ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಚಾಮರಾಜನಗರವೇ ಮುಂದು - ಇಲ್ಲಿದೆ ಸಂಪೂರ್ಣ ವಿವರ

ಸೋಂಕಿತರ ಸಂಪರ್ಕಗಳನ್ನು ಪತ್ತೆ ಹಚ್ಚಿ ನಿಗಾ ವಹಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡದಂತೆ ಕ್ರಮವಹಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ ರವಿ

news18-kannada
Updated:August 26, 2020, 10:55 AM IST
ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಚಾಮರಾಜನಗರವೇ ಮುಂದು - ಇಲ್ಲಿದೆ ಸಂಪೂರ್ಣ ವಿವರ
ಸಾಂದರ್ಭಿಕ ಚಿತ್ರ
  • Share this:
ಚಾಮರಾಜನಗರ(ಆ.26): ಸತತ ಮೂರು ತಿಂಗಳ ಕಾಲ ಹಸಿರುವಲಯದಲ್ಲಿದ್ದು ದಾಖಲೆ ನಿರ್ಮಿಸಿದ್ದ ಚಾಮರಾಜನಗರ ಜಿಲ್ಲೆ ಈಗ ಕೊರೋನಾ ವಿರುದ್ಧದ ಹೋರಾಟದಲ್ಲೂ ಮುಂಚೂಣಿಯಲ್ಲಿದೆ. ಕೋವಿಡ್ ವಾರ್ ರೂಮ್​​​ನ ಕಳೆದ 15 ದಿನಗಳ ಅಂಕಿ ಅಂಶಗಳು ಇದನ್ನು ದೃಢಪಡಿಸಿವೆ. 

ಸೋಂಕಿತರ ಪ್ರಾಥಮಿಕ ಸಂಪರ್ಕಿತರನ್ನು ಪತ್ತೆ ಹಚ್ಚುವಿಕೆಯಲ್ಲಿ ಬೇರೆಲ್ಲಾ ಜಿಲ್ಲೆಗಳಿಗಿಂತ ಚಾಮರಾಜನಗರ ಮುಂಚೂಣಿಯಲ್ಲಿದೆ. ಪ್ರತಿ ರೋಗಿಯ ಟ್ರಾವೆಲ್ ಹಿಸ್ಟರಿಯನ್ನು ಅನುಸರಿಸಿ ಪ್ರಾಥಮಿಕ ಸಂಪರ್ಕಿತರನ್ನು ಗುರುತಿಸಿ ಕ್ವಾರಂಟೈನ್ ಮಾಡುವುದು. ಅವರಿಗೆ ಕೊರೋನಾ ಪರೀಕ್ಷೆ ನಡೆಸಿ ಸೋಂಕು ಹೆಚ್ಚಿನ ಪ್ರಮಾಣದಲ್ಲಿ ಹರಡದಂತೆ ನಿಗಾವಹಿಸುವುದರಲ್ಲಿ ಜಿಲ್ಲಾಡಳಿತ ಮುಂದಿದೆ. ಸಂಪರ್ಕಿತರ ಪತ್ತೆ ಹಚ್ಚುವಿಕೆಯ ದರ ಚಾಮರಾಜನಗರ ಜಿಲ್ಲೆಯಲ್ಲಿ ಪ್ರತಿ ರೋಗಿಗೆ  7.1 ಇದೆ. ನಂತರ ಮಂಡ್ಯ 5.7 ದಾವಣಗೆರೆ 4.9 ಇದೆ.

ಸೋಂಕಿತರ ಸಂಪರ್ಕಗಳನ್ನು  ಪತ್ತೆ ಹಚ್ಚಿ ನಿಗಾ ವಹಿಸುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಸೋಂಕು ಹರಡದಂತೆ ಕ್ರಮವಹಿಸಲು ಸಾಧ್ಯವಾಗಲಿದೆ ಎನ್ನುತ್ತಾರೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಂ.ಸಿ ರವಿ. ಕಾಂಟ್ಯಾಕ್ಟ್ ಟ್ರೇಸಿಂಗ್ ವಿಚಾರದಲ್ಲಿ ಎಲ್ಲಾ ಜಿಲ್ಲೆಗಳಿಗಿಂತ ನಾವು ಮುಂಚೂಣಿಯಲ್ಲಿದ್ದೇವೆ. ಸಂಪರ್ಕಿತರನ್ನು ಶೀಘ್ರವಾಗಿ ನಿಖರವಾಗಿ ಪತ್ತೆಹಚ್ಚಿ ಅಗತ್ಯಕ್ರಮ ಕೈಗೊಳ್ಳುವ ಮೂಲಕ ಕೊರೋನಾ ನಿಯಂತ್ರಣದಲ್ಲಿಡಲು ಪ್ರಯತ್ನಿಸುತ್ತಿದ್ದೇವೆ ಎಂದು ಅವರು ತಿಳಿಸಿದ್ದಾರೆ.

ಇದಲ್ಲದೆ ಕ್ವಾರಂಟೈನ್  ಮಾರ್ಗದಂಡಗಳ ಉಲ್ಲಂಘನೆ ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ಹೆಚ್ಚು ಎಫ್​​ಐಆರ್​​ಗಳನ್ನು ದಾಖಲಿಸಲಾಗಿದೆ. ಚಾಮರಾಜನಗರ ಜಿಲ್ಲೆಯಲ್ಲಿ 41 ಎಫ್​ಐಆರ್​ ದಾಖಲಿಸಲಾಗಿದೆ. ನಂತರ ಸ್ಥಾನದಲ್ಲಿ ಬೀದರ್ 30, ಗದಗ್ 33 ಪ್ರಕರಣಗಳು ದಾಖಲಾಗಿವೆ.

ಕೊವೀಡ್-19ನಿಂದ ಉಂಟಾಗಿರುವ  ಸಾವಿನ ಸಂಖ್ಯೆ ರಾಜ್ಯದಲ್ಲಿ ಸರಾಸರಿ ಪ್ರತಿ ಹತ್ತು ಲಕ್ಷಕ್ಕೆ 66.1 ಇದ್ದರೆ ಚಾಮರಾಜನಗರ ಜಿಲ್ಲೆಯಲ್ಲಿ ಈ ಪ್ರಮಾಣ 26.6 ಮಾತ್ರ ಇದೆ. ಇದಲ್ಲದೆ ಕೊಡುಗು ಹೊರತುಪಡಿಸಿ ಅತೀ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿರುವುದು ಚಾಮರಾಜನಗರ ಜಿಲ್ಲೆ ಮಾತ್ರ ಎಂಬುದು ಕೋವಿಡ್ ವಾರ್ ರೂಮ್​​ನ ಅಂಕಿಅಂಶಗಳಿಂದ ಗೊತ್ತಾಗಿದೆ.

ಕೇರಳ ಹಾಗು ತಮಿಳುನಾಡು ರಾಜ್ಯಗಳ ಗಡಿಗೆ ಹೊಂದಿಕೊಂಡಂತಿರುವ ಚಾಮರಾಜನಗರ ಜಿಲ್ಲೆಯಲ್ಲಿ ಸತತ ಮೂರು ತಿಂಗಳ ಕಾಲ ಒಂದೇ ಒಂದು ಕೊರೋನಾ ಪ್ರಕರಣ ವರದಿಯಾಗಿರಲಿಲ್ಲ. ಆದರೆ ಲಾಕ್​​ಡೌನ್ ನಿಯಮಗಳನ್ನು ಹಂತ ಹಂತವಾಗಿ ಸಡಿಲಗೊಳಿಸುತ್ತಿದ್ದಂತೆಯೇ ಕೊರೋನಾ ಹೆಮ್ಮಾರಿ ಹಸಿರುವಲಯದಲ್ಲಿದ್ದ ಗಡಿ ಜಿಲ್ಲೆಗೂ ಕಾಲಿಟ್ಟಿತು.ಇದನ್ನೂ ಓದಿ: ಇಂದು ಕಾಂಗ್ರೆಸ್ ಮತ್ತು ಕಾಂಗ್ರೆಸೇತರ ಸಿಎಂಗಳೊಂದಿಗೆ ಸೋನಿಯಾ ಗಾಂಧಿ ಸಭೆ: ಜಿಎಸ್​ಟಿ ಬಗ್ಗೆ ಚರ್ಚೆ

ಜೂನ್ 9ರಂದು ಜಿಲ್ಲೆಯಲ್ಲಿ ಮೊದಲ ಪ್ರಕರಣ ದಾಖಲಾಗಿತ್ತು. ನಂತರ ಜೂನ್ 19 ರಂದು ಎರಡನೇ ಪ್ರಕರಣ ವರದಿಯಾಗಿ ಅಲ್ಲಿಂದ ಇಲ್ಲಿಯವರೆಗೆ 2109 ಪ್ರಕರಣಗಳು ಪತ್ತೆಯಾಗಿವೆ. 28 ಮಂದಿ ಕೋವಿಡ್-19 ಗೆ ಬಲಿಯಾಗಿದ್ದಾರೆ. ಇದುವರೆಗೆ 1628 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, 440 ಸಕ್ರಿಯ ಪ್ರಕರಣಗಳಿವೆ.
Published by: Ganesh Nachikethu
First published: August 26, 2020, 10:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading