ರಂದು 19,459 ಹಾಗೂ ಜೂನ್ 29ರಂದು 18,522 ಹೊಸ ಪ್ರಕರಣಗಳು ಕಂಡುಬಂದಿವೆ.
First published: June 30, 2020, 10:50 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading