ಕ್ವಾರಂಟೈನ್ ನಿಯಮಗಳ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ; ರಾಜ್ಯದಲ್ಲಿ ಎರಡು ಸಾವಿರ ಪ್ರಕರಣ ದಾಖಲು

ಸರ್ಕಾರದ ಮಾರ್ಗಸೂಚಿ ಮತ್ತು ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಸುಮಾರು 3.78 ಲಕ್ಷ ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರೆ. ಈ ಬಗ್ಗೆ ರಾಜ್ಯದಲ್ಲಿ ಎರಡು ಸಾವಿರ ಪ್ರಕರಣಗಳು ದಾಖಲಾಗಿವೆ

news18-kannada
Updated:August 7, 2020, 12:01 PM IST
ಕ್ವಾರಂಟೈನ್ ನಿಯಮಗಳ ಉಲ್ಲಂಘಿಸಿ ಬೇಕಾಬಿಟ್ಟಿ ಓಡಾಟ ; ರಾಜ್ಯದಲ್ಲಿ ಎರಡು ಸಾವಿರ ಪ್ರಕರಣ ದಾಖಲು
ಸಾಂದರ್ಭಿಕ ಚಿತ್ರ
  • Share this:
ಬೆಂಗಳೂರು(ಆಗಸ್ಟ್​. 07): ರಾಜ್ಯದಲ್ಲಿ ಮಾಹಾಮಾರಿ ಕೊರೋನಾ ಆರ್ಭಟ ಜೋರಾಗಿದೆ‌. ಪ್ರತಿದಿನ 5 ಸಾವಿರಕ್ಕೂ ಅಧಿಕ ಪ್ರಕರಣಗಳು ವರದಿಯಾಗುತ್ತಿವೆ. ದಿನೇ ದಿನೇ ಕೊರೋನಾ ಪಾಸಿಟಿವ್ ಗಳ ಕೇಸ್ ಗಳ ಸಂಖ್ಯೆ ಏರುತ್ತಿದ್ದು, ಸೋಂಕಿತರ ಸಂಪರ್ಕದಲ್ಲಿದ್ದ ಲಕ್ಷಾಂತರ ಜನ ಮನೆಗಳಲ್ಲಿ ಹೋಂ ಕ್ವಾರಂಟೈನ್​​​ಗೆ ಒಳಗಾಗಿದ್ದಾರೆ. ಸೋಂಕಿತರೊಂದಿಗೆ ಪ್ರಾಥಮಿಕ ಮತ್ತು ದ್ವಿತೀಯ ಸಂಪರ್ಕದಲ್ಲಿದ್ದ ಸಾವಿರಾರು ಜನರನ್ನ ಕಟ್ಟುನಿಟ್ಟಾಗಿ ಕ್ವಾರಂಟೈನ್ ಇರುವಂತೆ ಸೂಚಿಸನೆ ನೀಡಿಲಾಗಿದೆ. ಆದರೆ ಹಲವರು ಬೇಕಾಬಿಟ್ಟಿ ತಿರುಗಾಟ ನಡೆಸಿರುವುದು ಸಹ ಬೆಳಕಿಗೆ ಬಂದಿದೆ.

ಹೋಂ ಕ್ವಾರಂಟೈನ್ ಇರುವ ಬಗ್ಗೆ ಸರ್ಕಾರ ಕಟ್ಟುನಿಟ್ಟಿನ ಮಾರ್ಗಸೂಚಿಗಳನ್ನ ಹೊರಡಿಸಿದೆ. ಸೋಂಕಿತ ವ್ಯಕ್ತಿಗಳ ಜೊತೆ ಪ್ರಾಥಮಿಕ ಸಂಪರ್ಕದಲ್ಲಿದ್ದವರು, ವಿದೇಶಗಳಿಂದ ಮರಳಿದವರು, ಹೊರರಾಜ್ಯಗಳಿಂದ ರಾಜ್ಯಕ್ಕೆ ಬರುವವರು  ಹಾಗೂ ಕೊರೋನಾದಿಂದ ಗುಣಮುಖರಾದವರು 14 ದಿನ ಕ್ವಾರಂಟೈನ್ ಇರುವುದು ಕಡ್ಡಾಯ. ಆದರೆ, ಕ್ವಾರಂಟೈನ್ ಅವಧಿಯಲ್ಲಿ ಮೂರು ಲಕ್ಷ ಜನ ಬೇಕಾಬಿಟ್ಟಿಯಾಗಿ ಓಡಾಡಿದ್ದಾರಂತೆ.

ಸರ್ಕಾರದ ಮಾರ್ಗಸೂಚಿ ಮತ್ತು ಕೋವಿಡ್ ನಿಯಮಗಳನ್ನ ಗಾಳಿಗೆ ತೂರಿ ಸುಮಾರು 3.78 ಲಕ್ಷ ಮಂದಿ ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿದ್ದಾರಂತೆ. ಈ ಬಗ್ಗೆ ರಾಜ್ಯದಲ್ಲಿ ಎರಡು ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ. ರಾಜ್ಯದ ಹತ್ತಕ್ಕು ಹೆಚ್ಚು ಜಿಲ್ಲೆಗಳಲ್ಲಿ ನೂರಾರು ಪ್ರಕರಣಗಳು ದಾಖಲಾಗಿವೆ. ಅವುಗಳಲ್ಲಿ ಹೆಚ್ಚು ಪ್ರಕರಣ ದಾಖಲಾದ ಜಿಲ್ಲೆಗಳು ಬೆಂಗಳೂರು ನಗರ -200, ಬೆಂಗಳೂರು ಗ್ರಾಮಾಂತರ-154, ಬೆಳಗಾವಿ-131, ಕಲಬುರಗಿ-108, ವಿಜಯಪುರ-104, ಬಾಗಲಕೋಟೆ-102, ದಾವಣಗೆರೆ-98, ಚಿತ್ರದುರ್ಗ-82, ಬೀದರ್-75, ರಾಯಚೂರು-73, ತುಮಕೂರು-65 ಪ್ರಕರಣಗಳು ದಾಖಲಾಗಿವೆ.

ಸಾರ್ವಜನಿಕ ಸ್ಥಳಗಳಲ್ಲಿ ಓಡಾಡಿ ಜನರಲ್ಲಿ ಆತಂಕ ಉಂಟು ಮಾಡಿದ ಆರೋಪದ ಮೇಲೆ ಸಾಂಕ್ರಾಮಿಕ ರೋಗಗಳ ನಿಯಂತ್ರಣ ಕಾಯ್ದೆಯಡಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಇದನ್ನೂ ಓದಿ : ಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ, ಹೆಚ್ಚುತ್ತಿದೆ ನದಿ ನೀರಿನ ಹರಿವು ; ತಗ್ಗುತ್ತಿಲ್ಲ ಕಡಲಿನ ಅಲೆಗಳ ಅಬ್ಬರ

ರಾಜಧಾನಿ ಬೆಂಗಳೂರಿನಲ್ಲಿ 20 ದಿನಗಳ ಬಳಿಕ ದಾಖಲೆಯ ಸಂಖ್ಯೆಯ ಹೊಸ ಕೊರೋನಾ ಸೋಂಕಿತರ ಪ್ರಕರಣ ದಾಖಲಾಗಿದೆ. ಜು.16 ರಂದು ಬೆಂಗಳೂರಿನಲ್ಲಿ 2,344 ಕೊರೋನಾ ಸೋಂಕು ಪ್ರಕರಣ ಪತ್ತೆಯಾಗಿರುವುದು ದಾಖಲೆಯಾಗಿತ್ತು. ಅದಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ ಇಳಿಕೆಯಾಗಿತ್ತು. ಆದರೆ, ಗುರುವಾರ 2544 ಕೊರೋನಾ ಸೋಂಕಿತರು ಪತ್ತೆಯಾಗಿರುವುದು ಹೊಸ ದಾಖಲೆಯಾಗಿದೆ.
ಗುರುವಾರ ಪತ್ತೆಯಾದ 2,544 ಮಂದಿಯಲ್ಲಿ 1,464 ಮಂದಿ ಪುರುಷರು, 1,079 ಮಂದಿ ಮಹಿಳೆಯರು, ಓರ್ವ ಲೈಂಗಿಕ ಅಲ್ಪಸಂಖ್ಯಾತರಾಗಿದ್ದಾರೆ. ಇದರೊಂದಿಗೆ ಬೆಂಗಳೂರಿನ ಕೊರೋನಾ ಸೋಂಕಿತರ ಸಂಖ್ಯೆ 67,425 ಏರಿಕೆಯಾಗಿದೆ. 1,178 ಜನರು ಸಾವನ್ನಪ್ಪಿದ್ದಾರೆ.
Published by: G Hareeshkumar
First published: August 7, 2020, 11:54 AM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading