ಸಂಡೇ ಲಾಕ್​​ಡೌನ್: ರಸ್ತೆಗಿಳಿದು ಪೊಲೀಸರ ಕಾರ್ಯಾಚರಣೆ, ಸುಖಾಸುಮ್ಮನೇ ಸುತ್ತಾಡೋರ ವಾಹನಗಳ ಸೀಜ್​​

ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆಯಾದರೂ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್ ಸಾಧ್ಯವೇ ಇಲ್ಲ ಎಂದು ದೃಢ ನಿರ್ಧಾರ ಮಾಡಿದೆ. ಆದರೆ, ಕೊರೋನಾ ಸೋಂಕು ನಿಯಂತ್ರಣಕ್ಕೆ ವಾರಕ್ಕೆ ಒಂದು ದಿನ ಅಂದರೆ ಭಾನುವಾರ ಇಡೀ ದಿನ ಲಾಕ್​ಡೌನ್ ಮಾಡಲಾಗಿದೆ.

news18-kannada
Updated:July 26, 2020, 8:10 PM IST
ಸಂಡೇ ಲಾಕ್​​ಡೌನ್: ರಸ್ತೆಗಿಳಿದು ಪೊಲೀಸರ ಕಾರ್ಯಾಚರಣೆ, ಸುಖಾಸುಮ್ಮನೇ ಸುತ್ತಾಡೋರ ವಾಹನಗಳ ಸೀಜ್​​
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಜು.26): ಭಾರತದಲ್ಲಿ ಕೊರೋನಾ ವೈರಸ್ ನಿಯಂತ್ರಣಕ್ಕೆ ಸಿಗದಷ್ಟು ವೇಗವಾಗಿ ಪ್ರವಹಿಸುತ್ತಿದೆ. ಕೊರೋನಾ ನಿಯಂತ್ರಣದಲ್ಲಿ ತಾನೇ ಬೆಸ್ಟ್ ಎಂದು ಬೀಗುತ್ತಿದ್ದ ಕರ್ನಾಟಕದಲ್ಲೂ ದಿನಕ್ಕೆ ಐದು ಪ್ರಕರಣಗಳು ಬರುವ ಮಟ್ಟಕ್ಕೆ ಸೋಂಕು ಹರಡಿದೆ. ಬೇರೆ ಕೆಲವು ರಾಜ್ಯಗಳಲ್ಲಿ ಇದಕ್ಕಿಂತಲೂ ಕೆಟ್ಟ ಪರಿಸ್ಥಿತಿ ಇದೆ. ಕೆಲ ವಾರಗಳವರೆಗೆ ಲಾಕ್​ಡೌನ್ ಮಾಡಿದ್ದ ಕೇಂದ್ರ ಸರ್ಕಾರ ಈಗ ಹಂತ ಹಂತವಾಗಿ ಲಾಕ್​ಡೌನ್ ತೆರವುಗೊಳಿಸುತ್ತಿದೆ. ಆದರೆ ರಾಜ್ಯ ಸರ್ಕಾರಗಳು ತಮ್ಮ ವಿವೇಚನೆ ಮತ್ತು ತಮ್ಮ ರಾಜ್ಯ ರಾಜ್ಯದ ಪರಿಸ್ಥಿತಿಗೆ ಅನುಗುಣವಾಗಿ ಲಾಕ್​ಡೌನ್ ಬಗ್ಗೆ ನಿರ್ಧಾರ ಕೈಗೊಂಡಿವೆ.

ಕರ್ನಾಟಕದಲ್ಲಿ, ಅದರಲ್ಲೂ ಬೆಂಗಳೂರಿನಲ್ಲಿ ಸೋಂಕು ಪ್ರಕರಣ ಅಪಾಯಕಾರಿ ಮಟ್ಟಕ್ಕೆ ಏರುತ್ತಿದೆಯಾದರೂ ರಾಜ್ಯ ಸರ್ಕಾರ ಸಂಪೂರ್ಣ ಲಾಕ್​ಡೌನ್ ಸಾಧ್ಯವೇ ಇಲ್ಲ ಎಂದು ದೃಢ ನಿರ್ಧಾರ ಮಾಡಿದೆ. ಆದರೆ, ಕೊರೋನಾ ಸೋಂಕು ನಿಯಂತ್ರಣಕ್ಕೆ ವಾರಕ್ಕೆ ಒಂದು ದಿನ ಅಂದರೆ ಭಾನುವಾರ ಇಡೀ ದಿನ ಲಾಕ್​ಡೌನ್ ಮಾಡಲಾಗಿದೆ.

ಹೀಗಿರುವಾಗಲೇ ದಿನ ಬೆಳಗಾದರೇ ಸಾಕು ಕಾರು, ಬೈಕ್ ಹಿಡಿದು ಸುಮ್ನೇ ಒಂದು ರೌಂಡ್ ಹಾಕ್ಕೊಂಡು ಬರೋಣ ಅಂತ ಹೋಗೋರಿಗೆ ಸಂಡೇ ಕಷ್ಟಾನೇ ಆಗಿತ್ತು. ಇತ್ತ ಸಂಡೇ ಲಾಕ್​ಡೌನ್​ ಅಂತ ಪೊಲೀಸರು ಮುಂಜಾನೆಯೇ ರೋಡಿಗಿಳಿದು ಬ್ಯಾರಿಕೇಡ್ ಹಾಕ್ಕೊಂಡು ಹೋಗೋರು. ಬರೋರ ವಾಹನಗಳನ್ನು ಚೆಕ್ ಮಾಡಿದ್ರು. ಅದರಲ್ಲೂ ಕೆಲವರು ಮೆಡಿಕಲ್ ಎಮರ್ಜೆನ್ಸಿ ಅಂತ ಬಂದರೆ, ಇನ್ನು ಕೆಲವರು ಸುಮ್ಮನೆ ಒಂದ್ ರೌಂಡ್ ಹಾಕ್ಕೊಂಡು ಬರೋನ ಅಂತ ಬಂದೋರು ಇದ್ದಾರೆ.

ಹೀಗೆ ನಗರದ ಪ್ರತಿಯೊಂದು ಕಡೆಯೂ ವಾಹನಗಳನ್ನು ತಡೆದು ತಪಾಸಣೆ ಮಾಡಿದ ಪೊಲೀಸರು ಹಲವು ಕಡೆಗಳಲ್ಲಿ ವಾಹನಗಳನ್ನು ಸೀಜ್ ಮಾಡಿದ್ರು. ಇನ್ನು ಈ ಸಂಡೇ ಲಾಕ್​ಡೌನ್​ಗೆ ರಸ್ತೆ ಬದಿಯ ಅಂಗಡಿ ಮುಂಗಟ್ಟುಗಳು ಫುಲ್ ಕ್ಲೋಸ್​​​ ಮಾಡಿದ್ದು, ಬಿಟ್ಟರೆ ವಾಹನಗಳ ಮಾತ್ರ ಅಲ್ಲಲ್ಲಿ ಓಡಾಡುತ್ತಲೇ ಇದ್ದವು.

ಇತ್ತ ಪೊಲೀಸರು ಎಷ್ಟೇ ಸ್ಟ್ರಿಕ್ಟ್ ಆಗಿ ಲಾಕ್​​ಡೌನ್ ಅಂತ ಮಾಡಿದ್ರು ಜನ ಮಾತ್ರ ಕೇಳಿದ್ದು ಕಂಡಿಲ್ಲ. ಹೀಗಾಗಿ ನಗರದಲ್ಲಿ ಸುಮಾರು 500ಕ್ಕೂ ಅಧಿಕ ಕಡೆ ಪೊಲೀಸರು ಬ್ಯಾರಿಕೇಡ್ ಹಾಕಿ ವಾಹನಗಳ ತಪಾಸಣೆಯನ್ನು ಮಾಡಿದ್ರು. ಅದರಲ್ಲಿ ಕೆಲವರು ಊರಿಗೆ ಹೋಗ್ತಾ ಇದ್ದೀವಿ ಸಾರ್ ಅನ್ನೋ ಉತ್ತರವನ್ನು ಕೊಟ್ರು. ಇತ್ತ ವಾಹನಗಳ ದಾಖಲೆಗಳು ಇಲ್ಲದೆ ವಾಹನವನ್ನು ಚಲಾಯಿಸುತ್ತಿದ್ದ ವಾಹನಗಳನ್ನು ಪೊಲೀಸರು ಸೀಜ್ ಮಾಡಿ ನಾಳೆ ಬಂದು ಫೈನ್ ಕಟ್ಟಿ ವಾಹನವನ್ನು ಬಿಡಿಸಿಕೊಂಡು ಹೋಗುವಂತೆಯೂ ನಗರದ ಹಲವು ಕಡೆಗಳಲ್ಲಿ ಹೇಳಿದ್ದಾರೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19: ಒಂದೇ ದಿನ 5,199 ಕೇಸ್​​ ಪತ್ತೆ, 96 ಸಾವಿರ ದಾಟಿದ ಸೋಂಕಿತರ ಸಂಖ್ಯೆಒಟ್ನಲ್ಲಿ ಸರ್ಕಾರ ಕೊರೋನಾ ಹಾವಳಿಯನ್ನು ತಪ್ಪಿಸೋಕೆ ಸಂಡೆ ಲಾಕ್​​ಡೌನ್ ಮಾಡಿದರೂ ಜನ‌ ಮಾತ್ರ ಓಡಾಟ ನಿಲ್ಲಿಸುತ್ತಿಲ್ಲ. ಇನ್ನು ಸರ್ಕಾರದ ಕಡೆಯಿಂದಲೇ ಮುಂದಿನ ಭಾನುವಾರದ ಲಾಕ್ ಡೌನ್ ಬೇಡ ಅನ್ನೋ ಮಾತು ಕೇಳಿ ಬರುತ್ತಿದೆ.
Published by: Ganesh Nachikethu
First published: July 26, 2020, 8:08 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading