Chikmagalur: 9 ಲಕ್ಷ ರೂ. ಆಸ್ಪತ್ರೆ ಬಿಲ್​ಗೆ 1 ರೂ. ರಿಯಾಯಿತಿ!; ಚಿಕ್ಕಮಗಳೂರು ಕೊರೋನಾ ರೋಗಿಯ ಕುಟುಂಬಸ್ಥರು ಶಾಕ್

Chikmagalur Coronavirus: ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ 9,25,601 ರೂ. ಬೀಲ್ ನೀಡಲಾಗಿತ್ತು. ಬಳಿಕ ಒಟ್ಟು ಬಿಲ್ ಮೊತ್ತದಲ್ಲಿ ಆಸ್ಪತ್ರೆ 1 ರೂ. ವಿನಾಯಿತಿ ನೀಡಿದೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ.

news18-kannada
Updated:September 18, 2020, 10:27 AM IST
Chikmagalur: 9 ಲಕ್ಷ ರೂ. ಆಸ್ಪತ್ರೆ ಬಿಲ್​ಗೆ 1 ರೂ. ರಿಯಾಯಿತಿ!; ಚಿಕ್ಕಮಗಳೂರು ಕೊರೋನಾ ರೋಗಿಯ ಕುಟುಂಬಸ್ಥರು ಶಾಕ್
ಸಾಂದರ್ಭಿಕ ಚಿತ್ರ
  • Share this:
 ಚಿಕ್ಕಮಗಳೂರು (ಸೆ. 18): ರಾಜ್ಯಾದ್ಯಂತ ಕೊರೋನಾ ಅಬ್ಬರ ಮುಂದುವರೆದಿದೆ. ಕರ್ನಾಟಕದಲ್ಲಿ ಪ್ರಸ್ತುತ 1.3 ಲಕ್ಷ ಕೊರೋನಾ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಕೊರೋನಾದಿಂದಾಗಿ 7,629 ರೋಗಿಗಳು ಸಾವನ್ನಪ್ಪಿದ್ದಾರೆ. ಮಾರಣಾಂತಿಕ ಕೊರೋನಾ ಸೋಂಕಿಗೆ ಚಿಕಿತ್ಸೆ ಪಡೆಯಲು ದುಬಾರಿ ವೆಚ್ಚ ಭರಿಸಲಾಗದೆ ಅನೇಕರು ಪರದಾಡುತ್ತಿದ್ದಾರೆ. ಚಿಕ್ಕಮಗಳೂರಿನಲ್ಲಿ ನಿನ್ನೆ ಅಮಾನುಷ ಘಟನೆಯೊಂದು ನಡೆದಿದ್ದು, ಕೊರೋನಾದಿಂದ ಮೃತಪಟ್ಟ ರೋಗಿಯ ಚಿಕಿತ್ಸೆಗೆ 9 ಲಕ್ಷ ರೂ. ಬಿಲ್ ಮಾಡಲಾಗಿದೆ. ಆ ದುಬಾರಿ ಬಿಲ್​ಗೆ ರಿಯಾಯಿತಿ ಕೇಳಿದ್ದಕ್ಕೆ ಕೇವಲ 1 ರೂ. ರಿಯಾಯಿತಿ ನೀಡಲಾಗಿದೆ!

ಕೊರೊನಾದಿಂದ ಮೃತಪಟ್ಟಿರೋ ಕುಟುಂಬಕ್ಕೆ ಖಾಸಗಿ ಆಸ್ಪತ್ರೆಯ ಬಿಲ್ ನೋಡಿ ಶಾಕ್ ಆಗಿದೆ. ಕೊರೊನಾದಿಂದ ಮೃತಪಟ್ಟ ವ್ಯಕ್ತಿಗೆ 9,25,601 ರೂ. ಬೀಲ್ ನೀಡಲಾಗಿತ್ತು. ಬಳಿಕ ಒಟ್ಟು ಬಿಲ್ ಮೊತ್ತದಲ್ಲಿ ಆಸ್ಪತ್ರೆ 1 ರೂ. ವಿನಾಯಿತಿ ನೀಡಿದೆ. ಚಿಕ್ಕಮಗಳೂರು ನಗರದ ಆಶ್ರಯ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ಕಾಂಗ್ರೆಸ್ ಪಕ್ಷದ ಮಾಜಿ ಜಿಲ್ಲಾಧ್ಯಕ್ಷರ ಒಡೆತನದಲ್ಲಿರುವ ಖಾಸಗಿ ಆಸ್ಪತ್ರೆ ಬಿಲ್​ಗೆ ಸಾರ್ವಜನಿಕರಿಂದಲೂ ಭಾರೀ ಅಸಮಾಧಾನ ವ್ಯಕ್ತವಾಗಿದೆ. ಬಿಲ್​ನಿಂದ ಕಂಗೆಟ್ಟಿರುವ ಕುಟುಂಬಸ್ಥರು ಜಿಲ್ಲಾಧಿಕಾರಿಗೆ ದೂರು ನೀಡಿದ್ದಾರೆ.

ಇದನ್ನೂ ಓದಿ: Karnataka Rain: ಬೀದರ್, ಕಲಬುರ್ಗಿಯಲ್ಲಿ ವರುಣನ ಅಬ್ಬರ; ಕರಾವಳಿಯಲ್ಲೂ 3 ದಿನ ಭಾರೀ ಮಳೆ

ದುಬಾರಿ ಬಿಲ್ ನೀಡಿರುವ ಚಿಕ್ಕಮಗಳೂರಿನ ಆಶ್ರಯ ಆಸ್ಪತ್ರೆ ವಿರುದ್ದ ಕುಟುಂಬಸ್ಥರು ಆರೋಪ ಮಾಡಿದ್ದಾರೆ. ಸಖರಾಯಪಟ್ಟಣದ ಪಿಳ್ಳೆನಹಳ್ಳಿಯ 70 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ತಗುಲಿತ್ತು. ಅವರು ಆಶ್ರಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದರು. ಅವರ ಚಿಕಿತ್ಸೆಗೆ ಆಸ್ಪತ್ರೆ 9 ಲಕ್ಷ ರೂ. ಬಿಲ್ ವಿಧಿಸಿದೆ.

ಕರ್ನಾಟಕದಲ್ಲಿ ಇದುವರೆಗೂ 4.94 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ನಿನ್ನೆ ಒಂದೇ ದಿನ ಕರ್ನಾಟಕದಲ್ಲಿ 9366 ಜನರಿಗೆ ಸೋಂಕು ಪತ್ತೆಯಾಗಿದೆ. ನಿನ್ನೆ ಕೊರೋನಾದಿಂದ 93 ಜನರು ಸಾವನ್ನಪ್ಪುವ ಮೂಲಕ ಸಾವಿನ ಸಂಖ್ಯೆ 7,629ಕ್ಕೆ ಏರಿಕೆಯಾಗಿದೆ. ಚಿಕ್ಕಮಗಳೂರಿನಲ್ಲಿ ನಿನ್ನೆ 112 ಕೊರೋನಾ ಸೋಂಕಿತರು ಪತ್ತೆಯಾಗಿದ್ದು, ಇದುವರೆಗೂ 6816 ಜನರು ಕೊರೋನಾ ವೈರಸ್​ಗೆ ತುತ್ತಾಗಿದ್ದಾರೆ, 103 ಜನರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.
Published by: Sushma Chakre
First published: September 18, 2020, 10:27 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading