Coronavirus India: ಭಾರತದಲ್ಲಿ 30 ಲಕ್ಷ ಸಮೀಪಿಸಿದ ಕೊರೋನಾ ಸೋಂಕಿತರ ಸಂಖ್ಯೆ

ಭಾರತದಲ್ಲಿ ಶುಕ್ರವಾರ 945 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 55 ಸಾವಿರದ ಗಡಿ‌ ದಾಟಿದ್ದು 55,794ಕ್ಕೆ ಏರಿಕೆಯಾಗಿದೆ.

news18-kannada
Updated:August 22, 2020, 10:44 AM IST
Coronavirus India: ಭಾರತದಲ್ಲಿ 30 ಲಕ್ಷ ಸಮೀಪಿಸಿದ ಕೊರೋನಾ ಸೋಂಕಿತರ ಸಂಖ್ಯೆ
ಸಾಂದರ್ಭಿಕ ಚಿತ್ರ.
  • Share this:
ನವದೆಹಲಿ (ಆ. 22): ಕೊರೊನಾ ಸೋಂಕು ಹರಡುವಿಕೆ ಈಗ ಶರವೇಗ ಪಡೆದುಕೊಂಡಿದೆ. ಕೊರೊನಾ ಕಡಿಮೆ ಇದ್ದಾಗ ಲಾಕ್ಡೌನ್ ಮಾಡಿ ತೀವ್ರಗೊಂಡಾಗ‌ ಅನ್ ಲಾಕ್ ಮಾಡಿದ ಪರಿಣಾಮ ದೇಶದಲ್ಲಿ ಕೋರೊನಾ ಸೋಂಕು ಪೀಡಿತರ ಸಂಖ್ಯೆ 30 ಲಕ್ಷ‌ ಗಡಿ ಸಮೀಪ ಧಾವಿಸಿದೆ.

ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20ರಿಂದ 37 ಸಾವಿರಕ್ಕೂ ಪ್ರಕರಣಗಳು ಗೋಚರಿಸಿದ್ದವು. ಬಳಿಕ ಆಗಸ್ಟ್ 1ರಂದು 54,736 ಪ್ರಕರಣಗಳು, ಆಗಸ್ಟ್ 2ರಂದು 52,972 ಪ್ರಕರಣಗಳು, ಆಗಸ್ಟ್ 3ರಂದು 52,050 ಪ್ರಕರಣಗಳು, ಆಗಸ್ಟ್ 4ರಂದು 52,509 ಪ್ರಕರಣಗಳು ಮತ್ತು ಆಗಸ್ಟ್ 5ರಂದು 56,282 ಕಾಣಿಸಿಕೊಂಡಿದ್ದವು.‌ ನಂತರ 60 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿ ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537 ಪ್ರಕರಣಗಳು, ಆಗಸ್ಟ್ 8ರಂದು 64,399 ಪ್ರಕರಣಗಳು ದಾಖಲಾಗಿವೆ.

ಆಗಸ್ಟ್ 9ರಂದು 62,064 ಪ್ರಕರಣಗಳು, ಆಗಸ್ಟ್ 10ರಂದು 53,601 ಕೊರೊನಾ ಪ್ರಕರಣಗಳು ಆಗಸ್ಟ್ 11ರಂದು 60,963 ಪ್ರಕರಣಗಳು, ಆಗಸ್ಟ್ 12ರಂದು 66,999 ಪ್ರಕರಣಗಳು, ಆಗಸ್ಟ್ 13ರಂದು 64,553 ಪ್ರಕರಣಗಳು, ಆಗಸ್ಟ್ 14ರಂದು 65,002 ಪ್ರಕರಣಗಳು, ಆಗಸ್ಟ್ 15ರಂದು 63,489 ಪ್ರಕರಣಗಳು, ಆಗಸ್ಟ್ 16ರಂದು 57,982 ಪ್ರಕರಣಗಳು, ಆಗಸ್ಟ್ 17ರಂದು 55,079 ಪ್ರಕರಣಗಳು, ಆಗಸ್ಟ್‌ 18ರಂದು 64,531 ಪ್ರಕರಣಗಳು, ಆಗಸ್ಟ್‌ 19ರಂದು 69,652 ಪ್ರಕರಣಗಳು ಹಾಗೂ ಆಗಸ್ಟ್ 20ರಂದು 68,898 ಪ್ರಕರಣಗಳು ವರದಿಯಾಗಿದ್ದವು. ಆಗಸ್ಟ್ 21ರಂದು 69,878 ಪ್ರಕರಣಗಳು ಪತ್ತೆಯಾಗಿದ್ದು ದೇಶದ ಕೊರೊನಾ ಪೀಡಿತರ ಸಂಖ್ಯೆ 29,75,702ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Karnataka Flood: ಕೃಷ್ಣಾ ನದಿ ಪ್ರವಾಹ; ಬಾಗಲಕೋಟೆಯ ಮುತ್ತೂರು ನಡುಗಡ್ಡೆಯಲ್ಲಿ ಸಿಲುಕಿದ ಹಸುಗಳು

ಇದಲ್ಲದೆ ಶುಕ್ರವಾರ 945 ಮಂದಿ ಕೊರೊನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೊನಾದಿಂದ ಮೃತಪಟ್ಟವರ ಸಂಖ್ಯೆ 55 ಸಾವಿರದ ಗಡಿ‌ ದಾಟಿದ್ದು 55,794ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 22,22,578 ಜನ ಮಾತ್ರ. ದೇಶದಲ್ಲಿ ಇನ್ನೂ 6,97,330 ಜನರಲ್ಲಿ ಕೊರೊನಾ ಸಕ್ರಿಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಆಗಸ್ಟ್ 1ರಂದು 54,736, ಆಗಸ್ಟ್ 2ರಂದು 52,972, ಆಗಸ್ಟ್ 3ರಂದು 52,050, ಆಗಸ್ಟ್ 4ರಂದು 52,509, ಆಗಸ್ಟ್ 5ರಂದು 56,282, ಆಗಸ್ಟ್ 6ರಂದು 62,538, ಆಗಸ್ಟ್ 7ರಂದು 61,537, ಆಗಸ್ಟ್ 8ರಂದು 64,399, ಆಗಸ್ಟ್ 9ರಂದು 62,064, ಆಗಸ್ಟ್ 10ರಂದು  53,601, ಆಗಸ್ಟ್ 11ರಂದು 60,963, ಆಗಸ್ಟ್ 12ರಂದು 66,999, ಆಗಸ್ಟ್ 13ರಂದು 64,553, ಆಗಸ್ಟ್ 14ರಂದು 65,002, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531, ಆಗಸ್ಟ್ 19ರಂದು 69,652, ಆಗಸ್ಟ್ 20ರಂದು 68,898 ಹಾಗೂ ಆಗಸ್ಟ್ 21ರಂದು 69,878 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: August 22, 2020, 10:42 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading