Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?

ಹೀಗಿದ್ದರೂ ತುರ್ತ ಸೇವೆಗಳಿಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ನಾಳೆಯಿಂದ ಒಂದು ವಾರಗಳ ಕಾಲ ತುರ್ತು ಸೇವೆಗಳಿಗಾಗಿ ಬಿಎಂಟಿಸಿ ಬಸ್​​ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೂ ಕೇವಲ 134 ಬಿಎಂಟಿಸಿ ಬಸ್​ ಸೇವೆ ಲಭ್ಯ ಇರಲಿದೆ.

news18-kannada
Updated:July 14, 2020, 3:47 PM IST
Bengaluru Lockdown: ನಾಳೆಯಿಂದ 1 ವಾರ ತುರ್ತು ಸೇವೆಗಳಿಗೆ ಮಾತ್ರ ಬಿಎಂಟಿಸಿ ಬಸ್​​​ ಲಭ್ಯ: ಯಾರೆಲ್ಲಾ ಪ್ರಯಾಣಿಸಬಹುದು ಗೊತ್ತೇ?
ಬಿಎಂಟಿಸಿ ಬಸ್​ಗಳು
  • Share this:
ಬೆಂಗಳೂರು(ಜು.14): ರಾಜ್ಯದಲ್ಲಿ ಕೊರೋನಾ ಸೋಂಕು ಮಿತಿಮೀರಿ ಹರಡುತ್ತಿದೆ. ಹೀಗಾಗಿ ಇಂದಿನಿಂದ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯನ್ನು ಒಂದು ವಾರ ಕಾಲ ಲಾಕ್​ಡೌನ್ ಮಾಡಲಾಗುತ್ತಿದೆ. ಈ ಎರಡು ಜಿಲ್ಲೆಗಳಲ್ಲಿ ಒಂದು ವಾರದ ಕಾಲ ಲಾಕ್​ಡೌನ್​ ಮಾಡುವ ಸಂಬಂಧ ರಾಜ್ಯದ ಮುಖ್ಯ ಕಾರ್ಯದರ್ಶಿ ಟಿಎಂ ವಿಜಯ್​​ ಭಾಸ್ಕರ್ ಅಧಿಕೃತ ಆದೇಶ ಹೊರಡಿಸಿದ್ದಾರೆ. ಜುಲೈ 14ನೇ ತಾರೀಕು ಇಂದು ಮಂಗಳವಾರ ರಾತ್ರಿ 8 ಗಂಟೆಯಿಂದಲೇ ಜುಲೈ 23ರ ಬೆಳಗ್ಗೆ 5 ಗಂಟೆಯವರೆಗೆ ಸಂಪೂರ್ಣ ಲಾಕ್​ಡೌನ್ ಮಾಡಲಾಗುವುದು ಎಂದು ಈ ಆದೇಶ ಪತ್ರದಲ್ಲಿ ತಿಳಿಸಲಾಗಿದೆ.

ಕೊರೋನಾ ತಹಬದಿಗೆ ತರಲು ಸರ್ಕಾರದ ಮಾರ್ಗ ಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಬೆಂಗಳೂರು ಮಹಾನಗರ ಪಾಲಿಕೆ ಆಯುಕ್ತರು ಮುಂದಾಗಿದ್ದಾರೆ ಇದಕ್ಕೆ ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿಗಳು, ಪೊಲೀಸ್​​ ವರಿಷ್ಠಾಧಿಕಾರಿಗಳು ಕೂಡ ಸಂಪೂರ್ಣ ಸಹಕಾರ ನೀಡಲಿದ್ಧಾರೆ. ಹಾಲು, ತರಕಾರಿ ಸೇರಿದಂತೆ ಔಷಧಿ ರೀತಿಯ ಅಗತ್ಯ ಸೇವೆಗಳು ಹೊರತುಪಡಿಸಿ ಇನ್ಯಾವುದೇ ರೀತಿಯ ಸೌಲಭ್ಯಗಳಿಗೆ ಅವಕಾಶ ಇಲ್ಲ ಎಂದು ಸರ್ಕಾರ ಸ್ಪಷ್ಟಪಡಿಸಿದೆ.

ಹೀಗಿದ್ದರೂ ತುರ್ತ ಸೇವೆಗಳಿಗಾಗಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ಮಹತ್ವದ ನಿರ್ಧಾರವೊಂದು ತೆಗೆದುಕೊಂಡಿದೆ. ನಾಳೆಯಿಂದ ಒಂದು ವಾರಗಳ ಕಾಲ ತುರ್ತು ಸೇವೆಗಳಿಗಾಗಿ ಬಿಎಂಟಿಸಿ ಬಸ್​​ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದೆ. ಬೆಳಗ್ಗೆ 7 ಗಂಟೆಯಿಂದ ಸಂಜೆ 7ರವರೆಗೂ ಕೇವಲ 134 ಬಿಎಂಟಿಸಿ ಬಸ್​ ಸೇವೆ ಲಭ್ಯ ಇರಲಿದೆ.

ಇನ್ನು, ಅಗತ್ಯ ಸೇವೆಗಾಗಿ ಮಾತ್ರ ಬಿಎಂಟಿಸಿ ಬಸ್​ನಲ್ಲಿ ಸಂಚಾರ ಮಾಡಬಹುದಾಗಿದೆ. ಯಾರಾದರೂ ಪರೀಕ್ಷೆ ಬರೆಯುವುದಾದಲ್ಲಿ ಹಾಲ್​ ಟಿಕೆಟ್​ ತೋರಿಸಿ ವಿದ್ಯಾರ್ಥಿಗಳು ಪ್ರಯಾಣ ಮಾಡಬಹುದು. ಜತೆಗೆ ಸರ್ಕಾರಿ ಅಧಿಕಾರಿಗಳು, ವೈದ್ಯಕೀಯ ಸಿಬ್ಬಂದಿ, ತುರ್ತು ನಾಗರಿಕ ಸೇವಾ ಸಿಬ್ಬಂದಿ, ಪತ್ರಕರ್ತರಿಗೆ ಮಾತ್ರ ಸಂಚಾರಕ್ಕೆ ಅವಕಾಶ ನೀಡಲಾಗಿದೆ.

ಎಂದಿನಂತೆಯೇ ರಾಜ್ಯದಲ್ಲಿ ಮಾರಕ ಕೊರೋನಾ ಆರ್ಭಟ ಮುಂದುವರೆದಿದೆ. ಇದರ ಪರಿಣಾಮ ಸೋಮವಾರವೊಂದೇ ದಿನ 2738 ಹೊಸ ಪ್ರಕರಣಗಳು ಪತ್ತೆಯಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 40 ಸಾವಿರ ದಾಟಿದೆ ಎಂದು ರಾಜ್ಯ ಆರೋಗ್ಯ ಇಲಾಖೆ ಅಧಿಕೃತ ಮಾಹಿತಿ ಬಿಡುಗಡೆ ಮಾಡಿದೆ.

ಇದನ್ನೂ ಓದಿ: Bishop Franco Mulakkal: ಅತ್ಯಾಚಾರ ಆರೋಪಿ ಕೇರಳ ಬಿಷಪ್‌ ಮುಲಾಕ್ಕಲ್​​ಗೆ ಕೊರೋನಾ ಪಾಸಿಟಿವ್​​ಒಟ್ಟು, 41,581 ಮಂದಿ ಪೈಕಿ 16248 ಮಂದಿಗೆ ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ಧಾರೆ. ಸದ್ಯ 24572 ಸಕ್ರಿಯ ಕೇಸುಗಳು ಮಾತ್ರ ಬಾಕಿ ಇವೆ. ಈ ಮಾರಕ ಕೊರೋನಾಗೆ ಸೋಮವಾರ ಒಂದೇ ದಿನ 73 ಮಂದಿ ಅಸುನೀಗಿದ್ದಾರೆ. ಹೀಗಾಗಿ ರಾಜ್ಯದ ಕೋವಿಡ್​-19 ಮೃತರ ಸಂಖ್ಯೆಯೂ 757ಕ್ಕೆ ಏರಿಕೆಯಾಗಿದೆ.
Published by: Ganesh Nachikethu
First published: July 14, 2020, 3:34 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading