ನೀಟ್​​, ಜೆಇಇ ಎಕ್ಸಾಂಗೆ ಮೂಹೂರ್ತ ಫಿಕ್ಸ್​ - ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ನಾಳೆ ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ

ಇನ್ನು, ಕೇಂದ್ರ ಸರ್ಕಾರವೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲದೇ ಬೇಜವಾಬ್ದಾರಿ ತೋರುತ್ತಿದೆ. ಹೀಗಾಗಿಯೇ ಏನನ್ನೂ ಲೆಕ್ಕಿಸದೇ ನೀಟ್‌ ಪರೀಕ್ಷೆಗೆ ಅನುಮತಿ ಕಲ್ಪಿಸಿದೆ. ಇದರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಸೋನಿಯಾ ಗಾಂಧಿ ಕರೆ ನೀಡಿದರು. ಸೋನಿಯಾ ಗಾಂಧಿ ಕರೆ ಮೇರೆಗೆ ನಾಳೆ ಕಾಂಗ್ರೆಸ್​ ಪ್ರತಿಭಟನೆ ಹಮ್ಮಿಕೊಂಡಿದೆ.

news18-kannada
Updated:August 27, 2020, 9:50 AM IST
ನೀಟ್​​, ಜೆಇಇ ಎಕ್ಸಾಂಗೆ ಮೂಹೂರ್ತ ಫಿಕ್ಸ್​ - ಪರೀಕ್ಷೆ ಮುಂದೂಡುವಂತೆ ಆಗ್ರಹಿಸಿ ನಾಳೆ ದೇಶಾದ್ಯಂತ ಕಾಂಗ್ರೆಸ್​ ಪ್ರತಿಭಟನೆ
ಕಾಂಗ್ರೆಸ್​​
  • Share this:
ನವದೆಹಲಿ(ಆ.27): ತೀವ್ರ ವಿರೋಧದ ನಡುವೆಯೂ ನೀಟ್‌ ಪರೀಕ್ಷೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಗ್ರೀನ್​ ಸಿಗ್ನಲ್​ ನೀಡಿದೆ. ಕೇಂದ್ರ ಸರ್ಕಾರ ಆದೇಶದ ಮೇರೆಗೆ ನೀಟ್‌ ಯುಜಿ- 2020 ಪರೀಕ್ಷೆಗಳು ಸೆ.13ರಂದು ನಡೆಯಲಿವೆ. ಎಂಜಿನಿಯರಿಂಗ್‌ ಪ್ರವೇಶದ ಜೆಇಇ ಪರೀಕ್ಷೆ ಸೆ. 1-6ರವರೆಗೆ ನಿಗದಿಯಾಗಿದೆ. ಜತೆಗೆ ಪರೀಕ್ಷೆ ನಡೆಸಲು ಕೇಂದ್ರ ಗ್ರೀನ್​​ ಸಿಗ್ನಲ್​​ ನೀಡುತ್ತಿದ್ದಂತೆಯೇ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ಟಿಎ) ಬುಧವಾರ ಪ್ರವೇಶ ಪತ್ರಗಳನ್ನು ವೆಬ್‌ಸೈಟ್‌ನಲ್ಲಿ ಬಿಡುಗಡೆ ಮಾಡಿದೆ. ಹೀಗಿರುವಾಗಲೇ ಕಾಂಗ್ರೆಸ್​ ನೇತೃತ್ವದಲ್ಲಿ ದೇಶಾದ್ಯಂತ ನಾಳೆ ನೀಟ್​​​ ಮತ್ತು ಜೆಇಇ ಪರೀಕ್ಷೆಗಳನ್ನು ಮುಂಡೂಡಿಕೆಗೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯಲಿವೆ.

ಯಾವುದೇ ಕಾರಣಕ್ಕೂ ನೀಟ್​​ ಮತ್ತು ಜೆಇಇ ಪರೀಕ್ಷೆಗಳು ನಡೆಸಬಾರದು. ಕೊರೋನಾ ಸೋಂಕಿನಿಂದ ಇಡೀ ದೇಶ ತತ್ತರಿಸಿದೆ. ವಿದ್ಯಾರ್ಥಿಗಳು ಕೊರೋನಾ ಸಮಯದಲ್ಲಿ ನೀಟ್​​ ಮತ್ತು ಜೆಇಇ ಪರೀಕ್ಷೆ ಬರೆಯುವುದು ಒಳ್ಳೆಯದಲ್ಲ. ಆರೋಗ್ಯ ದೃಷ್ಟಿಯಿಂದ ಎರಡು ಪರೀಕ್ಷೆಗಳನ್ನು ಕೇಂದ್ರ ಸರ್ಕಾರ ಕೂಡಲೇ ಮುಂದೂಡಬೇಕು. ಕೊರೋನಾ ಪರಿಸ್ಥಿತಿ ಸುಧಾರಿಸಿದ ಮೇಲೆ ನೀಟ್​​ ಮತ್ತು ಜೆಇಇ ಪರೀಕ್ಷೆಗಳು ನಡೆಸಬೇಕು ಎಂದು ಆಗ್ರಹಿಸಿ ಕಾಂಗ್ರೆಸ್​​ ದೇಶವ್ಯಾಪಿ ಪ್ರತಿಭಟನೆಗಳು ಹಮ್ಮಿಕೊಂಡಿದೆ. ಡಿಎಂಕೆ, ಆಪ್​​​ ಸೇರಿದಂತೆ ಹಲವು ಪಕ್ಷಗಳು ಕಾಂಗ್ರೆಸ್​ ಹೋರಾಟವನ್ನು ಬೆಂಬಲಿಸಿ ಬೀದಿಗಿಳಿಯಲಿವೆ.

ಕೊರೋನಾ ಆತಂಕದ ನಡುವೆ ನೀಟ್‌ ಪರೀಕ್ಷೆಗೆ ಅನುಮತಿ ನೀಡಿದ ಕೇಂದ್ರದ ವಿರುದ್ಧ ಪ್ರತಿಭಟನೆ ನಡೆಸುವ ಸಂಬಂಧ ಚರ್ಚಿಸಲು ಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ನಿನ್ನೆ ವಿವಿಧ ರಾಜ್ಯಗಳ ಸಿಎಂಗಳ ಸಭೆ ಕರೆದಿದ್ದರು. ಪಶ್ಷಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ, ಮಹಾರಾಷ್ಟ್ರ ಸಿಎಂ ಉದ್ಧವ್‌ ಠಾಕ್ರೆ, ಜಾರ್ಖಂಡ್‌ ಸಿಎಂ ಹೇಮಂತ್‌ ಸೊರೆನ್‌ ಜತೆಗೆ ಕಾಂಗ್ರೆಸ್​ ಆಡಳಿತ ರಾಜ್ಯಗಳ ಮುಖ್ಯಮಂತ್ರಿಗಳಾದ ಅಮರಿಂದರ್‌ ಸಿಂಗ್‌, ಅಶೋಕ್‌ ಗೆಹ್ಲೋಟ್​​, ಭೂಪೇಶ್‌ ಬಾಘೆಲ್‌ ಭಾಗಿಯಾಗಿದ್ದರು.

ಇದನ್ನೂ ಓದಿ: Vinay Kulkarni: ಮಾಜಿ ಸಚಿವ ವಿನಯ್​​ ಕುಲಕರ್ಣಿಗೂ ಕೊರೋನಾ ಪಾಸಿಟಿವ್​​

ಇನ್ನು, ಕೇಂದ್ರ ಸರ್ಕಾರವೂ ವಿದ್ಯಾರ್ಥಿಗಳ ಬಗ್ಗೆ ಕಾಳಜಿಯಿಲ್ಲದೇ ಬೇಜವಾಬ್ದಾರಿ ತೋರುತ್ತಿದೆ. ಹೀಗಾಗಿಯೇ ಏನನ್ನೂ ಲೆಕ್ಕಿಸದೇ ನೀಟ್‌ ಪರೀಕ್ಷೆಗೆ ಅನುಮತಿ ಕಲ್ಪಿಸಿದೆ. ಇದರ ವಿರುದ್ಧ ಒಟ್ಟಾಗಿ ಹೋರಾಡೋಣ ಎಂದು ಸೋನಿಯಾ ಗಾಂಧಿ ಕರೆ ನೀಡಿದರು. ಸೋನಿಯಾ ಗಾಂಧಿ ಕರೆ ಮೇರೆಗೆ ನಾಳೆ ಕಾಂಗ್ರೆಸ್​ ಪ್ರತಿಭಟನೆ ಹಮ್ಮಿಕೊಂಡಿದೆ.
Published by: Ganesh Nachikethu
First published: August 27, 2020, 9:45 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading