ಮೈಸೂರಿನಲ್ಲಿ ಡಿಸಿ ನಂಬರ್ ಕೊಟ್ಟು ಸೋಂಕಿತನ ಕಿತಾಪತಿ; ಈತನಂತೆ 30 ಸೋಂಕಿತರ ಮೊಬೈಲ್ ನಂಬರ್‌ಗಳು ತಪ್ಪು

ಬೇರೆಯವರ ಪೋನ್ ನಂಬರ್, ತಪ್ಪಾದ ಮನೆ ವಿಳಾಸ ನೀಡುತ್ತಿರುವ ಸೋಂಕಿತರು ಕ್ವಾಂರಟೈನ್ ಹಾಗೂ ಐಸೋಲೇಷನ್‌ನಿಂದ ತಪ್ಪಿಸಿಕೊಳ್ಳಲು ಈ ರೀತಿಯ ಪ್ಲಾನ್ ಮಾಡುತ್ತಿದ್ದಾರೆ. ಇಂತವರನ್ನು ಹುಡುಕುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದ್ದು, ಇವರಿಂದ ಮತ್ತಷ್ಟು ಜನರಿಗೆ ಆತಂಕ ಹೆಚ್ಚಿದೆ.

news18-kannada
Updated:July 26, 2020, 2:28 PM IST
ಮೈಸೂರಿನಲ್ಲಿ ಡಿಸಿ ನಂಬರ್ ಕೊಟ್ಟು ಸೋಂಕಿತನ ಕಿತಾಪತಿ; ಈತನಂತೆ 30 ಸೋಂಕಿತರ ಮೊಬೈಲ್ ನಂಬರ್‌ಗಳು ತಪ್ಪು
ಸಾಂದರ್ಭಿಕ ಚಿತ್ರ
  • Share this:
ಮೈಸೂರು(ಜು.26): ಮೈಸೂರಿನಲ್ಲಿ ಕೊರೋನಾ ಪಾಸಿಟಿವ್ ವ್ಯಕ್ತಿಗಳು ನಾಪತ್ತೆಯಾಗುತ್ತಿದ್ದು, ಅವರು ಜಿಲ್ಲೆಯ ತುಂಬೆಲ್ಲಾ ಓಡಾಡುತ್ತಾ ಆತಂಕ ತಂದಿಟ್ಟಿದ್ದಾರೆ. ಮೈಸೂರಿನಲ್ಲಿ ಸುಮಾರು 30 ಕ್ಕೂ ಹೆಚ್ಚು ಪಾಸಿಟಿವ್ ಬಂದ ವ್ಯಕ್ತಿಗಳು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಕೋವಿಡ್ ಟೆಸ್ಟ್ ಮಾಡಿಸುತ್ತಿರುವ ಜನರು, ನಂತರ ಅಡ್ರೆಸ್ ಹಾಗೂ ಪೋನ್ ನಂಬರ್ ತಪ್ಪಾಗಿ ನೀಡುತ್ತಿದ್ದಾರೆ. ಇಂತಹ ಪ್ರಕರಣದಲ್ಲಿ ಪೋನ್ ನಂಬರ್ ಹಾಗೂ ವಿಳಾಸ ತಪ್ಪಾಗಿ ನೀಡಿರುವ 30ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ. ಇದು ಇಡೀ ಮೈಸೂರಿಗೆ ಆತಂಕ ತಂದಿದ್ದು ಪಾಸಿಟಿವ್ ಬಂದು ನಾಪತ್ತೆಯಾಗಿರುವ ವ್ಯಕ್ತಿಗಳು ಇನ್ನೆಷ್ಟು ಜನರಿಗೆ ಕೊರಓನಾ ಹಂಚುತ್ತಾರೆ ಎನ್ನುವ ಭಯ ಶುರುವಾಗಿದೆ.

ನಿನ್ನೆ ಸೋಂಕಿತ ವ್ಯಕ್ತಿಯೊಬ್ಬ ಕೋವಿಡ್‌ ಪರೀಕ್ಷೆ ನಂತರ ಜಿಲ್ಲಾಧಿಕಾರಿಗಳ ಪೋನ್ ನಂಬರನ್ನೇ ಕೊಟ್ಟಿದ್ದ ಪ್ರಕರಣ ಬೆಳಕಿಗೆ ಬಂದಿತ್ತು. ಈ ಪ್ರಕರಣ ಹಿನ್ನೆಲೆ ಹುಡುಕಿತ್ತಾ ಹೋದಾಗ ಸರಿ ಸುಮಾರು 30ಕ್ಕೂ ಹೆಚ್ಚು ಪಾಸಿಟಿವ್‌ ಕೇಸ್‌ಗಳ ವರದಿ ಆಧರಿಸಿ ಸೋಂಕಿತರಿಗೆ ಪೋನ್ ಮಾಡಿದಾಗ, ಅವರು ತಪ್ಪು ಪೋನ್ ನಂಬರ್ ಹಾಗೂ ತಪ್ಪು ವಿಳಾಸ ನೀಡುತ್ತಿದ್ದಾರೆ.

ಆಗಸ್ಟ್‌ 15 ರಂದು ಕೊರೋನಾ ಸೋಂಕಿನಿಂದ ಸ್ವಾತಂತ್ಯ್ರ ಪಡೆಯುವ ಸಂಕಲ್ಪ ಮಾಡೋಣ; ನರೇಂದ್ರ ಮೋದಿ

ಇದೇ ರೀತಿ ಬೇರೆಯವರ ಪೋನ್ ನಂಬರ್, ತಪ್ಪಾದ ಮನೆ ವಿಳಾಸ ನೀಡುತ್ತಿರುವ ಸೋಂಕಿತರು ಕ್ವಾಂರಟೈನ್ ಹಾಗೂ ಐಸೋಲೇಷನ್‌ನಿಂದ ತಪ್ಪಿಸಿಕೊಳ್ಳಲು ಈ ರೀತಿಯ ಪ್ಲಾನ್ ಮಾಡುತ್ತಿದ್ದಾರೆ. ಇಂತವರನ್ನು ಹುಡುಕುವುದೇ ಜಿಲ್ಲಾಡಳಿತಕ್ಕೆ ದೊಡ್ಡ ಸವಾಲಾಗಿದ್ದು, ಇವರಿಂದ ಮತ್ತಷ್ಟು ಜನರಿಗೆ ಆತಂಕ ಹೆಚ್ಚಿದೆ. ಇಂತವರು ಬೇಕಾಬಿಟ್ಟಿ ಓಡಾಡಿದ್ರೆ ಪ್ರಾಥಮಿಕ ಹಾಗೂ ದ್ವಿತೀಯ ಸಂಪರ್ಕಿತರನ್ನೇ ಹುಡುಕುವುದು ಕಷ್ಟವಾಗಲಿದೆ ಅನ್ನೋದು ಆರೋಗ್ಯ ಅಧಿಕಾರಿಗಳ ಅಭಿಪ್ರಾಯವಾಗಿದೆ.

ಮೈಸೂರಿನಲ್ಲಿ ಈಗಾಗಲೇ 2500 ಗಡಿ ದಾಟಿರುವ ಪಾಸಿಟಿವ್‌ ಕೇಸ್‌ಗಳಲ್ಲಿ SARI ಹಾಗೂ ILI ಪ್ರಕರಣಗಳು ಸಾವಿರದ ಗಡಿ ಮುಟ್ಟಿವೆ. ಈ ಪ್ರಕರಣಗಳಿಗೆ ಎಲ್ಲಿಂದ ಸೋಂಕು ಬಂತು ಅನ್ನೋದೆ ಈವರೆಗೂ ಗೊತ್ತಾಗಿಲ್ಲ. ಇವುಗಳ ಮಧ್ಯೆ ಇದೀಗ ಇಂತಹ ಅಪ್ರಬುದ್ದ ಸೋಂಕಿತರು ಕ್ವಾರಂಟೈನ್ ಐಸೋಲೇಷನ್​ನಿಂದ ತಪ್ಪಿಸಿಕೊಳ್ಳೋಕೆ ತಪ್ಪು ಮಾಹಿತಿ ನೀಡಿ ಅಧಿಕಾರಿಗಳು ಹಾಗೂ ಸಾರ್ವಜನಿಕರಲ್ಲಿ ಆತಂಕ ಹೆಚ್ಚಿಸಿದ್ದಾರೆ.
Published by: Latha CG
First published: July 26, 2020, 2:28 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading