Coronavirus India Update : ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ : ನಿನ್ನೆ ಒಂದೇ ದಿನ 48,661‌ ಪ್ರಕರಣಗಳು ಪತ್ತೆ

ಶನಿವಾರ 705 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 32 ಸಾವಿರದ ಗಡಿ‌ ದಾಟಿದ್ದು, 32,063ಕ್ಕೆ ಏರಿಕೆಯಾಗಿದೆ

news18-kannada
Updated:July 26, 2020, 11:01 AM IST
Coronavirus India Update : ದೇಶದಲ್ಲಿ ಮುಂದುವರೆದ ಕೊರೋನಾ ಹಾವಳಿ : ನಿನ್ನೆ ಒಂದೇ ದಿನ 48,661‌ ಪ್ರಕರಣಗಳು ಪತ್ತೆ
ಸಾಂದರ್ಭಿಕ ಚಿತ್ರ
  • Share this:
ನವದೆಹಲಿ(ಜುಲೈ.26): ಕೊರೋನಾ ಸೋಂಕು ಹರಡುವಿಕೆ ವ್ಯಾಪಕವಾಗಿದ್ದರೂ ಲಾಕ್​ಡೌನ್ ನಿಯಮಗಳನ್ನು ಸಡಿಲಿಸಿ ಅನ್ ಲಾಕ್ 1 ಮತ್ತು 2 ಅನ್ನು ಜಾರಿ ಮಾಡಿದ ಪರಿಣಾಮ ದೇಶದಲ್ಲಿ ಕೊರೋನಾ ಸೋಂಕು ಪೀಡಿತರ ಸಂಖ್ಯೆ ಶರವೇಗದಲ್ಲಿ ಸಾಗುತ್ತಲೇ ಇದೆ. ಪರಿಣಾಮವಾಗಿ ದೇಶದ ಕೊರೋನಾ ಸೋಂಕು ಪೀಡಿತರ ಸಂಖ್ಯೆ 14 ಲಕ್ಷದ ಗಡಿ ಸಮೀಪ ಬಂದಿದೆ.

ಭಾರತದಲ್ಲಿ ಜುಲೈ 1 ರಂದು 19 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 2 ರಂದು 20 ಸಾವಿರಕ್ಕೂ ಹೆಚ್ಚು ಪ್ರಕರಣಗಳು ಜುಲೈ 3 ರಂದು 22  ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 4 ರಿಂದ 24 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 9 ರಂದು 26 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 10 ರಂದು 27 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 11 ರಿಂದ 28 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 14 ರಂದು 29 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 15ರಂದು 32 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 16ರಿಂದ 34 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 18 ರಂದು 38 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 19 ರಂದು 40 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 20 ರಿಂದ 37 ಸಾವಿರಕ್ಕೂ ಪ್ರಕರಣಗಳು, ಜುಲೈ 22ರಂದು 45 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 23ರಂದು 49 ಸಾವಿರಕ್ಕೂ ಹೆಚ್ಚು ಪ್ರಕರಣಗಳು, ಜುಲೈ 24 ರಿಂದ 48 ಸಾವಿರಕ್ಕೂ ಹೆಚ್ಚು‌ ಪ್ರಕರಣಗಳು ಪತ್ತೆಯಾಗುತ್ತಿವೆ. ಶನಿವಾರ 48,661‌ ಹೊಸ ಪ್ರಕರಣಗಳು ವರದಿಯಾಗಿದ್ದು ಇದರಿಂದ ದೇಶದ ಕೊರೊನಾ ಪೀಡಿತರ ಸಂಖ್ಯೆ 13,85,522ಕ್ಕೆ ಏರಿಕೆಯಾಗಿದೆ.

ಇದಲ್ಲದೆ ಶನಿವಾರ 705 ಮಂದಿ ಕೊರೋನಾದಿಂದ ಮೃತಪಟ್ಟಿದ್ದಾರೆ. ಇದರಿಂದ ದೇಶದಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 32 ಸಾವಿರದ ಗಡಿ‌ ದಾಟಿದ್ದು, 32,063ಕ್ಕೆ ಏರಿಕೆಯಾಗಿದೆ. ಈವರೆಗೆ ಕೊರೋನಾದಿಂದ ಗುಣಮುಖರಾದವರು 8,85,577 ಜನ ಮಾತ್ರ. ದೇಶದಲ್ಲಿ ಇನ್ನೂ 4,67,882 ಜನರಲ್ಲಿ ಕೊರೋನಾ ಸಕ್ರೀಯವಾಗಿದೆ ಎಂದು ಕೇಂದ್ರ ಆರೋಗ್ಯ ಇಲಾಖೆಯ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ :  ಸೌತ್ ಚೀನಾ ಸಮುದ್ರ ಚೀನಾದ ಸಾಗರ ಸಾಮ್ರಾಜ್ಯವಲ್ಲ; ಮುಕ್ತರಾಷ್ಟ್ರಗಳು ಒಗ್ಗೂಡಿ ವಿರೋಧಿಸಬೇಕು: ಅಮೆರಿಕ

ಕೇಂದ್ರ ಆರೋಗ್ಯ ಇಲಾಖೆ ಮಾಹಿತಿಗಳ ಪ್ರಕಾರ ಜೂನ್ 11 ರಂದು 10,956, ಜೂನ್ 12 ರಂದು 11,458, ಜೂನ್ 13ರಂದು 11,929, ಜೂನ್ 14 ರಂದು 11,502, ಜೂನ್ 15 ರಂದು 10,667, ಜೂನ್ 16 ರಂದು 10,974, ಜೂನ್ 17 ರಂದು 12,881, ಜೂನ್ 18 ರಂದು 13,586, ಜೂನ್ 19 ರಂದು 14,516, ಜೂನ್ 20ರಂದು 15,413, ಜೂನ್ 21 ರಂದು 14,821, ಜೂನ್ 22 ರಂದು 14,933, ಜೂನ್ 23ರಂದು 15,968, ಜೂನ್ 24 ರಂದು 16,922, ಜೂನ್ 25 ರಂದು 17,296, ಜೂನ್ 26 ರಂದು 18,552, ಜೂನ್ 27 ರಂದು 19,906, ಜೂನ್ 28ರಂದು 19,459, ಜೂನ್ 29 ರಂದು 18,522, ಜೂನ್ 30ರಂದು 18,653, ಜುಲೈ 1ರಂದು 19,148, ಜುಲೈ 2 ರಂದು 20,903, ಜುಲೈ 3 ರಂದು 22,771, ಜುಲೈ 4 ರಂದು 24,850, ಜುಲೈ 5 ರಂದು 24,248, ಜುಲೈ 6 ರಂದು 22,252, ಜುಲೈ 7 ರಂದು 22,752, ಜುಲೈ 8 ರಂದು 24,879, ಜುಲೈ 9 ರಂದು 26,506, ಜುಲೈ 10 ರಂದು 27,114, ಜುಲೈ 1 ರಂದು 28,637, ಜುಲೈ 12 ರಂದು‌ 28,701

ಜುಲೈ 13 ರಂದು 28,498, ಜುಲೈ 14 ರಂದು 29,429, ಜುಲೈ 15ರಂದು 32,695, ಜುಲೈ 16 ರಂದು‌ 34,956, ಜುಲೈ 17 ರಂದು 34,884, ಜುಲೈ 18 ರಂದು 38,902, ಜುಲೈ 19 ರಂದು 40,425, ಜುಲೈ 20 ರಂದು 37,148, ಜುಲೈ 21 ರಂದು 37,724, ಜುಲೈ 22 ರಂದು 45,720, ಜುಲೈ 23 ರಂದು 49,310, ಜುಲೈ 24 ರಂದು 48,916,‌ ಜುಲೈ 25 ರಂದು 48,661‌ ಹೊಸ ಪ್ರಕರಣಗಳು ಪತ್ತೆಯಾಗಿವೆ.
Published by: G Hareeshkumar
First published: July 26, 2020, 10:32 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading