ಕೊರೋನಾ ಸಂಕಷ್ಟ: ಹಿರಿಯ ನಾಗರಿಕರ ಬಸ್​​ ಪಾಸ್​ ನಿಲ್ಲಿಸಿದ ಬಿಎಂಟಿಸಿ

ನಾವು ಕೆಲಸ ಮಾಡಲೇಬೇಕು ಸರ್, ರಿಯಾಯತಿ ಪಾಸ್ ಕೊಡದೇ ಹೋದರೆ ಹೇಗೆ? ನಾವೇನು ಮಾಡಬೇಕು ಹೇಳಿ? ಎಂಬ ಹಿರಿಯ ನಾಗರಿಕ ಗಣೇಶ್ ರಾವ್ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತದೆ.

news18-kannada
Updated:June 8, 2020, 7:24 AM IST
ಕೊರೋನಾ ಸಂಕಷ್ಟ: ಹಿರಿಯ ನಾಗರಿಕರ ಬಸ್​​ ಪಾಸ್​ ನಿಲ್ಲಿಸಿದ ಬಿಎಂಟಿಸಿ
ಬಿಎಂಟಿಸಿ ಬಸ್​ಗಳು
  • Share this:
ಬೆಂಗಳೂರು(ಜೂ.08): ಲಾಕ್​​ಡೌನ್ ಸಡಲಿಕೆ ಬಳಿಕ ಸಾರಿಗೆ ವಾಹನದಲ್ಲಿ ಹಿರಿಯ ನಾಗರಿಕರು ಪ್ರಯಾಣ ಮಾಡಬೇಕಾ? ಮಾಡಬಾರದಾ? ಈ ಪ್ರಶ್ನೆಗೆ ಖುದ್ದು ಬಿಎಂಟಿಸಿ ಅಧಿಕಾರಿಗಳಿಗೆ ಇನ್ನೂ ಗೊಂದಲ ಪರಿಹಾರವಾಗಿಲ್ಲ. ಆದರೆ ಅವರು ಬಸ್‌ನಲ್ಲಿ ಪ್ರಯಾಣ ಮಾಡುವುದು ನಿರಾಂತಕವಾಗಿದೆ. ಹಿರಿಯ ನಾಗರಿಕರಿಗೆ ಬಸ್ ಪಾಸ್ ಕೊಡುವುದನ್ನು ಬಿಎಎಂಟಿಸಿ ಸದ್ಯ ಸ್ಥಗಿತಗೊಳಿಸಿರುವುದು ಇವರಿಗೆ ನುಂಗಲಾರದ ತುತ್ತಾಗಿದೆ. ಇಳಿವಯಸ್ಸಿನಲ್ಲಿ ತುತ್ತು ಚೀಲ ತುಂಬಿಸಲು  ಕಷ್ಟಪಡುತ್ತಿದ್ದಾರೆ.

ಕೊರೊನಾ ಸೋಂಕು ದಿನೇ ದಿನೇ ಹೆಚ್ಚಾಗುತ್ತಿದೆ. ಆದರೆ ಅದರ ಜೊತೆ ಮುಂಜಾಗ್ರತೆಯಿಂದ ಜೀವಿಸುವುದು ಅನಿವಾರ್ಯವಾಗಿದೆ. ಲಾಕ್​​ಡೌನ್ ಸಡಲಿಕೆಯಾಗಿ ಒಂದು ತಿಂಗಳೇ ಕಳೆದಿದೆ. ಮತ್ತೆ ಜನಜೀವನ ಮತ್ತೆ‌ ಹಳಿಗೆ ಬರಲು ಪ್ರಯತ್ನಿಸಲಾಗುತ್ತಿದೆ. ಆದರೆ ಕೊರೊನಾ ಸೋಂಕು ಬೇಗ ಹರಡುವ ಸಾಧ್ಯತೆಯಿರುವ ಹಿರಿಯನಾಗರಿಕರು, ಮಕ್ಕಳು, ಗರ್ಭಿಣಿಯಿಗೆ ಇದು ಇನ್ನಿಲ್ಲದಂತೆ ಕಾಡುತ್ತಿದೆ. ಅದರಲ್ಲೂ ಎಲ್ಲರೂ ಇದ್ದೂ ಇಲ್ಲದಂತಿರುವ ಬಹುತೇಕ ಹಿರಿಯ ನಾಗರಿಕರು ಪಾಡು ಆ ದೇವರಿಗೆ ಪ್ರೀತಿ.

ದಿನಬೆಳಗಾದ್ರೆ ತುತ್ತಿನ ಚೀಲ ತುಂಬಲು  60, 70, 75 ರ ಮುಪ್ಪು ಮುಪ್ಪು ಮುದುಕರು, ಅಜ್ಜಿಯರು ಈಗಲೂ ಕೆಲಸಕ್ಕೆ ಹೋಗುತ್ತಿದ್ದಾರೆ. ಬೆಂಗಳೂರಿನಲ್ಲಿ ಹಿರಿಯ ನಾಗರಿಕರಿಗೆ ಅನುಕೂಲವಾಗಲಿ ಎಂದು ರಿಯಾಯತಿ ದರದಲ್ಲಿ ಬಿಎಂಟಿಸಿ ಪಾಸ್ ನೀಡಲಾಗುತ್ತಿದೆ‌. 930 ರೂಪಾಯಿಯ ತಿಂಗಳ ಪಾಸ್​ನಿಂದಾಗಿ ತಾವು ಕೆಲಸ ಮಾಡುವ ಪ್ರದೇಶಗಳಿಗೆ ಹೋಗಿಬರಲು ಹಿರಿಯ ನಾಗರಿಕರಿಗೆ ಸಹಾಯಕರಾಗುತ್ತಿತ್ತು. ಆದರೀಗ ಕೊವಿಡ್ 19 ಹಿನ್ನೆಲೆ ಹಿರಿಯನಾಗರಿಕರಿಗೆ ಪಾಸ್ ನೀಡಲಾಗುತ್ತಿಲ್ಲ. ಇದರಿಂದ ಹಿರಿಯ ನಾಗರಿಕರು ಕೆಲಸಕ್ಕೆ ಹೋಗಲು ಬಸ್ ಟಿಕೆಟ್ ಖರೀದಿಸಿ ಪ್ರಯಾಣ ಮಾಡುತ್ತಿದ್ದಾರೆ.

ಇದನ್ನೂ ಓದಿ: ಭಾರತದಲ್ಲಿ ಕೋವಿಡ್​​-19: 2.5 ಲಕ್ಷ ದಾಟಿದ ಸೋಂಕಿತರ ಸಂಖ್ಯೆ, ಸಾವಿನ ಸಂಖ್ಯೆ 7,117ಕ್ಕೆ ಏರಿಕೆ

ಕೆಲವರು ಯಾಕೆ ಪ್ರಯಾಣ ಮಾಡುತ್ತಿದ್ದೀರಿ, ಮನೆಯಲ್ಲಿರಿ ಎಂದೇಳುತ್ತಿದ್ದಾರೆ. ಆದರೆ ಹಿರಿಜೀವಿಗಳ ಮಾತು ಕೇಳಿದ್ರೆ ಎಂಥವರ ಮನವೂ ಕಲಕುತ್ತೆ. ಬಡತನ, ಅಸಹಾಯಕತೆ, ಮಕ್ಕಳು ನೋಡಿಕೊಳ್ಳದ ಹಿನ್ನೆಲೆಯಲ್ಲಿ ಮುಪ್ಪಿನ ವಯಸ್ಸಿನಲ್ಲಿ ಕೆಲಸಕ್ಕೆ ಹೋಗಲು ಹಿರಿಜೀವಗಳು ಬಿಎಂಟಿಸಿ ಬಸ್ ನೆಚ್ಚಿಕೊಂಡಿದ್ದಾರೆ. ಕೊರೊನಾ ಮುಂಚೆ ಒಂದು ಸಾವಿರಕ್ಕೂ ಹೆಚ್ಚು ಹಿರಿಯ ನಾಗರಿಕರು ತಿಂಗಳ ಪಾಸ್ ಪಡೆಯುತ್ತಿದ್ದರು. ರಿಯಾಯತಿ ದರ ತಿಂಗಳ ಪಾಸ್ ನೀಡದೇ ಇದ್ದಕ್ಕೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಹಿನ್ನೆಲೆಯಲ್ಲಿ ಹಿರಿಯ ನಾಗರಿಕರಿಗೆ ಪ್ರಯಾಣ ನಿಷೇಧ ನೀಡಲಾಗಿದೆ. ಈ ತಿಂಗಳಿನಿಂದ ಹಿರಿಯ ನಾಗರಿಕರಿಗೆ ಬಿಎಂಟಿಸಿ ತಿಂಗಳ ಪಾಸ್ ನೀಡುತ್ತಿಲ್ಲ. ಹಿರಿಜೀವಿಗಳಿಗೆ ರಿಯಾಯತಿ ದರದಲ್ಲಿ‌ ನೀಡುತ್ತಿದ್ದ ಪಾಸ್ ಬಿಎಂಟಿಸಿ ಸ್ಥಗಿತಗೊಳಿಸಿದೆ.

ಹಿರಿಯ ನಾಗರಿಕರ ಪ್ರಯಾಣದ ಬಗ್ಗೆ ಬಿಎಂಟಿಸಿಗೆ ಗೊಂದಲವಿದೆ. ಬಸ್​ನಲ್ಲಿ ಹಿರಿಜೀವಿಗಳ ಪ್ರಯಾಣ ನಿಷೇಧ ಕಡ್ಡಾಯವೇ? ಸಲಹೆಯೋ? ಅಥವಾ ಆಯ್ಕೆಯೇ ಎಂಬ ಇನ್ನೂ ಸ್ಪಷ್ಟತೆ ಇಲ್ಲ. ಈ ಬಗ್ಗೆ ಮಾಹಿತಿ ಪಡೆದು ತಿಳಿಸುತ್ತೇನೆ ಎಂದು ಬಿಎಂಟಿಸಿ ಅಧಿಕಾರಿಗಳು ಹೇಳುತ್ತಾರೆ.ಹಾಗಾದ್ರೆ ಸಂಕಷ್ಟದಲ್ಲಿರುವ ಹಿರಿಯ ನಾಗರಿಕರು ಬಸ್ ಪ್ರಯಾಣ ಮಾಡಬಾರದೇ? ಇರುವ ಮಕ್ಕಳು ನೋಡಿಕೊಳ್ಳುತ್ತಿಲ್ಲ, ಹೊರಹಾಕಿದ್ದಾರೆ. ಸ್ವಾವಲಂಬಿಯಾಗಿ ನಾವು ಕೆಲಸಕ್ಕೆ ಹೋಗಲು ಬಸ್ ಪಾಸ್ ಕೊಡದಿದ್ದರೆ ಹೇಗೆ? ನಾವು ಹೇಗೆ ಬದುಕಬೇಕು, ನಮ್ಮ‌ ಹೊಟ್ಟೆ ಹೇಗೆ ತುಂಬಬೇಕು? ಯಾರು ನಮ್ಮನ್ನು ನೋಡಿಕೊಳ್ಳುತ್ತಾರೆ ಎಂದು ಮನೆಗೆಲಸ‌ ಮಾಡುವ 75ರ ವಯಸ್ಸಿನ ಅಜ್ಜಿ ಮಲ್ಲಮ್ಮ ಪ್ರಶ್ನೆ ಮಾಡ್ತಾರೆ.

ನಾವು ಕೆಲಸ ಮಾಡಲೇಬೇಕು ಸರ್, ರಿಯಾಯತಿ ಪಾಸ್ ಕೊಡದೇ ಹೋದರೆ ಹೇಗೆ? ನಾವೇನು ಮಾಡಬೇಕು ಹೇಳಿ? ಎಂಬ ಹಿರಿಯ ನಾಗರಿಕ ಗಣೇಶ್ ರಾವ್ ಪ್ರಶ್ನೆಗೆ ಉತ್ತರಿಸುವುದು ಕಷ್ಟವಾಗುತ್ತದೆ.
First published: June 8, 2020, 7:24 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading