ಮೈಸೂರಿನಲ್ಲಿ ಕೊರೋನಾಗೆ ಒಟ್ಟು 99 ಸಾವು: ರಾಜ್ಯದ ಸಾವಿನ ಸಂಖ್ಯೆ ಪಟ್ಟಿಯಲ್ಲಿ 2ನೇ ಸ್ಥಾನ

ಇತ್ತ, ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಕೊರೋನಾ ಕಂಟ್ರೋಲ್‌ಗೆ ಬರುತ್ತಿದೆ. ಒಂದು ವಾರದ ಲಾಕ್‌ಡೌನ್ ಬಳಿಕ ಅಲ್ಲಿನ ಜನರು ಕೋವಿಡ್ ತಪಾಸಣೆಗೆ ಸಹಕಾರ ನೀಡ್ತಿದ್ದಾರೆ. ಆದರು ಜನರಲ್ಲಿರುವ ಆತಂಕ ಮಾತ್ರ ಇನ್ನು ಕಡಿಮೆ ಆಗ್ತಿಲ್ಲ. ಇಂದಿನಿಂದ ಲಾಕ್‌ಡೌನ್ ಸಹ ಸಡಿಲಿಕೆ ಆಗಿದ್ದು, ಕೇವಲ ಕಂಟೋನ್ಮೆಂಟ್ ಜೋನ್‌ನ ಮನೆಗಳ ಬಳಿ ಮಾತ್ರ ಸೀಲ್‌ಡೌನ್ ಮಾಡಲಾಗಿದೆ.

news18-kannada
Updated:July 25, 2020, 9:21 PM IST
ಮೈಸೂರಿನಲ್ಲಿ ಕೊರೋನಾಗೆ ಒಟ್ಟು 99 ಸಾವು: ರಾಜ್ಯದ ಸಾವಿನ ಸಂಖ್ಯೆ ಪಟ್ಟಿಯಲ್ಲಿ 2ನೇ ಸ್ಥಾನ
ಸಾಂದರ್ಭಿಕ ಚಿತ್ರ.
  • Share this:
ಮೈಸೂರು(ಜು.25): ಮೈಸೂರು ಜಿಲ್ಲೆಯಲ್ಲಿ ಇಂದಿಗೆ 99 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ. ಈ ಮೂಲಕ ರಾಜ್ಯದಲ್ಲಿ ಅತೀಹೆಚ್ಚು ಕೊರೋನಾ ಸಾವು ಕಂಡ ಜಿಲ್ಲೆಯಲ್ಲಿ ಎರಡನೇ ಸ್ಥಾನದಲ್ಲಿದೆ ಮೈಸೂರು. ಇಲ್ಲಿ ದಿನೇ ದಿನೇ ಕೊರೋನಾ ಆರ್ಭಟಕ್ಕೆ ಕಡಿವಾಣವೇ ಇಲ್ಲದಂತಾಗಿದೆ. ಇಂದು ಮೊಟ್ಟಮೊದಲ ಬಾರಿಗೆ 281 ಪಾಸಿಟಿವ್ ಪ್ರಕರಣ ಪತ್ತೆಯಾಗಿ ಇಡೀ ಜಿಲ್ಲೆಗೆ ಶಾಕ್ ನೀಡಿದೆ.

ಮೈಸೂರಿನಲ್ಲಿಂದು 6 ಮಂದಿ ಕೊರೋನಾ ಸೋಂಕಿತರು ಸಾವನ್ನಪ್ಪಿದ್ದಾರೆ. ಸದ್ಯ 99 ಸಾವುಗಳ ಮೂಲಕ ಕೊರೋನಾ ಸೋಂಕಿತರ ಮೃತರ ಪಟ್ಟಿಯಲ್ಲಿ ರಾಜ್ಯದಲ್ಲಿ ಎರಡನೇ ಸ್ಥಾನಕ್ಕೆ ಮೈಸೂರು ಜಿಗಿದಿದೆ. ಇದುವರೆಗೂ 2,450 ಮಂದಿಗೆ ಕೊರೋನಾ ಬಂದಿದೆ. ಈ ಪೈಕಿ 749 ಮಂದಿ ಸಂಪೂರ್ಣ ಗುಣಮುಖರಾಗಿ ಡಿಸ್ಚಾರ್ಜ್​ ಆಗಿದ್ದಾರೆ. ಹೀಗಾಗಿ 1602 ಸಕ್ರಿಯ ಕೇಸುಗಳು ಇವೆ.

ಕೊರೋನಾ ಆತಂಕದ ಮಧ್ಯೆ ಮೈಸೂರಿನಲ್ಲಿ ಹೊಸ ಆತಂಕ ಶುರುವಾಗಿದೆ. ಸದ್ಯ ಮೂವರು ಸೋಂಕಿತರು ನಾಪತ್ತೆಯಾಗಿದ್ದಾರೆ. ಮೈಸೂರಿನ ಕೆ.ಆರ್ ಕ್ಷೇತ್ರ ವ್ಯಾಪ್ತಿಯಲ್ಲಿ ಮೂವರು ಕೊರೋನಾ ಸೋಂಕಿತರು ಆತಂಕ ಸೃಷ್ಟಿಸಿ ಪರಾರಿಯಾಗಿದ್ದಾರೆ. ಇದು ಕೆ.ಆರ್ ಕ್ಷೇತ್ರದಲ್ಲಿ ಸಾಕಷ್ಟು ಸಾರ್ವಜನಿಕ ನಿದ್ದೆ ಕೆಡಿಸಿದ್ದು, ಅಧಿಕಾರಿಗಳಿಗೂ ತಲೆನೋವು ತಂದಿದೆ.

ಕೊರೋನಾ ಬಂದ ಈ ಮೂವರು ಮೈಸೂರಿನ ಅಗ್ರಹಾರದ ವಾರ್ಡ್ ನಂಬರ್ 51ರ ರಾಮಾನುಜ ರಸ್ತೆಯ ವಿಳಾಸ ನೀಡಿದ್ದಾರೆ. ಆದರೆ ಕೊಟ್ಟಿರುವ ಈ ಅಡ್ರೆಸ್ ಕೂಡ ತಪ್ಪಾಗಿದೆ. ಕಳೆದ ನಾಲ್ಕೈದು ದಿನಗಳಿಂದ ಅವರಿಗಾಗಿ ಹುಡುಕಾಟ ನಡೆಸಲಾಗಿದೆ. ಅವರು ನೀಡಿರುವ ಫೋನ್ ನಂಬರ್‌ಗೆ ನಿತ್ಯವೂ ಕಾಲ್ ಮಾಡ್ತಿದ್ರು, ನಂಬರ್ ಮಾತ್ರ ನಾಟ್ ರೀಚೆಬಲ್ ಆಗಿದೆ. ಇದ್ರಿಂದ ಈ ಮೂವರು ಇನ್ನೆಷ್ಟು ಜನರಿಗೆ ಕೊರೋನಾ ಅಂಟಿಸುತ್ತಾರೋ ಅನ್ನೋ ಆತಂಕ ಎದುರಾಗಿದೆ.

ಇತ್ತ, ಮೈಸೂರಿನ ಎನ್.ಆರ್ ಕ್ಷೇತ್ರದಲ್ಲಿ ಕೊರೋನಾ ಕಂಟ್ರೋಲ್‌ಗೆ ಬರುತ್ತಿದೆ. ಒಂದು ವಾರದ ಲಾಕ್‌ಡೌನ್ ಬಳಿಕ ಅಲ್ಲಿನ ಜನರು ಕೋವಿಡ್ ತಪಾಸಣೆಗೆ ಸಹಕಾರ ನೀಡ್ತಿದ್ದಾರೆ. ಆದರು ಜನರಲ್ಲಿರುವ ಆತಂಕ ಮಾತ್ರ ಇನ್ನು ಕಡಿಮೆ ಆಗ್ತಿಲ್ಲ. ಇಂದಿನಿಂದ ಲಾಕ್‌ಡೌನ್ ಸಹ ಸಡಿಲಿಕೆ ಆಗಿದ್ದು, ಕೇವಲ ಕಂಟೋನ್ಮೆಂಟ್ ಜೋನ್‌ನ ಮನೆಗಳ ಬಳಿ ಮಾತ್ರ ಸೀಲ್‌ಡೌನ್ ಮಾಡಲಾಗಿದೆ.

ಇದನ್ನೂ ಓದಿ: Coronavirus Updates: ಕರ್ನಾಟಕದಲ್ಲಿ ಕೋವಿಡ್​​-19 ಕಾವು: ಇಂದು 5,007 ಕೇಸ್​​ ಪತ್ತೆ, 85 ಸಾವಿರ ದಾಟಿದ ಸೋಂಕಿತರ ಸಂಖ್ಯೆಇದರ ನಡುವೆ ಲಾಕ್‌ಡೌನ್ ಆಗಿದ್ದ ಚಾಮರಾಜ ಕ್ಷೇತ್ರದ ವ್ಯಾಪ್ತಿಯ ಮಂಡಿ ಠಾಣಾ ಪೊಲೀಸರಿಗೆ ಕೊರೋನಾ ಪಾಸಿಟಿವ್ ಬಂದಿದೆ. ಪೊಲೀಸ್ ಠಾಣೆಯನ್ನೇ ಸೀಲ್‌ಡೌನ್ ಮಾಡಿದ್ದಾರೆ. ಒಂದು ಕಡೆ ಕಂಟ್ರೋಲ್ ಆಗುತ್ತಿದ್ದರೇ ಮತ್ತೊಂದು ಕಡೆ ಕೆಲವರ ಗೊಂದಲದಿಂದ ಕೊರೋನಾ ಮತ್ತಷ್ಟು ಆತಂಕ ಸೃಷ್ಟಿಸಿರೋದಂತು ಸುಳ್ಳಲ್ಲ.
Published by: Ganesh Nachikethu
First published: July 24, 2020, 11:37 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading