ಖಬರ ಸ್ಥಾನಗಳಲ್ಲಿ ಶವ ಸಂಸ್ಕಾರಕ್ಕಾಗಿ ಮಾತ್ರ ಅವಕಾಶ - ಚಿಕ್ಕಬಳ್ಳಾಪುರ ಡಿಸಿ ಆರ್. ಲತಾ

ಸಾರ್ವಜನಿಕ ಸ್ಥಳಗಳಲ್ಲಿ ಆಲಂ/ಪಂಜವನ್ನು ಸ್ಥಾಪಿಸಬಾರದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಸ್ಟ್ 21 ರಿಂದ 30ರವರೆಗೆ ಮೊಹರಂ ಉದ್ದೇಶಕ್ಕಾಗಿ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ. ಮೊಹರಂ ಆಚರಣೆಗಳಲ್ಲಿ ಭಾಗವಹಿಸುವ ಭಕ್ತರು ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಗೆ ಸೀಮಿತವಾಗಿರಬೇಕು. ಸಾರ್ವಜನಿಕವಾಗಿ ಗುಂಪು ಸೇರುವುದು ಮತ್ತು ಮೆರವಣಿಗೆಯನ್ನು ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

news18-kannada
Updated:August 25, 2020, 10:02 PM IST
ಖಬರ ಸ್ಥಾನಗಳಲ್ಲಿ ಶವ ಸಂಸ್ಕಾರಕ್ಕಾಗಿ ಮಾತ್ರ ಅವಕಾಶ - ಚಿಕ್ಕಬಳ್ಳಾಪುರ ಡಿಸಿ ಆರ್. ಲತಾ
ಚಿಕ್ಕಬಳ್ಳಾಪುರ ಜಿಲ್ಲಾಧಿಕಾರಿ ಆರ್​. ಲತಾ
  • Share this:
ಚಿಕ್ಕಬಳ್ಳಾಪುರ(ಆ.25): ಮುಸ್ಲಿಂ ಬಾಂಧವರ ಮೂರನೇ ಹಬ್ಬವಾದ ಮೊಹರಂ ಹಬ್ಬವನ್ನು ಆಚರಿಸಲಿದ್ದು, ಪ್ರಸ್ತುತ ರಾಜ್ಯವು ಸೇರಿದಂತೆ ಜಿಲ್ಲೆಯಲ್ಲಿ ಕೊರೋನಾ ಸೋಂಕು ಹರಡುವುದನ್ನು ತಡೆಗಟ್ಟಲು ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಮೊಹರಂ ಹಬ್ಬವನ್ನು ಆಚರಿಸುವ ಸಲುವಾಗಿ ಮಸೀದಿ, ದರ್ಗಾ, ಖಬರ್‍ಸ್ಥಾನ ಅಥವಾ ಅಶುರ್ಖಾನಾ ಸ್ಥಳಗಳಲ್ಲಿ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರದ ಸುತ್ತೋಲೆಯ ನಿರ್ದೇಶನಗಳಂತೆ  ಜನಸಂದಣಿಯನ್ನು ತಡೆಯುವುದು ಅತ್ಯವಶ್ಯಕ. ಯಾವುದೇ ಅಹಿತಕರ ಘಟನೆಗಳಿಗೆ ಆಸ್ಪದ ನೀಡದಂತೆ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಮುಂಜಾಗ್ರತಾ ಹಾಗೂ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕಾಗಿದೆ. ವಿಪತ್ತು ನಿರ್ವಹಣಾ ಕಾಯ್ದೆ-2005 ರಡಿ ಪ್ರದತ್ತವಾದ ಅಧಿಕಾರದಂತೆ ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಸೋಂಕು ಹರಡದಂತೆ ಪರಿಣಾಮಕಾರಿ ನಿಯಂತ್ರಣಾ ಕ್ರಮಗಳನ್ನು  ಕೈಗೊಳ್ಳಬೇಕು. ಈ ಹಿನ್ನೆಲೆಯಲ್ಲಿ (ಕೋವಿಡ್-19 ರೆಗ್ಯೂಲೆಷನ್-2020)ನಿಯಮ-12, ವಿಪತ್ತು ನಿರ್ವಹಣಾ ಕಾಯ್ದೆ-2005 ರ ಕಲಂ 30,33 ರಡಿ ಪ್ರದತ್ತವಾದ ಅಧಿಕಾರದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲು ಜಿಲ್ಲಾಧಿಕಾರಿಗಳಾದ ಆರ್. ಲತಾ ಆದೇಶ ಹೊರಿಡಿಸಿದ್ದಾರೆ.

ಸಾರ್ವಜನಿಕ ಸ್ಥಳಗಳಲ್ಲಿ  ಆಲಂ/ಪಂಜವನ್ನು ಸ್ಥಾಪಿಸಬಾರದು. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಆಗಸ್ಟ್ 21 ರಿಂದ 30ರವರೆಗೆ ಮೊಹರಂ ಉದ್ದೇಶಕ್ಕಾಗಿ ಸಭೆ ಮತ್ತು ಮೆರವಣಿಗೆಯನ್ನು ನಿಷೇಧಿಸಿದೆ. ಮೊಹರಂ ಆಚರಣೆಗಳಲ್ಲಿ ಭಾಗವಹಿಸುವ ಭಕ್ತರು ಸಾಮಾಜಿಕ ಅಂತರದೊಂದಿಗೆ ಕನಿಷ್ಠ ಸಂಖ್ಯೆಗೆ ಸೀಮಿತವಾಗಿರಬೇಕು. ಸಾರ್ವಜನಿಕವಾಗಿ ಗುಂಪು ಸೇರುವುದು ಮತ್ತು ಮೆರವಣಿಗೆಯನ್ನು ನಡೆಸುವುದು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಖಬರ್‍ಸ್ಥಾನ ಸೇರಿದಂತೆ ಯಾವುದೇ ತೆರೆದ ಸ್ಥಳಗಳಲ್ಲಿ ಯಾವುದೇ ರೀತಿಯ ಸಭೆಗಳನ್ನು ನಡೆಸಲು ಅನುಮತಿಸಲಾಗುವುದಿಲ್ಲ ಮತ್ತು ಖಬರಸ್ಥಾನಗಳಲ್ಲಿ ಶವ ಸಂಸ್ಕಾರದ ಉದ್ದೇಶಕ್ಕಾಗಿ ಮಾತ್ರ ಅವಕಾಶವಿರುತ್ತದೆ ಹೊರೆತು ಮೊಹರಂ ಆಚರಣೆಗೆ ಇರುವುದಿಲ್ಲ. ಮಜಿಲಿಸ್, ಹಜಾರತ್ ಇಮಾಮ್ ಹುಸೇನ್ (ಎ.ಎನ್) (ಧಾರ್ಮಿಕ ಧರ್ಮಉಪದೇಶ) ಅನ್ನು ಭೌತಿಕ ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಕೋವಿಡ್-19 ರ ಶಿಷ್ಟಾಚಾರದ ಎಲ್ಲಾ ಅಂಶಗಳನ್ನು ಪಾಲನೆಮಾಡುವುದರೊಂದಿಗೆ ಆಚರಣೆ ಮಾಡಲು ಅನುಮತಿಸಲಾಗಿದೆ.

ಅಶೂರ್ಖಾನಾ, ಮಸೀದಿ, ದರ್ಗಾ ಮತ್ತು ಆಲಂ, ತಾಜಿಯಾಸ್‍ಗಳಲ್ಲಿ ನಿಗಧಿತ ಸ್ಥಳಗಳಲ್ಲಿ ಭೌತಿಕ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುರೊಂದಿಗೆ ಕಡ್ಡಾಯವಾಗಿ ಸೀಲ್ ಮಾಡಿದ ಪಟ್ಟಣ, ಪ್ಯಾಕೇಟ್‍ಗಳಲ್ಲಿ ಪ್ರಸಾದ, ಶರ್ಬತ್, ನೀರನ್ನು ವಿತರಣೆ ಮಾಡಲು ನಿಗಧಿಪಡಿಸಿದ ಸ್ಥಳದಲ್ಲಿ ಮಾತ್ರ ನೀಡಲು ಕ್ರಮಕೈಗೊಳ್ಳುತಕ್ಕದ್ದು.

ಅಶೂರ್ಖಾನಾ, ಮಸೀದ್, ದರ್ಗಾ ಮತ್ತು ಆಲಂ, ತಾಜಿಯಾಸ್ ಸ್ಥಾಪಿಸಲಾದ ಇತರ ಸ್ಥಳಗಳಲ್ಲಿ ಸ್ವಚ್ಚತೆಯನ್ನು ಕಾಪಾಡಿಕೊಳ್ಳಲು ಕಡ್ಡಾಯವಾಗಿ ರೋಗನಿರೋಧ, ಸ್ಯಾನಿಟೈಸೆಷನ್ ಮಾಡತಕ್ಕದ್ದು,  ಫಾತೇಹ ಮತ್ತು ಮೊಜರಸ್-ಇ-ಹಜರತ್ ಇಮಾಮ್ ಹುಸೇನ್‍ಗಳಲ್ಲಿ ಜನಸಂದಣಿಯನ್ನು ತಡೆಗಟ್ಟುವ ಸಲುವಾಗಿ ಭಕ್ತರು ತಮ್ಮ ತಮ್ಮ ಮನೆಗಳಲ್ಲಿಯೇ ಫತೇಹ, ಮಜಲಿಸ್‍ಗಳನ್ನು ಆಚರಿಸಲು ಸೂಚಿಸಿದೆ. ನೆಲಹಾಸುಗೆಗಳು, ಜಾನಿಮಾನ್ ಗಳನ್ನು ತೆಗೆದು ಕಡ್ಡಾಯವಾಗಿ ಭೌತಿಕ, ಸಾಮಾಜಿಕ ಅಂತರವನ್ನು ಕಾಯ್ದುಕೊಂಡು ಮಜಲಿಸ್ ಹಜರತ್ ಇಮಾಮ್ ಹುಸೇನ್‍ನಲ್ಲಿ ಭಾಗವಹಿಸಲು ಸೂಚಿಸತಕ್ಕದ್ದು.

ಪಂಜ, ಆಲಂ ಮತ್ತು ತಾಜಿಯಾತ್‍ವನ್ನು ಸ್ಪರ್ಶಿಸಬಾರದು ಹಾಗೂ ದೂರದಿಂದಲೇ ಜಿಯಾರತ್ ಅನ್ನು ವಿಕ್ಷಿಸಬೇಕು. ಅಶೂರ್ಖಾನಾ, ಮಸಜೀದ್, ದರ್ಗಾ ಮತ್ತು ಆಲಂ, ತಾಜಿಯಾಸ್‍ಗಳಿಗೆ  ಜನಸಂದಣಿಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಭಕ್ತರ ಪ್ರವೇಶವನ್ನು ನಿಯಂತ್ರಿಸತಕ್ಕದ್ದು, ಅಶೂರ್ಖಾನಾ, ಮಸಜೀದ್, ದರ್ಗಾ ಮತ್ತು ಆಲಂ, ತಾಜಿಯಾಸ್‍ಗಳಿಗೆ ಪ್ರವೇಶಿಸಬೇಕಾದ  ಭಕ್ತರ ಸಂಖ್ಯೆಯನ್ನು ನಿಗಧಿಗೊಳಿಸಬೇಕು. ಭಕ್ತಾಧಿಗಳು ಸ್ಲಾಟ್‍ಗಳನ್ನು ಆಕ್ರಮಿಸಿಕೊಂಡ ನಂತರ ಜನಸಂದಣಿ ತಡೆಯಲು ಗೇಟ್‍ಗಳನ್ನು ಮುಚ್ಚತಕ್ಕದ್ದು,  ಲೌಡ್ ಸ್ವೀಕರ್‍ನಲ್ಲಿ ಭಕ್ತಾದಿಗಳು ಮಾಡಬೇಕಾದ, ಮಾಡಬಾರದಾದ ಕಾರ್ಯಗಳ ಬಗ್ಗೆ ಕಡ್ಡಾಯವಾಗಿ ತಿಳಿಸತಕ್ಕದ್ದು. ಎಲ್ಲಾ ಭಕ್ತರಿಗೆ ಫೇಸ್ ಮಾಸ್ಕ್ ಬಳಕೆ ಕಡ್ಡಾಯವಾಗಿರುತ್ತದೆ.ಇದನ್ನೂ ಓದಿ: KM Shivalinge Gowda: ಜೆಡಿಎಸ್​​ ಶಾಸಕ ಶಿವಲಿಂಗೇಗೌಡಗೆ ಕೊರೋನಾ ಪಾಸಿಟಿವ್​​​

ಕೈಕಾಲು, ಮುಖವನ್ನು ಭಕ್ತಾಧಿಗಳು ಮನೆಯಲ್ಲಿಯೇ ತೊಳೆದುಕೊಂಡು ಬರತಕ್ಕದ್ದು, ಅಶೂರ್ಖಾನಾ, ಮಸಜೀದ್, ದರ್ಗಾ ಮತ್ತು ಆಲಂ, ತಾಜಿಯಾಸ್ s ಸ್ಥಾಪಿಸಲಾದ ಸ್ಥಳಗಳಲ್ಲಿ ಕನಿಷ್ಠ 6 ಅಡಿಗಳು ಭೌತಿಕ, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಬೇಕು,   ಪ್ರವೇಶ ದ್ವಾರದಲ್ಲಿ ಥರ್ಮಲ್ ಸ್ಕ್ಯಾನಿಂಗ್ ಮಾಡತಕ್ಕದ್ದು, ರಾಜ್ಯ ಸರ್ಕಾರದಿಂದ ಹಾಗೂ ಜಿಲ್ಲಾಡಳಿತದಿಂದ ಹೊರಡಿಸುವ ಆದೇಶ, ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸತಕ್ಕದ್ದು ಎಂದು ಜಿಲ್ಲಾಧಿಕಾರಿ ಆರ್. ಲತಾ  ತಿಳಿಸಿದ್ದಾರೆ.
Published by: Ganesh Nachikethu
First published: August 25, 2020, 9:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading