HOME » NEWS » Coronavirus-latest-news » CHHATTISGARH GOVERNMENT HAS SUSPENDED THE THIRD PHASE OF COVID 19 VACCINATION SESR

18-44ರ ವಯೋಮಾನದವರಿಗೆ ಕೋವಿಡ್​ 19 ಲಸಿಕೆ ಇಲ್ಲ; ಛತ್ತೀಸಗಢ ಸರ್ಕಾರದ ನಿರ್ಧಾರ

ಛತ್ತೀಸಗಡ ಸರ್ಕಾರ ಮೂರನೇ ಹಂತದ ಅಂದರೆ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರ ಲಸಿಕೆ ವಿತರಣೆ ಕಾರ್ಯವನ್ನು ತಾತ್ಕಲಿಕವಾಗಿ ಅಮಾನತು ಮಾಡಿದೆ

news18-kannada
Updated:May 6, 2021, 9:10 PM IST
18-44ರ ವಯೋಮಾನದವರಿಗೆ ಕೋವಿಡ್​ 19 ಲಸಿಕೆ ಇಲ್ಲ; ಛತ್ತೀಸಗಢ ಸರ್ಕಾರದ ನಿರ್ಧಾರ
ಸಾಂದರ್ಭಿಕ ಚಿತ್ರ
  • Share this:
ಕೊರೋನಾ ವಿರುದ್ಧ ಹೋರಾಟದಲ್ಲಿ ನಮ್ಮನ್ನು ರಕ್ಷಿಸಿಕೊಳ್ಳಲಿರುವ ಸದ್ಯದ ಮಾರ್ಗ ಎಂದರೇ ಲಸಿಕೆ ಪಡೆಯುವುದು. ಲಸಿಕೆ ಪಡೆದವರಲ್ಲಿ ಸೋಂಕು ತಗಲುವ ಸಾಧ್ಯತೆ ಕಡಿಮೆ ಇದೆ ಎಂದು ಈಗಾಗಲೇ ಏಮ್ಸ್​ ವೈದ್ಯರು ತಿಳಿಸಿದ್ದಾರೆ. ಇದೇ ಹಿನ್ನಲೆ ಕೇಂದ್ರ 18 ವರ್ಷದವರಿಗೂ ಮೇಲ್ಪಟ್ಟವರಿಗೂ ಕೊರೋನಾ ಲಸಿಕೆ ವಿತರಣೆಗೆ ಮುಂದಾಗಿದೆ. ಎರಡನೇ ಅಲೆ ತೀವ್ರ ಸ್ವರೂಪ ಪಡೆದಿರುವ ಈ ಹೊತ್ತಿನಲ್ಲಿ ಲಸಿಕೆ ಪಡೆಯಲು ಜನರು ಕೂಡ ಮುಂದಾಗುತ್ತಿದ್ದಾರೆ. ಆದರೆ, ಲಸಿಕೆಯ ಕೊರತೆಯಿಂದಾಗಿ ನಿರೀಕ್ಷೆಗೆ ಮೀರಿದ ಮಟ್ಟದ ವಿತರಣಾ ಕಾರ್ಯ ನಡೆಯುತ್ತಿಲ್ಲ. ಹಲವು ರಾಜ್ಯಗಳಲ್ಲಿ ಈಗಾಗಲೇ ಲಸಿಕೆ ಬಿಕ್ಕಟ್ಟು ಉದ್ಭವಿಸಿದೆ. ಎರಡನೇ ಹಂತದ ಲಸಿಕೆ ವಿತರಣೆಯಲ್ಲಿ ಭಾಗಿಯಾದವರು ಮೊದಲ ಡೋಸ್​ ಪಡೆದು ಎರಡನೇ ಡೋಸ್​ಗೆ ಕಾಯುವಂತಹ ಪರಿಸ್ಥಿತಿ ಉದ್ಭವಿಸಿದೆ. ಇನ್ನು ಮೂರನೇ ಹಂತದಲ್ಲಿ ದಾಖಲಿಸಿಕೊಂಡಿರುವ ಶೇ 2 ರಷ್ಟು ಮಂದಿ ಕೂಡ ಲಸಿಕೆ ಪಡೆಯುವಲ್ಲಿ ವಿಫಲರಾಗಿದ್ದಾರೆ. ಇದೇ ಹಿನ್ನಲೆ ಛತ್ತೀಸಗಡ ಸರ್ಕಾರ ಮೂರನೇ ಹಂತದ ಅಂದರೆ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವರ ಲಸಿಕೆ ವಿತರಣೆ ಕಾರ್ಯವನ್ನು ತಾತ್ಕಲಿಕವಾಗಿ ಅಮಾನತು ಮಾಡಿದೆ. ಆದ್ಯತಾನುಸರವಾಗಿ ಈ ಲಸಿಕೆ ವಿತರಣಾ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ

ಸಮಾಜದಲ್ಲಿ ಆರ್ಥಿಕವಾಗಿ ದುರ್ಬಲವಿರುವ ವರ್ಗದವರಿಗೆ ಲಸಿಕೆಯ ಆದ್ಯತೆ ಹೆಚ್ಚಿರುವ ಹಿನ್ನಲೆ ಅವರಿಗೆ ಲಸಿಕೆ ನೀಡುವಂತೆ ಹೈ ಕೋರ್ಟ್​ ಆದೇಶ ನೀಡಿತು. ಈ ಹಿನ್ನಲೆ ಛತ್ತೀಸಗಡ ಸರ್ಕಾರ 18 ವರ್ಷ ಮೇಲ್ಪಟ್ಟ 44 ವರ್ಷದೊಳಗಿನವಿರಗೆ ಲಸಿಕೆ ನೀಡುವ ಕಾರ್ಯವನ್ನು ಸ್ಥಗಿತಗೊಳಿಸಿದೆ. ಇದೇ ವೇಳೆ ಮೂರನೇ ಹಂತದ ಎಲ್ಲರಿಗೂ ಸಮವಾಗಿ ಲಸಿಕೆ ವಿತರಿಸುವ ಹೊಸ ಯೋಜನೆಯನ್ನು ರೂಪಿಸಲು ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿಯನ್ನು ರಚಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯ ಸರ್ಕಾರ ಏಪ್ರಿಲ್​ 30ರಿಂದ ಲಸಿಕೆ ನೀಡಲು ಸೂಚನೆ ನೀಡಿದ್ದು, ಮೊದಲು ಬಡವರಲ್ಲಿ ಕಡು ಬಡವರಿಗೆ ನೀಡಬೇಕು. ನಂತರ ಬಿಪಿಎಲ್​ ವರ್ಗದವರಿಗೆ ನಂತರ ಬಡತನ ರೇಖೆ ಮೇಲಿನ ಗುಂಪಿನವರಿಗೆ ಲಸಿಕೆ ನೀಡಲಾಗುವುದು ಎಂದು ಛತ್ತೀಸಗಡ ಸರ್ಕಾರ ಆದೇಶಿಸಿದೆ.

ಇದನ್ನು ಓದಿ: ಕೊರೋನಾ ಶಮನಕ್ಕಾಗಿ ಕುಕ್ಕೆ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದೆ ವಿಶೇಷ ಧನ್ವಂತರಿ ಹೋಮ

ಮೇ 1ರಿಂದ ಮೂರನೇ ಹಂತದ ಲಸಿಕೆ ಆರಂಭವಾಗಿದ್ದು ರಾಜ್ಯ ಸರ್ಕಾರದ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿತು. ಬಳಿಕ ಆದೇಶ ನೀಡಿದ ನ್ಯಾಯಲಯ ಲಸಿಕೆಗಳ ಹಂಚಿಕೆಯ ಅನುಪಾತವನ್ನು ಸಮನಾಗಿ ನಿಗದಿಪಡಿಸುವಂತೆ ತಿಳಿಸಿದೆ.

ಹೈ ಕೋರ್ಟ್​ ಆದೇಶದ ಬೆನ್ನಲ್ಲೆ ರಾಜ್ಯ ಸರ್ಕಾರ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಿದೆ. ಈ ಮೂಲಕ ದುರ್ಬಲ ವರ್ಗದವರಿಗೆ ರೋಗ ಹರಡದಂತೆ ತಡೆಗಟ್ಟಲು ಯೋಜನೆ ರೂಪಿಸಿದೆ. ಈ ನಡುವೆ 44 ವರ್ಷ ಮೇಲ್ಪಟ್ಟವರಿಗೆ ಎಂದಿನಂತೆ ಲಸಿಕೆ ವಿತರಣಾ ಕಾರ್ಯ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Published by: Seema R
First published: May 6, 2021, 9:07 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories