HOME » NEWS » Coronavirus-latest-news » BBMP CONDUCTED BY HOME ISOLATION DEATH AUDITING 910 DEATHS AT HOME IN SECOND WAVE MAK

Covid19 Death| ಹೋಮ್ ಐಸೊಲೇಶನ್ ಡೆತ್ ಆಡಿಟಿಂಗ್ ನಡೆಸಿದ ಬಿಬಿಎಂಪಿ; ಕೊರೋನಾದಿಂದ ಮನೆಯಲ್ಲೇ 910 ಮಂದಿ ಸಾವು!

ಪೂರ್ವ ವಲಯದಲ್ಲಿ ಅತಿ ಹೆಚ್ಚು ಹೋಮ್ ಐಸೋಲೇಷನ್ ಡೆತ್ ವರದಿಯಾಗಿದ್ದು, ಈ ವಲಯದಲ್ಲಿ 251 ಮಂದಿ ಮನೆಯಲ್ಲೇ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

news18-kannada
Updated:June 24, 2021, 11:30 AM IST
Covid19 Death| ಹೋಮ್ ಐಸೊಲೇಶನ್ ಡೆತ್ ಆಡಿಟಿಂಗ್ ನಡೆಸಿದ ಬಿಬಿಎಂಪಿ; ಕೊರೋನಾದಿಂದ ಮನೆಯಲ್ಲೇ 910 ಮಂದಿ ಸಾವು!
ಪ್ರಾತಿನಿಧಿಕ ಚಿತ್ರ
  • Share this:
ಬೆಂಗಳೂರು (ಜೂನ್ 24); ಕೊರೋನಾ ಎರಡನೇ ಅಲೆ ಇಡೀ ಭಾರತವನ್ನು ಕಳೆದ ಮೂರು ತಿಂಗಳಿನಿಂದ ಇನ್ನಿಲ್ಲದಂತೆ. ಸೋಂಕಿತರ ಸಂಖ್ಯೆ ಎಲ್ಲೆಡೆ ಅಧಿಕವಾಗಿದ್ದು, ಆಸ್ಪತ್ರೆಗಳಲ್ಲಿ ಅವರಿಗೆ ಬೆಡ್​ ನೀಡುವುದೇ ಸರ್ಕಾರಕ್ಕೆ ದುಸ್ಥರವಾಗಿತ್ತು. ಆಸ್ಪತ್ರೆಯಲ್ಲಿ ಬೆಡ್​ ಇದ್ದರೂ ವೆಂಟಿಲೇಟರ್ ಮತ್ತು ಆಕ್ಸಿಜನ್ ಕೊರತೆಯಿಂದ ಜನ ದಂಡು ದಂಡಾಗಿ ಸಾವನ್ನಪ್ಪಿದ್ದನ್ನು ಈ ದೇಶ ಕಂಡಿದೆ. ಇದೇ ಕಾರಣಕ್ಕೆ ಕೊರೋನಾ ಸೋಂಕು ಉಲ್ಪಣಗೊಂಡಿದ್ದ ಸಂದರ್ಭದಲ್ಲಿ ಆಸ್ಪತ್ರೆಗಳ ಮೇಲಿನ ಒತ್ತಡವನ್ನು ಕಡಿಮೆಗೊಳಿಸುವ ಸಲುವಾಗಿ ಎ ಸಿಂಟಮ್ಸ್​ ಅಥವಾ ಕೊರೋನಾ ಸೌಮ್ಯ ಗುಣ ಲಕ್ಷಣ ಹೊಂದಿರುವವರು ಮನೆಯಲ್ಲೇ ಐಸೊಲೇಶನ್ ಆಗಿ ಎಂದು ಸರ್ಕಾರ ಕಿವಿಮಾತು ಹೇಳಿತ್ತು. ಆದರೆ, ಹೀಗೆ ಹೋಮ್ ಐಸೊಲೇಶನ್ ನಲ್ಲಿದ್ದ ಸುಮಾರು 910 ಜನ ಕಳೆದ 46 ದಿನಗಳಲ್ಲಿ ಬೆಂಗಳೂರಿನಲ್ಲಿ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ರಾಜ್ಯದಲ್ಲಿ ಕೊರೋನಾ ಸೋಂಕಿನಿಂದ ಮೃತಪಟ್ಟವರ ಮಾಹಿತಿ ಇದೆ. ಆದರೆ, ಹೋಮ್​ ಐಸೊಲೇಶನ್​ನಲ್ಲಿದ್ದು ಮೃತಪಟ್ಟವರ ಅಧೀಕೃತ ಮಾಹಿತಿ ಈವರೆಗೆ ಲಭ್ಯವಾಗಿಲ್ಲ. ಹೀಗಾಗಿ ಬಿಬಿಎಂಪಿ ಹೋಮ್ ಐಸೋಲೇಷನ್ ಡೆತ್ ಆಡಿಟಿಂಗ್ ನಡೆಸಿತ್ತು. ಈ ಆಡಿಟಿಂಗ್​ನಲ್ಲಿ ಕೊರೋನಾ ಎರಡನೇ ಅಲೆಯ 46 ದಿನದಲ್ಲಿ ಸುಮಾರು 910 ಮಂದಿ ಮನೆಯಲ್ಲೇ ಸಾವು ಕಂಡಿದ್ದಾರೆ ಎಂದು ತಿಳಿದುಬಂದಿದೆ.

ಸೋಂಕು ತಗುಲಿ ಮನೆಯಲ್ಲೇ ಐಸೋಲೇಟ್ ಆಗಿದ್ದ 910 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಮಾರ್ಚ್ 1ರಿಂದ ಜೂನ್ 15ರ ಅವಧಿಯಲ್ಲಿ ಸಾವಿನ ಲೆಕ್ಕಪರಿಶೋಧನೆ ನಡೆಸಿರುವ ಪಾಲಿಕೆ. ಯಾವುದೇ ಗುಣ ಲಕ್ಷಣ ಇಲ್ಲದಿದ್ದರೂ ಹೋಮ್ ಐಸೋಲೇಟ್ ಆಗಿದ್ದ 410 ಮಂದಿ ಹಾಗೂ ಹೋಮ್ ಐಸೋಲೇಟ್ ಆಗಿದ್ದ 500 ಕೋಮರ್ಬಿಟ್ ಪೇಶೆಂಟ್‌ಗಳು ಸಾವನ್ನಪ್ಪಿದ್ದಾರೆ. ಸಾಯುವ ಕೊನೆಯ ಕ್ಷಣದಲ್ಲಿ ಚಿಕಿತ್ಸೆಗಾಗಿ ಇವರು ಮುಂದಾಗಿದ್ದು, ಈ 910 ಮಂದಿ ಪೈಕಿ 475 ಮಂದಿ ಆಸ್ಪತ್ರೆ ಬೆಡ್ ನಿರಾಕರಿಸಿದ ಕಾರಣ ಸಾವನ್ನಪ್ಪಿದ್ದಾರೆ ಎಂದು ಪಾಲಿಕೆ ತಿಳಿಸಿದೆ.

ಪೂರ್ವ ವಲಯದಲ್ಲಿ ಅತಿ ಹೆಚ್ಚು ಹೋಮ್ ಐಸೋಲೇಷನ್ ಡೆತ್ ವರದಿಯಾಗಿದ್ದು, ಈ ವಲಯದಲ್ಲಿ 251 ಮಂದಿ ಮನೆಯಲ್ಲೇ ಕೊರೋನಾಗೆ ಬಲಿಯಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Delta Plus Variant| ಬೆಂಗಳೂರಿಗೂ ಕಾಲಿಟ್ಟ ಡೆಲ್ಟಾ ಪ್ಲಸ್​ ಸೋಂಕು; ಓರ್ವ ವೃದ್ಧನಲ್ಲಿ ವೈರಸ್​ ಪತ್ತೆ!

ವಲಯವಾರು ಹೋಮ್ ಐಸೋಲೇಷನ್ ಸಾವು;  ಹೋಮ್ ಐಸೋಲೇಷನ್ ಡೆತ್ ಆಡಿಟಿಂಗ್ ರಿಪೋರ್ಟ್

ಪೂರ್ವ ವಲಯ : 251ಮಹಾದೇವಪುರ : 244
ದಕ್ಷಿಣ ವಲಯ : 73
ಆರ್ ಆರ್ ನಗರ : 119
ದಾಸರಹಳ್ಳಿ : 38
ಪಶ್ಚಿಮ ವಲಯ : 107
ಬೊಮ್ಮನಹಳ್ಳಿ : 8
ಯಲಹಂಕ : 70
Youtube Video

ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್​ ಕೇಸ್​ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ಲಾಕ್​​ಡೌನ್​ ನಿಯಮಗಳನ್ನು ಕಟ್ಟುನಿಟ್ಟಿನಿಂದ ಪಾಲಿಸಿ ಸೋಂಕಿನಿಂದ ತಮ್ಮನ್ನು ತಾವು ಕಾಪಾಡಿಕೊಳ್ಳುವ ಪ್ರತಿಜ್ಞೆ ತೆಗೆದುಕೊಳ್ಳಬೇಕು. ನಾವು ಸುರಕ್ಷಿತವಾಗಿ ಇದ್ದು, ನಮ್ಮಿಂದ ಇತರರಿಗೆ ಸೋಂಕು ಹಬ್ಬದಂತೆ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು.
Published by: MAshok Kumar
First published: June 24, 2021, 11:28 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories