- News18 Kannada
- Last Updated: April 23, 2021, 4:39 PM IST
ರಾಣಿ ಎಲಿಜಬೆತ್ II ಈ ವರ್ಷ ಏಪ್ರಿಲ್ 21 ರಂದು 95 ನೇ ವರ್ಷಕ್ಕೆ ಕಾಲಿಟ್ಟರು. ಈ ಬಾರಿ ಅವರು ತಮ್ಮ ಹುಟ್ಟುಹಬ್ಬವನ್ನು ಆವರಿಸಿಲ್ಲ. ತಮ್ಮ ಪತಿ ಎಡಿನ್‌ಬರ್ಗ್ ಡ್ಯೂಕ್ ಪ್ರಿನ್ಸ್ ಫಿಲಿಪ್ ಅವರ ಮರಣದಿಂದ ಈ ವರ್ಷ ಅವರ ಜನ್ಮದಿನವನ್ನು ಆಚರಿಸಿಕೊಳ್ಳಲಿಲ್ಲ. ಪ್ರಿನ್ಸ್ ಫಿಲಿಪ್ ತಮ್ಮ 100 ನೇ ಜನ್ಮ ದಿನಾಚರಣೆ ಕೆಲವೇ ವಾರಗಳಿರುವಾಗ ಅವರು ನಿಧನರಾದರು. ರಾಣಿ ಎಲಿಜಬೆತ್ ಒಂದು ವರ್ಷದಲ್ಲಿ ಎರಡು ಜನ್ಮದಿನಗಳನ್ನು ಆಚರಿಸುತ್ತಾರೆ. ಮೊದಲನೆಯದು ಅವರು 1926 ರಲ್ಲಿ ಏಪ್ರಿಲ್ 21 ರಂದು ಜನಿಸಿದ ದಿನವಾದರೆ, ಮತ್ತೊಂದು, ಜೂನ್ ಎರಡನೇ ಶನಿವಾರದಂದು ಅಧಿಕೃತವಾದ ಹುಟ್ಟುಹಬ್ಬವನ್ನು ಆಚರಿಸುತ್ತಾರೆ.
ರಾಣಿ ಸಾಮಾನ್ಯವಾಗಿ ತನ್ನ ನಿಜವಾದ ಜನ್ಮದಿನವನ್ನು ತನ್ನ ಕುಟುಂಬದೊಂದಿಗೆ ಆಚರಿಸುತ್ತಾರೆ. ಆದರೂ, ಈ ವೇಳೆ ಹೈಡ್ ಪಾರ್ಕ್‌ನಲ್ಲಿ 41-ಗನ್ ಸೆಲ್ಯೂಟ್, ವಿಂಡ್ಸರ್ ಗ್ರೇಟ್ ಪಾರ್ಕ್‌ನಲ್ಲಿ 21-ಗನ್ ಸೆಲ್ಯೂಟ್ ಮತ್ತು ಏಪ್ರಿಲ್ 21 ರಂದು ಲಂಡನ್ ಗೋಪುರದಲ್ಲಿ 62-ಗನ್ ಸೆಲ್ಯೂಟ್ ನಲ್ಲಿರುತ್ತದೆ. ಆದರೆ, ಅವರ ಅಧಿಕೃತ ಜನ್ಮದಿನದಂದು, ರಾಷ್ಟ್ರದಲ್ಲಿ ಒಂದು ದೊಡ್ಡ ಸಾಂಪ್ರದಾಯಿಕ ಸಮಾರಂಭ, ಟ್ರೂಪಿಂಗ್ ಆಫ್ ಕಲರ್ಸ್ ಪೆರೇಡ್‌ನಿಂದ ಗುರುತಿಸಲಾಗಿದೆ. ಬ್ರಿಟಿಷ್ ರಾಜ ಮನೆತನದವರ ಅಧಿಕೃತ ಜನ್ಮದಿನಗಳನ್ನು ಗುರುತಿಸಲು ಈ ಸಮಾರಂಭವನ್ನು 260 ವರ್ಷಗಳಿಗೂ ಹೆಚ್ಚು ಕಾಲದಿಂದ ಆಚರಿಸಲಾಗುತ್ತಿದೆ.
ಮೆರವಣಿಗೆಯಲ್ಲಿ 1400 ಕ್ಕೂ ಹೆಚ್ಚು ಸೈನಿಕರು, 200 ಕುದುರೆಗಳು ಮತ್ತು 400 ಸಂಗೀತಗಾರರು ಭಾಗವಹಿಸಿದ್ದಾರೆ. ಈ ಮೆರವಣಿಗೆ ರಾಣಿ ಎಲಿಜಬೆತ್‌ರ ಅಧಿಕೃತ ನಿವಾಸವಾದ ಬಕಿಂಗ್‌ಹ್ಯಾಮ್ ಅರಮನೆಯಿಂದ ಪ್ರಾರಂಭವಾಗುತ್ತದೆ. ಇದು ಡೌನಿಂಗ್ ಸ್ಟ್ರೀಟ್ ಬಳಿಯ ವೈಟ್‌ಹಾಲ್‌ನಲ್ಲಿ ಮಾಲ್‌ನಿಂದ ಹಾರ್ಸ್ ಗಾರ್ಡ್ಸ್ ಪೆರೇಡ್‌ವರೆಗೆ ಚಲಿಸುತ್ತದೆ. ನಂತರ ಮತ್ತೆ ವಾಪಸ್ ಅರಮನೆಗೆ ಮರಳುತ್ತದೆ. ರಾಜಮನೆತನದವರು ಸಾಂಪ್ರದಾಯಿಕ ಸಮಾರಂಭದ ಅಂಗವಾಗಿ ಮಾಲ್‌ನಿಂದ ಪ್ರಯಾಣಿಸುತ್ತಾರೆ. ಜನರನ್ನು ತಮ್ಮ ನಿವಾಸದ ಬಕಿಂಗ್‌ಹ್ಯಾಮ್ ಅರಮನೆಯ ಬಾಲ್ಕನಿಯಲ್ಲಿ ಸ್ವಾಗತಿಸುತ್ತಾರೆ. ಈ ಸಂದರ್ಭಕ್ಕಾಗಿ ವೈಮಾನಿಕ ಪ್ರದರ್ಶನವನ್ನು ಆರ್‌ಎಎಫ್ ವಿಮಾನಗಳ ಪ್ರದರ್ಶನದೊಂದಿಗೆ ಮೆರವಣಿಗೆ ಮುಕ್ತಾಯವಾಗುತ್ತದೆ.
ಇದನ್ನು ಓದಿ: ವೈರಲ್ ಆಯಿತು ಸುಮಿತ್ರಾ ಮಹಾಜನ್ ಸಾವಿನ ಫೇಕ್ ಸುದ್ದಿ; ಟ್ವೀಟ್ ಡಿಲೀಟ್ ಮಾಡಿದ ತರೂರ್
ರಾಯಲ್ ನಿಯಮಾವಳಿಗಳ ಪ್ರಕಾರ, ಹವಾಮಾನವು ಆಹ್ಲಾದಕರವಾದಾಗ ಬೇಸಿಗೆಯಲ್ಲಿ ಒಂದು ದಿನದಂದು ರಾಯಲ್ ಮೊನಾರ್ಕ್ ಅವರ ಅಧಿಕೃತ ಜನ್ಮದಿನವನ್ನು ಸಾರ್ವಜನಿಕವಾಗಿ ಆಚರಿಸುವುದು ಅವಶ್ಯಕ. ಅಕ್ಟೋಬರ್‌ನಲ್ಲಿ ಜನಿಸಿದ ಕಿಂಗ್ ಜಾರ್ಜ್ II ಈ ಪದ್ಧತಿಯನ್ನು ಪ್ರಾರಂಭಿಸಿದರೆಂದು ನಂಬಲಾಗಿದೆ.
ಈ ವರ್ಷ, ರಾಯಲ್ ಫ್ಯಾಮಿಲಿ ಡ್ಯೂಕ್ ಆಫ್ ಎಡಿನ್‌ಬರ್ಗ್ ಸಾವಿನ ಬಗ್ಗೆ ಶೋಕಿಸುತ್ತಿರುವುದರಿಂದ, ಆಚರಣೆಯನ್ನು ಸಾರ್ವಜನಿಕವಾಗಿ ಗುರುತಿಸಲು ಯಾವುದೇ ಗನ್ ಸೆಲ್ಯೂಟ್ ಇರಲಿಲ್ಲ ಮತ್ತು ರಾಣಿ ತನ್ನ ಅಧಿಕೃತ ಭಾವಚಿತ್ರವನ್ನು ಈ ಬಾರಿ ಬಿಡುಗಡೆ ಮಾಡಲಿಲ್ಲ. ಸಾಮಾನ್ಯವಾಗಿ ವಿಶೇಷ ಸಂದರ್ಭಗಳಲ್ಲಿ ಅಧಿಕೃತ ಭಾವಚಿತ್ರವನ್ನು ಬಿಡುಗಡೆ ಮಾಡಲಾಗುತ್ತದೆ.