ಕೊರೋನಾ ಭೀತಿಗೆ ಈಗಲೂ ಪ್ರಯಾಣಕ್ಕೆ ಹಿಂದೇಟು ; ಪ್ರಯಾಣಿಕರಿಲ್ಲದೆ ಬಿಎಂಟಿಸಿ ಬಸ್ ಗಳು ಖಾಲಿ ಖಾಲಿ

ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿ ಎರಡು ಕಳೆದಿವೆ. ಆದರೆ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರುತ್ತಿಲ್ಲ.

news18-kannada
Updated:May 28, 2020, 12:29 PM IST
ಕೊರೋನಾ ಭೀತಿಗೆ ಈಗಲೂ ಪ್ರಯಾಣಕ್ಕೆ ಹಿಂದೇಟು ; ಪ್ರಯಾಣಿಕರಿಲ್ಲದೆ ಬಿಎಂಟಿಸಿ ಬಸ್ ಗಳು ಖಾಲಿ ಖಾಲಿ
ಬಿಎಂಟಿಸಿ ಬಸ್​ಗಳು
  • Share this:
ಬೆಂಗಳೂರು(ಮೇ.28): ಬಿಎಂಟಿಸಿ ಬಸ್ ದರ ಪರಿಷ್ಕರಣೆಯ ನಂತರ ಪ್ರಯಾಣಿಕರ ಸಂಖ್ಯೆ ಹೆಚ್ಚಾಗಿದ್ದು ನೋಡಿ ಲಾಕ್ ಡೌನ್‌ ಬಳಿಕ ಮತ್ತೆ ಪರಿಸ್ಥಿತಿ ತಹಬದಿಗೆ ಬರುತ್ತಿದೆ ಎಂದು ಕೊಳ್ಳಲಾಗಿತ್ತು. ಆದರೆ, ಕಳೆದೆರಡು ದಿನಗಳಿಂದ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡು ಬರುತ್ತಿಲ್ಲ. ಬಹುತೇಕ ಬಸ್ ಗಳು ಖಾಲಿ ಖಾಲಿ ಸಂಚಾರ ಮಾಡುತ್ತಿವೆ. ಇದು ಬಿಎಂಟಿಎಸ್ ನಷ್ಟದ ಹೊರೆ ಇನ್ನಷ್ಟು ಹೆಚ್ಚಳ ಮಾಡಲಿದೆ.

ಲಾಕ್ ಡೌನ್‌ ನಿಂದಾಗಿ ಕಳೆದೆರಡು ತಿಂಗಳಿನಿಂದ ಬಸ್ ಸಂಚಾರವಿಲ್ಲದೆ, ಸಾರಿಗೆ ಸಿಬ್ಬಂದಿಗೆ ವೇತನ ನೀಡಲು ಸಂಕಷ್ಟದಲ್ಲಿದ್ದವು. ಇದೀಗ‌ ಬೆಂಗಳೂರಿನಲ್ಲಿ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿ ಎರಡು ಕಳೆದಿವೆ. ಆದರೆ ಆರಂಭದಲ್ಲಿ ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಬಸ್ ಸೇವೆ ಸಂಖ್ಯೆಯೂ ಕಡಿಮೆಯಿತ್ತು. ಮೇಲಾಗಿ ಒಂದು ಸ್ಟೇಜ್ ಪ್ರಯಾಣ ಮಾಡಲು 70 ರೂಪಾಯಿ ಪಾಸ್ ಪಡೆಯಬೇಕಿತ್ತು. ಆದರೆ ಕಳೆದ ಮೂರು ದಿನಗಳಿಂದ ಬಸ್ ಸಂಚಾರಕ್ಕೆ ಟಿಕೆಟ್ ಪಡೆಯಬಹುದು.

ಪ್ರತಿ ಸ್ಟೇಜ್ ಗೆ 5, 10 ರಿಂದ 30 ರೂಪಾಯಿವರೆಗೆ ದರ ನಿಗಧಿ ಮಾಡಿದ ಬಳಿಕ ಪ್ರಯಾಣಿಕರ ಸಂಖ್ಯೆಯಲ್ಲಿ ಹೆಚ್ಚಳ ಕಂಡುಬಂದಿತು. ಇದರಿಂದಾಗಿ ಪ್ರತಿದಿನ 3500 ಬಸ್ ಗಳು ಮಹಾನಗರಿಯಲ್ಲಿ ಓಡಾಡಲಾರಂಬಿಸಿದೆ. ಆದರೆ, ಪ್ರಯಾಣಿಕರ ಸಂಖ್ಯೆಯಲ್ಲಿ ನಿರೀಕ್ಷಿತ ಮಟ್ಟದಲ್ಲಿ ಹೆಚ್ಚಾಗಿಲ್ಲ. ಮೊದಲೇ ಸಂಕಷ್ಟದಲ್ಲಿರುವ ಬಿಎಂಟಿಸಿ ಮತ್ತಷ್ಟು ನಷ್ಟದ ಹೊರೆ ಹೊರಬೇಕಾಗಿದೆ. ಬಿಎಂಟಿಸಿ ಬಸ್ ಖಾಲಿ ಖಾಲಿ! ಬಿಎಂಟಿಸಿ ಬಸ್ ಸಂಖ್ಯೆ ಹೆಚ್ಚಳ ಹಿನ್ನೆಲೆ ಪ್ರಯಾಣಿಕರ  ಸಂಖ್ಯೆ ಇಳಿಕೆಯಾಗಿದೆ.

ಬೆಳಗ್ಗೆ 6 ಗಂಟೆಯಿಂದಲೇ ಬಸ್ ಸೇವೆ ಆರಂಭವಾಗಿರುವುದರಿಂದ ನೈಟ್ ಶಿಪ್ಟ್ ಕೆಲಸ ಮಾಡಿದವರು, ಬೇರೆ ಜಿಲ್ಲೆಗಳಿಂದ‌ ಬಂದವರು ತಮ್ಮ ಏರಿಯಾ ಬಸ್ ಗಳಲ್ಲಿ ತೆರಳಿದರೆ ಆನಂತರ ಬಸ್ ಗಳಿಗೆ ಪ್ರಯಾಣ ಮಾಡುವವರೇ ಇಲ್ಲದಂತಾಗಿದೆ. ಮಾರ್ನಿಂಗ್ ಶಿಪ್ಟ್ ಗೆ ತೆರಳಲು ಒಂದಷ್ಟು ಜನ ಪ್ರಯಾಣಿಕರು ತೆರಳುವುದು ಬಿಟ್ಟರೆ ಸಂಜೆಯವರೆಗೆ ಬಸ್ ಗಳು ಖಾಲಿ ಖಾಲಿ ಹೊಡೆಯುತ್ತಿವೆ. ಕೆಲವೇ ಕೆಲವರು ಪ್ರಯಾಣಿಕರೊಂದಿಗೆ ಬಿಎಂಟಿಸಿ ಬಸ್ ಓಡಾಡುತ್ತಿವೆ. ಮಾರ್ಗ ಮಧ್ಯದಲ್ಲಿ ಪ್ರಯಾಣಿಕರು ಏರುವುದಿಲ್ಲ. ಬಹುತೇಕ ವಾಹನಗಳು ಖಾಲಿ ಖಾಲಿ ಓಡಾಡುತ್ತಿರುವ ದೃಶ್ಯ ಬೆಂಗಳೂರಿನ ಮೆಜೆಸ್ಟಿಕ್ ಬಿಎಂಟಿಸಿ ಬಸ್ ನಿಲ್ದಾಣದಲ್ಲಿ ಕಂಡು ಬಂದಿತು.

ನಿರೀಕ್ಷೆಯಂತೆ ಬಿಎಂಟಿಸಿ ಬಸ್ ಸಂಚಾರದಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಾಗುತ್ತಿಲ್ಲ. ಕಳೆದೆರಡು ದಿನಗಳ‌ ಹಿಂದೆ ಬಸ್ ಸಿಗದೇ ಪ್ರಯಾಣಿಕರು ಬೆಳಗ್ಗೆ ಪರದಾಡಿದ್ದರು. ಇದರಿಂದ ಬೆಳಗ್ಗೆ 6 ರಿಂದ ಸಂಜೆ 7ರವರೆಗೆ ಬಿಎಂಟಿಸಿ ಬಸ್ ಸಂಚಾರ ಆರಂಭವಾಗಿದೆ. ಆದರೆ, ನಿರೀಕ್ಷಿತ ಮಟ್ಟದಲ್ಲಿ ಪ್ರಯಾಣಿಕರು ಬರುತ್ತಿಲ್ಲ. ಇಂದಿರಾನಗರ ಮಾರ್ಗವಾಗಿ ತೆರಳುವ ದೊಮ್ಮಲೂರು, ರಾಜಾಜಿನಗರ, ಮಹಾಲಕ್ಷ್ಮಿ ಲೇಔಟ್ ಮೂಲಕ ಪೀಣ್ಯ ಕಡೆ ತೆರಳುವ‌ ಬಸ್ ಗಳಲ್ಲಿ ಪ್ರಯಾಣಿಕರ ಸಂಖ್ಯೆಯೇ ಅತ್ಯಂತ ವಿರಳವಾಗಿದೆ.

ಇದನ್ನೂ ಓದಿ : ಕಿಟ್​​ಗಳ ಕೊರತೆಯಿಂದ ನಡೆಯದ ವೈದ್ಯಕೀಯ ಪರೀಕ್ಷೆ ; ಕ್ವಾರಂಟೈನ್ ಅವಧಿ ಮುಗಿದರೂ ಸಿಗದ ಬಿಡುಗಡೆ ಭಾಗ್ಯ

ಕೊರೋನಾ ಮುಂಚಿತವಾಗಿ ಈ ರೂಟ್ ಬಸ್ ಗಳು ತುಂಬಿ ತುಳುಕುತ್ತಿದ್ದವು. ನಿನ್ನೆ ದೊಮ್ಮಲೂರಿಗೆ ನಾನು, ಡ್ರೈವರ್ ಮಾತ್ರ ವಾಪಾಸ್ ಬಸ್ ನಿಲ್ದಾಣಕ್ಕೆ ಬಂದಿದ್ದೇವೆ ಎಂದು ಬಿಎಂಟಿಸಿ ಕಂಡಕ್ಟರ್ ಒಬ್ಬರು ಹೇಳುತ್ತಾರೆ.

 

First published: May 28, 2020, 12:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading