CoronaVirus: ಕೊರೋನಾ ಭೀತಿ; ಗಾಂಧಿ ಬಜಾರ್‌ ಸೇರಿದಂತೆ ನಗರದ ಹಲವೆಡೆ ಸ್ವಯಂ ಪ್ರೇರಿತ ಲಾಕ್‌ಡೌನ್

ಗಾಂಧಿ ಬಜಾರ್ ಬಳಿಯ NAT ಸ್ಟ್ರೀಟ್ ನಲ್ಲಿ ಎರಡು ಬದಿಗಳಲ್ಲಿ ಸುಮಾರು 60ಕ್ಕು ಹೆಚ್ಚು ಅಂಗಡಿಗಳಿವೆ. ಅಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದು ಅವರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ವರ್ತಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

news18-kannada
Updated:June 30, 2020, 2:55 PM IST
CoronaVirus: ಕೊರೋನಾ ಭೀತಿ; ಗಾಂಧಿ ಬಜಾರ್‌ ಸೇರಿದಂತೆ ನಗರದ ಹಲವೆಡೆ ಸ್ವಯಂ ಪ್ರೇರಿತ ಲಾಕ್‌ಡೌನ್
ಗಾಂಧಿ ಬಜಾರ್‌ನಲ್ಲಿ ಲಾಕ್‌ಡೌನ್ ಮಾಡಲಾಗಿರುವ ಅಂಗಡಿ ಮುಂಗಟ್ಟುಗಳು.‌
  • Share this:
ಬೆಂಗಳೂರು (ಜೂನ್ 30); ನಗರದಲ್ಲಿ ದಿನೇ ದಿನೇ ಕೊರೋನಾ ಸೋಂಕು ಹೆಚ್ಚಾಗುತ್ತಿದ್ದು ಮುಂಜಾಗ್ರತಾ ಕ್ರಮವಾಗಿ ನಗರದ ಹಲವೆಡೆ ಅಂಗಡಿ ಮುಂಗಟ್ಟುಗಳ ಮಾಲೀಕರು ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್‌ ಮಾಡಲು ಮುಂದಾಗಿದ್ದಾರೆ. ನಗರದ ಬಸವನಗುಡಿಯ ಗಾಂಧಿ ಬಜಾರ್ ಬಳಿ ಸುಮಾರು 60 ಕ್ಕು ಹೆಚ್ಚು ಅಂಗಡಿಗಳನ್ನ ಬಂದ್ ಮಾಡಲಾಗಿದೆ.

ಅಂಗಡಿಗಳಲ್ಲಿ ಕೆಲಸ ಮಾಡುತ್ತಿರುವ ಸಿಬ್ಬಂದಿ ಮತ್ತು ಮಾಲೀಕರ ಸುರಕ್ಷತೆ ದೃಷ್ಟಿಯಿಂದ ಸ್ವಯಂ ಪ್ರೇರಿತವಾಗಿ ಲಾಕ್‌ಡೌನ್ ಮಾಡುವ ನಿರ್ಧಾರ ಕೈಗೊಂಡಿದ್ದಾರೆ. ಜೂನ್ 30ರಿಂದ ಜುಲೈ 7ರವರೆಗೆ ಸ್ವಯಂ ಪ್ರೇರಿತ ಲಾಕ್ ಡೌನ್ ಕೈಗೊಂಡಿದ್ದು ಅಲ್ಲಿಯವರೆಗೆ ಅಂಗಡಿಗಳನ್ನ ತೆರೆಯದಿರಲು ವ್ಯಾಪಾರಿಗಳು ನಿರ್ಧರಿಸಿದ್ದಾರೆ.

ಗಾಂಧಿ ಬಜಾರ್ ಬಳಿಯ NAT ಸ್ಟ್ರೀಟ್ ನಲ್ಲಿ ಎರಡು ಬದಿಗಳಲ್ಲಿ ಸುಮಾರು 60ಕ್ಕು ಹೆಚ್ಚು ಅಂಗಡಿಗಳಿವೆ. ಅಲ್ಲಿ ನೂರಾರು ಜನ ಕೆಲಸ ಮಾಡುತ್ತಿದ್ದು ಅವರ ಆರೋಗ್ಯ ಮತ್ತು ಸುರಕ್ಷತೆ ದೃಷ್ಟಿಯಿಂದ ವರ್ತಕರು ಈ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ‘ವಿದೇಶಿ ಹೂಡಿಕೆದಾರರ ಹಕ್ಕು ರಕ್ಷಣೆ ಭಾರತದ ಹೊಣೆ – 59 ಆ್ಯಪ್ ನಿಷೇಧಿಸುವ ಕ್ರಮಕ್ಕೆ ಚೀನಾ ಕೆಂಗಣ್ಣು

ಅಲ್ಲದೇ ಬಸವನಗುಡಿ ಸುತ್ತಮುತ್ತಲಿನ ಏರಿಯಾದಲ್ಲಿ ಸುಮಾರು 70ರಷ್ಟು ಅಂಗಡಿಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿ ಕೊರೊನಾ ವಿರುದ್ಧ ಹೋರಾಟಕ್ಕೆ ಕೈ ಜೋಡಿಸಿದ್ದಾರೆ. ನಗರದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಈ ಸಮಯದಲ್ಲಿ ವರ್ತಕರ ಈ ನಿರ್ಧಾರ ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.
First published: June 30, 2020, 2:55 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading