Coronavirus India: ಭಾರತದಲ್ಲಿ ಮುಂದುವರೆದ ಕೊರೋನಾ ಉಪಟಳ; ಒಂದೇ ದಿನ 95,735 ಕೇಸ್​ಗಳು ಪತ್ತೆ

India Coronavirus Updates: ಬುಧವಾರ 1,172 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 75 ಸಾವಿರದ ಗಡಿ‌ ದಾಟಿದ್ದು 75,062ಕ್ಕೆ ಏರಿಕೆಯಾಗಿದೆ.

news18-kannada
Updated:September 10, 2020, 12:00 PM IST
Coronavirus India: ಭಾರತದಲ್ಲಿ ಮುಂದುವರೆದ ಕೊರೋನಾ ಉಪಟಳ; ಒಂದೇ ದಿನ 95,735 ಕೇಸ್​ಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ, ಸೆ. 10: ದೇಶದಲ್ಲಿ ಕೊರೋನಾ ಸೋಂಕು ಹರಡುವಿಕೆ ಸುನಾಮಿ ಸ್ವರೂಪ ಪಡೆದುಕೊಂಡಿದ್ದು ಅತಿ ಹೆಚ್ಚು ಕೊರೊನಾ ಸೋಂಕು ಪೀಡಿತರರಿರುವ ದೇಶಗಳ ಪಟ್ಟಿಯಲ್ಲಿ ಭಾರತವು ಬ್ರಿಜಿಲ್ ಅನ್ನು ಹಿಂದಿಕ್ಕಿ ಎರಡನೇ ಸ್ಥಾನ ತಲುಪಿದೆ. ಅದೂ ಅಲ್ಲದೆ ಈಗ ದೇಶದ ಕೊರೊನಾ ಸೋಂಕು ಪೀಡಿತರ ಸಂಖ್ಯೆ 44 ಲಕ್ಷದ ಗಡಿ ದಾಟಿದೆ. ಜೊತೆಗೆ ದಿನವೊಂದರಲ್ಲಿ 95 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಕಾಣಿಸಿಕೊಳ್ಳಲು ಆರಂಭಿಸಿದೆ. ದೇಶದಲ್ಲಿ ಆಗಸ್ಟ್ 6 ನಂತರ ಪ್ರತಿ ದಿನ 60 ಸಾವಿರಕ್ಕೂ ಹೆಚ್ಚು ಕೊರೋನಾ ಸೋಂಕು ಪ್ರಕರಣಗಳು ದಾಖಲಾಗುವ ಟ್ರೆಂಡ್ ಶುರುವಾಗಿತ್ತು. ಆಗಸ್ಟ್‌ 19ರ ನಂತರ ಪ್ರತಿದಿನ ಸುಮಾರು70 ಸಾವಿರ ಪ್ರಕರಣಗಳು ಕಾಣಿಸಿಕೊಳ್ಳಲಾರಂಭಿಸಿದವು. ಆಗಸ್ಟ್ 26ರಿಂದ 75 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಿದ್ದವು.‌

ಸೆಪ್ಟೆಂಬರ್ 2ರಿಂದ 80 ಸಾವಿರಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗುತ್ತಿದ್ದವು. ಸೆಪ್ಟೆಂಬರ್ 5ರಿಂದ ಪ್ರತಿದಿನ 90 ಸಾವಿರಕ್ಕೂ ಹೆಚ್ಚು ಪ್ರಕರಣಗಳು ವರದಿಯಾಗಲು ಆರಂಭಿಸಿದವು. ಸೆಪ್ಟೆಂಬರ್ 7ರಂದು ಸ್ವಲ್ಪ ಕಡಿಮೆಯಾಗಿ 75,809 ಪ್ರಕರಣಗಳು ಮಾತ್ರ ವರದಿಯಾಗಿದ್ದವು. ಸೆಪ್ಟೆಂಬರ್  8ರಂದು 89,706 ಪ್ರಕರಣಗಳು ಕಂಡುಬಂದಿದ್ದವು. ಆದರೆ, ಸೆಪ್ಟೆಂಬರ್ 9ರಂದು ದಿಢೀರನೆ 95,735 ಪ್ರಕರಣಗಳು ಪತ್ತೆಯಾಗಿವೆ. ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 44,65,864ಕ್ಕೆ ಏರಿಕೆಯಾಗಿದೆ.

ಇದನ್ನೂ ಓದಿ: Karnataka Reservoir Water Level: ರಾಜ್ಯಾದ್ಯಂತ ಭಾರೀ ಮಳೆ; ಕರ್ನಾಟಕದ ಜಲಾಶಯಗಳ ಇಂದಿನ ನೀರಿನ ಮಟ್ಟ ಹೀಗಿದೆ

ಇದಲ್ಲದೆ ಬುಧವಾರ 1,172 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 75 ಸಾವಿರದ ಗಡಿ‌ ದಾಟಿದ್ದು 75,062ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೊನಾದಿಂದ ಗುಣ ಆದವರು 34,71,784 ಜನ ಮಾತ್ರ. ಇನ್ನೂ ಸಕ್ರಿಯವಾಗಿರುವ ಪ್ರಕರಣಗಳ ಸಂಖ್ಯೆ 9,19,018 ಎಂದು ಕೇಂದ್ರ ಆರೋಗ್ಯ ಇಲಾಖೆಯು ಮಾಹಿತಿ ಬಿಡುಗಡೆ ಮಾಡಿದೆ.

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ, ಆಗಸ್ಟ್ 15ರಂದು 63,489, ಆಗಸ್ಟ್ 16ರಂದು 57,982, ಆಗಸ್ಟ್ 17ರಂದು 55,079, ಆಗಸ್ಟ್ 18ರಂದು 64,531, ಆಗಸ್ಟ್ 19ರಂದು 69,652, ಆಗಸ್ಟ್ 20ರಂದು 68,898, ಆಗಸ್ಟ್ 21ರಂದು 69,878, ಆಗಸ್ಟ್ 22ರಂದು 69,239, ಆಗಸ್ಟ್ 23ರಂದು 61,408, ಆಗಸ್ಟ್‌ 24ರಂದು 60,975, ಆಗಸ್ಟ್ 25ರಂದು 67,151, ಆಗಸ್ಟ್ 26ರಂದು 75,760, ಆಗಸ್ಟ್ 27ರಂದು 77,266, ಆಗಸ್ಟ್ 28ರಂದು 76,472, ಆಗಸ್ಟ್ 29ರಂದು 78,761, ಆಗಸ್ಟ್ 30ರಂದು 78,512, ಆಗಸ್ಟ್ 31ರಂದು 69,921, ಸೆಪ್ಟೆಂಬರ್ 1ರಂದು 78,357, ಸೆಪ್ಟೆಂಬರ್ 2ರಂದು 83,883, ಸೆಪ್ಟೆಂಬರ್ 4ರಂದು 86,432, ಸೆಪ್ಟೆಂಬರ್ 5ರಂದು 90,633, ಸೆಪ್ಟೆಂಬರ್ 6ರಂದು 90,802, ಸೆಪ್ಟೆಂಬರ್ 7ರಂದು 75,809, ಸೆಪ್ಟೆಂಬರ್ 8ರಂದು 89,706 ಹಾಗೂ ಸೆಪ್ಟೆಂಬರ್ 9ರಂದು 95,735 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: Sushma Chakre
First published: September 10, 2020, 11:59 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading