ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ ಶೇ.50ರಷ್ಟು ಹೆಚ್ಚುವರಿ ಆದಾಯ ನಿರೀಕ್ಷೆ; ಹೆಚ್‌. ನಾಗೇಶ್

ಆನ್‌ಲೈನ್ ಮಧ್ಯ ಮಾರಾಟದ ಬಗ್ಗೆ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಆ ವರದಿಯ ಸಾಧಕ ಬಾಧಕಗಳ ಬಳಿಕ ಈ ಕುರಿತು ಸಿಎಂ ಜೊತೆ ಚರ್ಚಿಸಿ ಆ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು ಎಂದು ಸಚಿವ ಹೆಚ್‌. ನಾಗೇಶ್‌ ತಿಳಿಸಿದ್ದಾರೆ.

news18-kannada
Updated:September 1, 2020, 2:36 PM IST
ಇಂದಿನಿಂದ ಬಾರ್‌ ಅಂಡ್ ರೆಸ್ಟೋರೆಂಟ್‌ ಓಪನ್ ಶೇ.50ರಷ್ಟು ಹೆಚ್ಚುವರಿ ಆದಾಯ ನಿರೀಕ್ಷೆ; ಹೆಚ್‌. ನಾಗೇಶ್
ಅಬಕಾರಿ ಸಚಿವ ಹೆಚ್ ನಾಗೇಶ್.
  • Share this:
ಬೆಂಗಳೂರು (ಸೆಪ್ಟೆಂಬರ್‌ 01); ಇಂದಿನಿಂದ ದೇಶದಾದ್ಯಂತ ಅನ್‌ಲಾಕ್‌-04ರ ಪ್ರಕ್ರಿಯೆ ಆರಂಭವಾಗಿದೆ. ಅನ್‌ಲಾಕ್ ಮಾರ್ಗಸೂಚಿಯ ಅನ್ವಯ ಇಂದು ಆರು ತಿಂಗಳ ಬಳಿಕ ರಾಜ್ಯಾದ್ಯಂತ ಬಾರ್‌ ಮತ್ತು ರೆಸ್ಟೋರೆಂಟ್‌ಗಳು ಓಪನ್‌ ಆಗಿವೆ. ಹೀಗಾಗಿ ನಿತ್ಯ 80 ಕೋಟಿಯ ಆದಾಯದ ನಿರೀಕ್ಷೆ ಇದೆ. ಅಲ್ಲದೆ, ಶೇ.50ರಷ್ಟು ಹೆಚ್ಚುವರಿ ಆದಾಯದ ಗುರಿ ಹೊಂದಲಾಗಿದೆ ಎಂದು ಅಬಕಾರಿ ಸಚಿವ ಹೆಚ್‌. ನಾಗೇಶ್‌ ತಿಳಿಸಿದ್ದಾರೆ.

ಇಂದು ವಿಕಾಸಸೌಧದಲ್ಲಿ ಪತ್ರಕರ್ತರ ಜೊತೆಗೆ ಈ ಕುರಿತು ಮಾತನಾಡಿರುವ ಸಚಿವ ಹೆಚ್‌. ನಾಗೇಶ್‌, "ಇಂದಿನಿಂದ ರಾಜ್ಯಾದ್ಯಂತ ಬಾರ್‌ ಅಂಡ್ ರೆಸ್ಟೋರೆಂಟ್‌ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿವೆ. ಇದೀಗ ನಿತ್ಯ 80 ಕೋಟಿ ಆದಾಯ ಇದೆ. ಅಲ್ಲದೆ, ಹೆಚ್ಚುವರಿ ಶೇ.50ರಷ್ಟು ಆದಾಯದ ನಿರೀಕ್ಷೆ ಇದೆ. 2020-21ರಲ್ಲಿ ಅಬಕಾರಿ ಇಲಾಖೆಯಲ್ಲಿ ವಾರ್ಷಿಕ 21,000 ಕೋಟಿ ಆದಾಯ ಗಳಿಸುವ ಗುರಿಯನ್ನು ಹೊಂದಲಾಗಿತ್ತು.

ಆದರೆ, ಆ ಗುರಿಯನ್ನು ಈಗ 22,700 ಕೋಟಿಗೆ ಏರಿಸಲಾಗಿದೆ. ಹೀಗಾಗಿ ರಾಜ್ಯಾದ್ಯಂತ ಹೊಸ ಎಂಎಸ್ಐಎಲ್ ಗಳನ್ನು ತೆರೆಯುವುದಕ್ಕಾಗಿ ಹೊಸದಾಗಿ ಲೈಸೆನ್ಸ್ ಕೊಡಲಾಗುತ್ತಿದೆ. ಇದನ್ನು ಹೊರತು ಬೇರೆ ಲೈಸನ್ಸ್ ಯಾವುದು ಕೊಡ್ತಿಲ್ಲ. ಇದಲ್ಲದೆ, ಆನ್‌ಲೈನ್‌ ಮಧ್ಯ ಮಾರಾಟದ ಬಗ್ಗೆ ಅಧಿಕಾರಿಗಳು ಅಧ್ಯಯನ ಮಾಡುತ್ತಿದ್ದಾರೆ" ಎಂದು ಹೆಚ್‌. ನಾಗೇಶ್‌ ತಿಳಿಸಿದ್ದಾರೆ.

ಆನ್‌ಲೈನ್ ಮಧ್ಯ ಮಾರಾಟದ ಬಗ್ಗೆ ಮತ್ತಷ್ಟು ಮಾಹಿತಿ ನೀಡಿದ ನಾಗೇಶ್‌, "ಆನ್‌ಲೈನ್ ಮಧ್ಯ ಮಾರಾಟದ ಬಗ್ಗೆ ಬೇರೆ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ? ಎಂಬುದರ ಬಗ್ಗೆ ಅಧ್ಯಯನ ಮಾಡಲಾಗುತ್ತಿದೆ. ಆ ವರದಿಯ ಸಾಧಕ ಬಾಧಕಗಳ ಬಳಿಕ ಈ ಕುರಿತು ಸಿಎಂ ಜೊತೆ ಚರ್ಚಿಸಿ ಆ ಬಳಿಕ ಅಂತಿಮ ತೀರ್ಮಾನ ತೆಗೆದುಕೊಳ್ಳಲಾಗುವುದು. ಆನ್ ಲೈನ್ ನಲ್ಲಿ ಆರ್ಡರ್ ಮಾಡಿದವರ ವಯಸ್ಸು ಏನು ? ಯಾರು ಆರ್ಡರ್ ಮಾಡ್ತಿದ್ದಾರೆ ಅನ್ನೋದು ಗೊತ್ತಾಗ ಬೇಕು. ಈ ಕುರಿತು ಸಮಾಲೋಚನೆ ನಡೆಸಲಾಗುತ್ತಿದೆ" ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ : ಕೇಂದ್ರದ ಬೆನ್ನಿಗೆ ರಾಜ್ಯದಿಂದ ಅನ್‌ಲಾಕ್‌-4 ಮಾರ್ಗಸೂಚಿ ಬಿಡುಗಡೆ; ಆರ್ಥಿಕತೆಗೆ ಮತ್ತಷ್ಟು ವಿನಾಯಿತಿಮಾರಣಾಂತಿಕ ಕೊರೋನಾ ವೈರಸ್‌ ಸಾಮೂದಾಯಿಕವಾಗಿ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ಮಾರ್ಚ್‌.25 ರಂದು ಪ್ರಧಾನಿ ನರೇಂದ್ರ ಮೋದಿ ರಾಷ್ಟ್ರಾದ್ಯಂತ ಸುದೀರ್ಘ ಅವಧಿಯ ಲಾಕ್‌ಡೌನ್‌ ಹೇರಿದ್ದರು. ಹೀಗಾಗಿ ಬಾರ್‌ ಮತ್ತು ರೆಸ್ಟೋರೆಂಟ್, ಪಬ್‌ಗಳನ್ನು ತಾತ್ಕಾಲಿಕವಾಗಿ ಮುಚ್ಚಲಾಗಿತ್ತು.

ಈ ನಡುವೆ ಅನ್‌ಲಾಕ್‌ ಪ್ರಕ್ರಿಯೆ ಆರಂಭವಾಗಿದ್ದರೂ ಸಹ ಮಧ್ಯದ ಅಂಗಡಿಗಳಲ್ಲಿ ಮಧ್ಯವನ್ನು ಪಾರ್ಸೆಲ್‌ ನೀಡಲು ಅವಕಾಶ ನೀಡಲಾಗಿತ್ತೆ ವಿನಃ ಬಾರ್‌ ಮತ್ತು ರೆಸ್ಟೋರೆಂಟ್‌ಗಳನ್ನು ತೆರೆಯಲು ಅವಕಾಶ ನೀಡಲಾಗಿರಲಿಲ್ಲ. ಆದರೆ, ಅನ್‌ಲಾಕ್‌-04ರಲ್ಲಿ ಷರತ್ತು ಬದ್ಧವಾಗಿ ಬಾರ್‌ ಮತ್ತು ರೆಸ್ಟೋರೆಂಟ್‌ ತೆರೆಯಲು ರಾಜ್ಯ ಸರ್ಕಾರ ಅನುಮತಿ ನೀಡಿದೆ. ಹೀಗಾಗಿ ಇಂದಿನಿಂದ ರೆಸ್ಟೋರೆಂಟ್ ಮತ್ತು ಪಬ್‌ಗಳು ಬಹಳ ದಿನಗಳ ನಂತರ ಬಾಗಿಲು ತೆರೆಯುವುದು ಖಚಿತವಾಗಿದೆ.
Published by: MAshok Kumar
First published: September 1, 2020, 2:36 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading