ಚಿಕ್ಕಬಳ್ಳಾಪುರ: ನಗರದ ವಾರ್ಡ್‍ಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ದಿಢೀರ್ ಭೇಟಿ, ಪರಿಶೀಲನೆ

ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಲೋಹಿತ್, ವಾರ್ಡ್ ಸದಸ್ಯರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೋಡಲ್ ಅಧಿಕಾರಿಗಳು ಸ್ವಚ್ಛತಾ ಕ್ಯಾಪ್ಟನ್ ಸೇರಿದಂತೆ ಮತ್ತಿತರರು ಹಾಜರಿದ್ದರು.

news18-kannada
Updated:September 7, 2020, 2:50 PM IST
ಚಿಕ್ಕಬಳ್ಳಾಪುರ: ನಗರದ ವಾರ್ಡ್‍ಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ದಿಢೀರ್ ಭೇಟಿ, ಪರಿಶೀಲನೆ
ನಗರದ ವಾರ್ಡ್​ಗಳಿಗೆ ಆರ್​ ಲತಾ ದಿಢೀರ್​ ಭೇಟಿ ನೀಡಿ ಪರಿಶೀಲನೆ
  • Share this:
ಚಿಕ್ಕಬಳ್ಳಾಪುರ(ಸೆ.07): ಇಂದು ನಗರದ ವಿವಿಧ ವಾರ್ಡ್​ಗಳು, ರಸ್ತೆಗಳು ಹಾಗೂ ಸ್ಥಳೀಯರ ಮನೆಗಳಿಗೆ ಜಿಲ್ಲಾಧಿಕಾರಿ ಆರ್. ಲತಾ ಅವರು ಭೇಟಿ ನೀಡಿ ಅಲ್ಲಿನ ಸ್ವಚ್ಚತೆಯನ್ನು ಹಾಗೂ ಸಾರ್ವಜನಿಕರ ಕುಂದು ಕೊರೆತಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ಮಾತನಾಡಿದ ಜಿಲ್ಲಾಧಿಕಾರಿ ಆರ್.ಲತಾ ವಾರ್ಡ್ ನಂಬರ್ 11ರ ಎಲ್ಲಾ ರಸ್ತೆಗಳು, ಚರಂಡಿಗಳು, ಮನೆ-ಮನೆ ಕಸ ಸಂಗ್ರಹಣೆ ಬಗ್ಗೆ, ಹಸಿ ಕಸ ಒಣ ಕಸ ಬೇರ್ಪಡಿಕೆ ಬಗ್ಗೆ, ಹೋಟೆಲ್​​ಗಳ ಶುಚಿತ್ವದ ಬಗ್ಗೆ, ಎಲ್ಲಾ ಅಂಗಡಿಗಳ ಮುಂದೆ ಕೊರೋನ ಅರಿವು ಮೂಡಿಸುವ ಬ್ಯಾನರ್​​ಗಳ ಬಗ್ಗೆ, ಪರಿವೀಕ್ಷಣೆ ಮಾಡಿ ಸದರಿ ವಾರ್ಡಿನ ಸ್ವಚ್ಛತೆ ಪರಿಶೀಲನೆ ಮಾಡಲಾಗುತ್ತಿದೆ ಎಂದರು. ಪ್ರತಿಯೊಂದು ವಾರ್ಡ್‍ಗಳಲ್ಲಿಯೂ ಕೋವಿಡ್-19 ತಡೆಯಲು ಟಾಸ್ಕ್​​​ಫೋರ್ಸ್‍ಗಳನ್ನು ನೇಮಿಸಿದಂತೆ ಸ್ವಚ್ಚತೆಯನ್ನು ಕಾಪಾಡಲು ಕ್ಯಾಪ್ಟನ್‍ಗಳನ್ನು ನೇಮಿಸುವ ಮೂಲಕ ನಗರದಲ್ಲಿನ ಬ್ಲ್ಯಾಕ್‍ಸ್ಪಾಟ್‍ಗಳನ್ನು ಪೂರ್ತಿಯಾಗಿ ತಡೆಯುವುದು ಇದರ ಮುಖ್ಯ ಉದ್ದೇಶವಾಗಿದೆ ಎಂದರು.

ನಗರದ ಸಾರ್ವಜನಿಕರಿಗೆ  ಕಸವಿಲೇವಾರಿಯ ಬಗ್ಗೆ ಅರಿವು ಮೂಡಿಸಿ, ಮನೆಗಳಿಂದಲೇ ಒಣ ಮತ್ತು ಹಸಿ ಕಸವಾಗಿ ವಿಂಗಡಿಸಿ ಸಮರ್ಪಕವಾಗಿ ವಿಲೇವಾರಿ ಮಾಡಬೇಕು. ಚರಂಡಿ ಮತ್ತು ರಸ್ತೆಗಳು ಸ್ವಚ್ಚವಾಗಿರಬೇಕು. ಪ್ಲಾಸ್ಟಿಕ್ ಬಳಕೆಯು ಕಡಿಮೆ ಮಾಡಲು ಅರಿವು ಮೂಡಿಸಬೇಕು. ಇದರಿಂದ ಸಾಂಕ್ರಾಮಿಕ ರೋಗಗಳು ಹರಡದಂತೆ ತಡೆಯಬಹುದು ಎಂದರು ಆರ್​​. ಲತಾ.

ಪ್ರತಿದಿನ ವಾರ್ಡ್‍ಗಳ ಭೇಟಿ ಮಾಡಿ ಪರೀವಿಕ್ಷಿಸಲಾಗುತ್ತದೆ. ಇದರಿಂದ ನಗರವನ್ನು ಸ್ವಚ್ಚವಾಗಿಡಲು ಹಾಗೂ ಕೊರೋನಾದಂತಹ ಮಹಾಮಾರಿಯನ್ನು ಹರಡದಂತೆ ತಡೆಯಲು ಸಹಕಾರಿಯಾಗುತ್ತದೆ ಎಂದರು.

ವಾರ್ಡ್ ನಂಬರ್ 11ರ ಒಂದು ಹೋಟೆಲ್‍ನಲ್ಲಿ ಯಾವುದೇ ರೀತಿಯಾದ ಸಾಮಾಜಿಕ ಅಂತರವನ್ನು ಪಾಲಿಸಿರಲಿಲ್ಲ. ಆದ್ದರಿಂದ ಆ ಹೋಟೆಲ್ ಅನ್ನು ಮುಚ್ಚಿಸಲಾಗಿದೆ. ಮುಂದಿನ ದಿನಗಳಲ್ಲಿ ಇದೇ ರೀತಿ ತಪ್ಪುಗಳು ನಡೆದರೆ ಕಾನೂನಿನ ರೀತಿಯಲ್ಲಿ ಕಠಿಣ ಕ್ರಮ ವಹಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದನ್ನೂ ಓದಿ: ಡ್ರಗ್ ಮಾಫಿಯಾದಲ್ಲಿರುವ ಯಾರನ್ನೂ ಬಿಡುವ ಪ್ರಶ್ನೆಯೇ ಇಲ್ಲ; ಸಚಿವ ಭೈರತಿ ಬಸವರಾಜ್‌

ಹಲವು ರಸ್ತೆಗಳಲ್ಲಿ ಕಸದ‌ ವಿಲೇವಾರಿ ಸೂಕ್ತವಾಗಿ ಆಗುತ್ತಿಲ್ಲ. ಸಾರ್ವಜನಿಕರು ಸಮರ್ಪಕವಾಗಿ ಕಸವನ್ನ ಬೇರ್ಪಡಿಸಿ ನೀಡಬೇಕು. ಎಲ್ಲೆಂದರಲ್ಲಿ ರಸ್ತೆ ಬದಿ, ಚರಂಡಿಗಳಿಗೆ ಕಸ ಎಸೆಯ ಬೇಡಿ. ಇದೇ ಕಸ ನೀರಿನಲ್ಲಿ ಕೊಚ್ಚಿ ಹೋಗಿ ಮತ್ತೊಂದು ಏರಿಯಾದಲ್ಲಿ ಸಿಕ್ಕಿಕೊಂಡು ಸಾಂಕ್ರಾಮಿಕ ರೋಗಗಳಿಗೆ ಕಾರಣ ಆಗುತ್ತದೆ. ಇದರಿಂದ ಚರಂಡಿ ನೀರಿ ಹರಿಯಲು ಸಮಸ್ಯೆ, ರೋಗಗಳು ಹೆಚ್ಚಾಗುತ್ತವೆ ಬೇಕಾಬಿಟ್ಟಿ ಕಸ ಎಸೆದರೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಲು ಅಧಿಕಾರಿಗಳಿಗೆ ಸೂಚನೆ‌ ನೀಡಿದರು.ಈ ಸಂದರ್ಭದಲ್ಲಿ ಚಿಕ್ಕಬಳ್ಳಾಪುರ ನಗರಸಭೆ ಪೌರಾಯುಕ್ತ ಲೋಹಿತ್, ವಾರ್ಡ್ ಸದಸ್ಯರು, ಕಿರಿಯ ಅಭಿಯಂತರರು, ಆರೋಗ್ಯ ನಿರೀಕ್ಷಕರು, ನೋಡಲ್ ಅಧಿಕಾರಿಗಳು ಸ್ವಚ್ಛತಾ ಕ್ಯಾಪ್ಟನ್ ಸೇರಿದಂತೆ ಮತ್ತಿತರರು ಹಾಜರಿದ್ದರು.
Published by: Ganesh Nachikethu
First published: September 7, 2020, 2:49 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading