Arjun Kapoor: ಅರ್ಜುನ್​ ಕಪೂರ್​ಗೆ ಕೊರೋನಾ ಪಾಸಿಟಿವ್​; ಆರೋಗ್ಯವಾಗಿದ್ದೇನೆ ಎಂದ ನಟ

ಯಾರು ಭಯ ಪಡಬೇಕಾದ ಅಗತ್ಯವಿಲ್ಲ. ನನ್ನ ಆರೋಗ್ಯ ಚೆನ್ನಾಗಿದೆ. ಪಾಸಿಟಿವ್​ ಕಾಣಿಸಿಕೊಂಡಿದ್ದ ಕಾರಣ ನಾನು ಪ್ರತ್ಯೇಕವಾಗಿರಲು ಬಯಸಿದ್ದೇನೆ ಎಂದು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅರ್ಜುನ್​ ಕಪೂರ್​ ಬರೆದುಕೊಂಡಿದ್ದಾರೆ.

news18-kannada
Updated:September 6, 2020, 5:38 PM IST
Arjun Kapoor: ಅರ್ಜುನ್​ ಕಪೂರ್​ಗೆ ಕೊರೋನಾ ಪಾಸಿಟಿವ್​; ಆರೋಗ್ಯವಾಗಿದ್ದೇನೆ ಎಂದ ನಟ
ಅರ್ಜುನ್​ ಕಪೂರ್
  • Share this:
ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಎಷ್ಟೇ ಜಾಗೃತೆವಹಿಸಿದರು ಕೊರೋನಾ ಸೋಂಕು ಹಬ್ಬುತ್ತಲೇ ಇದೇ. ಇದೀಗ ಬಾಲಿವುಡ್​ ನಟ ಅರ್ಜುನ್​ ಕಪೂರ್​​ಗೂ ಕೊರೋನಾ ಸೋಂಕು ತಗುಲಿದ್ದು, ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೊಂಡಿದ್ದಾರೆ. ಬಾಲಿವುಡ್​ ಅನೇಕ ತಾರೆಯರಿಗೆ ಕೋವಿಡ್​-19 ಸೋಂಕು ತಗುಲಿತ್ತು. ಬಿಗ್​ ಬಿ ಅಮಿತಾಭ್​ ಬಚ್ಚನ್​, ಅಭಿಷೇಕ್​ ಬಚ್ಚನ್​, ಐಶ್ವರ್ಯಾ ರೈ, ಕನಿಕಾ ಕಪೂರ್​, ಜೊಯಾ ಮೊರಾನಿ ಸೇರಿದಂತೆ ಅನೇಕ ತಾರೆಯರಿಗೆ ಪಾಸಿಟಿವ್​ ಬಂದಿತ್ತು. ನಂತರ ಸರಿಯಾದ ಚಿಕಿತ್ಸೆ ಪಡೆದುಕೊಂಡು ಕೊರೋನಾವನ್ನು ಮೆಟ್ಟಿನಿಂತಿದ್ದಾರೆ. ಇದೀಗ ಬೋನಿ ಕಫೂರ್ ಮಗ ಅರ್ಜುನ್​ ಕಪೂರ್​ಗೂ ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿದೆ. ಇನ್​ಸ್ಟಾಗ್ರಾಂ ಖಾತೆಯಲ್ಲಿ ಈ ಬಗ್ಗೆ ಬರೆದುಕೊಳ್ಳುವ ಮೂಲಕ ಕೊರೋನಾ ತಗುಲಿರುವ ವಿಚಾರವನ್ನು ಹಂಚಿಕೊಂಡಿದ್ದಾರೆ. ‘ನಾನು ಕರೋನಾ ಪರೀಕ್ಷೆ ಮಾಡಿಸಿಕೊಂಡಿದ್ದೆ. ಅದರಲ್ಲಿ ಪಾಸಿಟಿವ್​ ಎಂದು ಬಂದಿದೆ. ನನಗೆ ಕೊರೋನಾದ ಯಾವುದೇ ಗುಣ ಲಕ್ಷಣಗಳು ಇಲ್ಲ. ವೈದ್ಯರ ಸಲಹೆ ಮೇರೆಗೆ ಪ್ರತ್ಯೇಕವಾಗಿದ್ದೇನೆ’ ಎಂದಿದ್ದಾರೆ.

ಯಾರು ಭಯ ಪಡಬೇಕಾದ ಅಗತ್ಯವಿಲ್ಲ. ನನ್ನ ಆರೋಗ್ಯ ಚೆನ್ನಾಗಿದೆ. ಪಾಸಿಟಿವ್​ ಕಾಣಿಸಿಕೊಂಡಿದ್ದ ಕಾರಣ ನಾನು ಪ್ರತ್ಯೇಕವಾಗಿರಲು ಬಯಸಿದ್ದೇನೆ ಎಂದು ಇನ್​​ಸ್ಟಾಗ್ರಾಂ ಖಾತೆಯಲ್ಲಿ ಅರ್ಜುನ್​ ಕಪೂರ್​ ಬರೆದುಕೊಂಡಿದ್ದಾರೆ.








View this post on Instagram





🙏🏽


A post shared by Arjun Kapoor (@arjunkapoor) on






ಕೊರೋನಾ ಪಾಸಿಟಿವ್​ ಕಾಣಿಸಿಕೊಂಡಿರುವ ವಿಚಾರವನ್ನು ಹಂಚಿಕೊಳ್ಳಲು ಬಯಸುತ್ತಿದ್ದೇನೆ. ನಿಮ್ಮೆಲ್ಲರ ಬೆಂಬಲಕ್ಕಾಗಿ ಮುಂಚಿತವಾಗಿ ಧನ್ಯವಾದ ಹೇಳಲು ಬಯಸುತ್ತೇನೆ. ನನ್ನ ಆರೋಗ್ಯ ಬಗ್ಗೆ ಮುಂದಿನ ದಿನಗಳಲ್ಲಿ ಮಾಹಿತಿ ನೀಡಲಿದ್ದೇನೆ. ಎಲ್ಲಾ ಮಾನವೀಯ ಗುಣಗಳು ಈ ಸಾಂಕ್ರಾಮಿಕ ರೋಗವನ್ನು ಹಿಮ್ಮೆಟ್ಟಿಸಲಿದೆ ಎಂದು ಬರೆದುಕೊಂಡಿದ್ದಾರೆ
Published by: Harshith AS
First published: September 6, 2020, 5:35 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading