Coronavirus India Update : ದೇಶದಲ್ಲಿ ಪ್ರತಿ ದಿನ ಸುಮಾರು 50 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭ

ಜುಲೈ 23 ರಂದು ಸುಮಾರು 50 ಸಾವಿರ ಪ್ರಕರಣಗಳು ಕಂಡು ಬಂದಿವೆ.‌ ಗುರುವಾರ 49,310 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 12,87,945ಕ್ಕೆ ಏರಿಕೆಯಾಗಿದೆ.

news18-kannada
Updated:July 24, 2020, 11:18 AM IST
Coronavirus India Update : ದೇಶದಲ್ಲಿ ಪ್ರತಿ ದಿನ ಸುಮಾರು 50 ಸಾವಿರ ಕೊರೋನಾ ಪ್ರಕರಣಗಳು ಪತ್ತೆಯಾಗಲು ಆರಂಭ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.24): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​ಡೌನ್​​ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 12 ಲಕ್ಷದ ಗಡಿ ದಾಟಿದೆ. ಅದೂ ಅಲ್ಲದೆ ಈಗ ಪ್ರತಿದಿನ ಸುಮಾರು 50 ಸಾವಿರ ಪ್ರಕರಣಗಳು ಪತ್ತೆಯಾಗಲು ಆರಂಭಿಸಿವೆ.

ಭಾರತದಲ್ಲಿ ಜುಲೈ 1ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2 ರಂದು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಂದು 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4 ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9 ರಂದು 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10 ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 11 ರಿಂದ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 14 ರಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 15 ರಂದು 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 16 ರಿಂದ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 18 ರಂದು 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 19 ರಂದು 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20 ರಿಂದ 37 ಸಾವಿರಕ್ಕೂ ಪ್ರಕರಣಗಳು ಹಾಗೂ ಜುಲೈ 22 ರಂದು 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಪತ್ತೆಯಾಗಿದ್ದವು. ಇದಾದ ಬಳಿಕ ಜುಲೈ 23 ರಂದು ಸುಮಾರು 50 ಸಾವಿರ ಪ್ರಕರಣಗಳು ಕಂಡು ಬಂದಿವೆ.‌ ಗುರುವಾರ 49,310 ಹೊಸ ಪ್ರಕರಣಗಳು ವರದಿಯಾಗಿದ್ದು, ಇದರಿಂದ ದೇಶದ ಕೊರೋನಾ ಪೀಡಿತರ ಸಂಖ್ಯೆ 12,87,945ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಗುರುವಾರ 740 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 30 ಸಾವಿರದ ಗಡಿ‌ ದಾಟಿದ್ದು 30,601ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣ ಆದವರು 8,17,209 ಜನ ಮಾತ್ರ. ದೇಶದಲ್ಲಿ ಇನ್ನೂ 4,40,135 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ :  ಲಕ್ಷ ಹುದ್ದೆಗಳು ಖಾಲಿ ಇವೆ; ಆಡಳಿತ ನಡೆಸುವುದು ಕಷ್ಟವಾಗಿದೆ: ಸರ್ಕಾರದ ಕೂಗಿಗೆ ಕಿವಿಗೊಡದ ಸುಪ್ರೀಂ ಕೋರ್ಟ್

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11 ರಂದು 10,956, ಜೂನ್ 12 ರಂದು 11,458, ಜೂನ್ 13 ರಂದು 11,929, ಜೂನ್ 14 ರಂದು 11,502, ಜೂನ್ 15 ರಂದು 10,667, ಜೂನ್ 16 ರಂದು 10,974, ಜೂನ್ 17 ರಂದು 12,881, ಜೂನ್ 18 ರಂದು 13,586, ಜೂನ್ 19 ರಂದು 14,516, ಜೂನ್ 20ರಂದು 15,413, ಜೂನ್ 21ರಂದು 14,821, ಜೂನ್ 22 ರಂದು 14,933, ಜೂನ್ 23 ರಂದು 15,968, ಜೂನ್ 24 ರಂದು 16,922, ಜೂನ್ 25 ರಂದು 17,296, ಜೂನ್ 26 ರಂದು 18,552, ಜೂನ್ 27 ರಂದು 19,906, ಜೂನ್ 28 ರಂದು 19,459, ಜೂನ್ 29 ರಂದು 18,522, ಜೂನ್ 30 ರಂದು 18,653, ಜುಲೈ 1 ರಂದು 19,148, ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4 ರಂದು 24,850, ಜುಲೈ 5 ರಂದು 24,248, ಜುಲೈ 6ರಂದು 22,252, ಜುಲೈ 7 ರಂದು 22,752, ಜುಲೈ 8 ರಂದು 24,879.



ಜುಲೈ 9 ರಂದು 26,506, ಜುಲೈ 10ರಂದು 27,114, ಜುಲೈ 11 ರಂದು 28,637, ಜುಲೈ 12 ರಂದು‌ 28,701, ಜುಲೈ 13 ರಂದು 28,498, ಜುಲೈ 14 ರಂದು 29,429, ಜುಲೈ 15 ರಂದು 32,695, ಜುಲೈ 16 ರಂದು‌ 34,956, ಜುಲೈ 17 ರಂದು 34,884, ಜುಲೈ 18 ರಂದು 38,902, ಜುಲೈ 19 ರಂದು 40,425, ಜುಲೈ 20 ರಂದು 37,148, ಜುಲೈ 21 ರಂದು 37,724, ಜುಲೈ 22 ರಂದು 45,720 ಹಾಗೂ ಜುಲೈ 23 ರಂದು 49,310 ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: G Hareeshkumar
First published: July 24, 2020, 10:31 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading