ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Bank Holidays in April 2021: ಏಪ್ರಿಲ್‌ ಆರಂಭದಲ್ಲೇ ಬ್ಯಾಂಕ್‌ಗಳಿಗೆ ಸಾಲು ಸಾಲು ರಜೆ!‌

Bank Holidays in April 2021: ಇಂದು ಬ್ಯಾಂಕುಗಳು ತಮ್ಮ ವಾರ್ಷಿಕ ಖಾತೆಗಳನ್ನು ಕ್ಲೋಸ್‌ ಮಾಡಲು ಸಾರ್ವಜನಿಕರಿಗೆ ಬ್ಯಾಂಕ್‌ಗಳನ್ನು ತೆರೆಯುವುದಿಲ್ಲ. ಏಪ್ರಿಲ್ 2 ರಂದು, ಗುಡ್‌ ಫ್ರೈಡೇ ಕಾರಣ ಬ್ಯಾಂಕುಗಳನ್ನು ಮುಚ್ಚಲಾಗುವುದು. ಏಪ್ರಿಲ್ 4 ರಂದು ಭಾನುವಾರವಾದ್ದರಿಂದ ಬ್ಯಾಂಕ್‌ಗೆ ರಜಾ ದಿನ.

ತಿಂಗಳಾರಂಭದಲ್ಲಿ ಕೆಲವರಿಗೆ ಸಾಮಾನ್ಯವಾಗಿ ಬ್ಯಾಂಕ್‌ ಕೆಲಸಗಳಿರುತ್ತವೆ. ಇಂತಹವರು ತಮ್ಮ ಖಾತೆ ಇರುವ ಹತ್ತಿರದ ಬ್ಯಾಂಕ್‌ ಶಾಖೆಗಳಿಗೆ ಹೋಗಿ ತಮ್ಮ ಕೆಲಸ ಪೂರ್ಣಗೊಳಿಸಿಕೊಳ್ಳುತ್ತಾರೆ. ಆದರೆ, ಏಪ್ರಿಲ್‌ ತಿಂಗಳ ಆರಂಭದಲ್ಲಿ ಸಾರ್ವಜನಿಕರಿಗೆ ಬ್ಯಾಂಕ್‌ಗೆ ಹೋಗಬೇಕು ಎನ್ನುವವರು ಸ್ವಲ್ಪ ಕಾಯಿರಿ. ಏಕೆಂದರೆ ಇಂದಿನಿಂದ ಏಪ್ರಿಲ್‌ 4 ರವರೆಗೆ ಬ್ಯಾಂಕ್‌ ಸಾರ್ವಜನಿಕರಿಗೆ ಅಥವಾ ತಮ್ಮ ಗ್ರಾಹಕರಿಗೆ ಒಂದು ದಿನ ಮಾತ್ರ ಕಾರ್ಯ ನಿರ್ವಹಿಸುತ್ತದೆ. ರಜಾದಿನಗಳಿಂದಾಗಿ ದೇಶಾದ್ಯಂತ ಬ್ಯಾಂಕುಗಳು ಮುಚ್ಚಲಿರುವುದರಿಂದ ಬ್ಯಾಂಕುಗಳಿಗೆ ಭೇಟಿ ನೀಡಲು ಪ್ಲಾನ್‌ ಮಾಡುತ್ತಿರುವವರು ತಮ್ಮ ಭೇಟಿಯನ್ನು ಮುಂದೂಡಬೇಕಾಗುತ್ತದೆ. ಏಪ್ರಿಲ್‌ 3 ಶನಿವಾರ ಮಾತ್ರ ತೆರೆಯಲಿದ್ದು, ಆ ದಿನ ಹೆಚ್ಚು ಜನಸಂದಣಿ ಇರುವ ಸಾಧ್ಯತೆ ಇದೆ.


ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಬಿಡುಗಡೆ ಮಾಡಿದ ಕ್ಯಾಲೆಂಡರ್ ಪ್ರಕಾರ, ಏಪ್ರಿಲ್ 1 ರಂದು ಬ್ಯಾಂಕುಗಳು ತಮ್ಮ ವಾರ್ಷಿಕ ಖಾತೆಗಳನ್ನು ಕ್ಲೋಸ್‌ ಮಾಡಲು ಸಾರ್ವಜನಿಕರಿಗೆ ಬ್ಯಾಂಕ್‌ಗಳನ್ನು ತೆರೆಯುವುದಿಲ್ಲ. ಏಪ್ರಿಲ್ 2 ರಂದು, ಗುಡ್‌ ಫ್ರೈಡೇ ಕಾರಣ ಬ್ಯಾಂಕುಗಳನ್ನು ಮುಚ್ಚಲಾಗುವುದು. ಆದರೂ, ರಜಾದಿನವನ್ನು ಕೆಲವು ರಾಜ್ಯಗಳು ಆಚರಿಸುವುದಿಲ್ಲ. ಹೀಗಾಗಿ ಇದು ಒಂದು ರಾಜ್ಯದಿಂದ ಮತ್ತೊಂದು ರಾಜ್ಯಕ್ಕೆ ಬದಲಾಗಬಹುದು. ಇನ್ನು, ಏಪ್ರಿಲ್ 4 ರಂದು ಭಾನುವಾರವಾದ್ದರಿಂದ ಬ್ಯಾಂಕ್‌ಗೆ ರಜಾ ದಿನ. ಈ ಹಿನ್ನೆಲೆ ಗ್ರಾಹಕರ ಸೇವೆಗಳ ಮೇಲೆ ಈ ವಾರ ಪರಿಣಾಮ ಬೀರಬಹುದು.


ಏಪ್ರಿಲ್‌ 3, 2021 ಶನಿವಾರವಾಗಿದ್ದು, ಅಂದು ಬ್ಯಾಂಕ್‌ ಓಪನ್‌ ಆಗುತ್ತದೆ. ಆದರೆ, ಈ ತಿಂಗಳಲ್ಲಿ ಬ್ಯಾಂಕ್‌ ಸಾರ್ವಜನಿಕರಿಗೆ ಲಭ್ಯವಾಗುವುದು ಅದೇ ಮೊದಲ ದಿನವಾದ್ದರಿಂದ ಹೆಚ್ಚಿನ ಜನಸಂದಣಿ ಇರುವ ಸಾಧ್ಯತೆ ಹೆಚ್ಚಿರುತ್ತದೆ. ಈ ಹಿನ್ನೆಲೆ ನೀವು ಆ ದಿನ ಬ್ಯಾಂಕ್‌ಗೆ ಹೋಗಬೆಕೆಂದರೆ ಹೆಚ್ಚು ಕ್ಯೂ ಇರಲಿದ್ದು, ಹೆಚ್ಚಿನ ಸಮಯವನನ್ನು ನಿಮ್ಮ ಬ್ಯಾಂಕ್‌ ಶಾಖೆಗಳಲ್ಲೇ ಕಳೆಯಬೇಕಾಗಿ ಬರಬಹುದು.


ಇದನ್ನೂ ಓದಿ: Bank Holidays in April 2021: ಬ್ಯಾಂಕ್ ಗ್ರಾಹಕರೇ ಗಮನಿಸಿ!; ಏಪ್ರಿಲ್‌ ತಿಂಗಳಲ್ಲಿ ಬ್ಯಾಂಕ್​ಗಳಿಗೆ 15 ದಿನ ರಜೆ

ಯಾವುದೇ ಬ್ಯಾಂಕ್ ಸಂಬಂಧಿತ ಕೆಲಸವನ್ನು ನಿಗದಿಪಡಿಸುವ ಮೊದಲು ನೀವು ಗಮನಿಸಬೇಕಾದ ರಜಾದಿನಗಳ ಪಟ್ಟಿ ಇಲ್ಲಿದೆ:

ಏಪ್ರಿಲ್ 1: ವಾರ್ಷಿಕ ಖಾತೆಗಳನ್ನು ಕ್ಲೋಸ್‌ ಮಾಡಲು ಬ್ಯಾಂಕ್ ಅನ್ನು ಮುಚ್ಚಲಾಗುವುದು

ಏಪ್ರಿಲ್ 2: ಗುಡ್‌ ಫ್ರೈಡೇ. ಕೆಲವು ರಾಜ್ಯಗಳಲ್ಲಿ ಬ್ಯಾಂಕುಗಳು ತೆರೆದಿರುವ ಸಾಧ್ಯತೆ ಇದೆ.

ಏಪ್ರಿಲ್ 4: ಭಾನುವಾರ


ರಜಾದಿನಗಳ ಕಾರಣ, ಬ್ಯಾಂಕ್ ಗ್ರಾಹಕರಿಗೆ ಹಣವನ್ನು ಹಿಂಪಡೆಯಲು ಮತ್ತು ಬ್ಯಾಂಕ್ ಶಾಖೆಗಳಲ್ಲಿ ಠೇವಣಿ ಇರಿಸಲು ಸಾಧ್ಯವಾಗುವುದಿಲ್ಲ. ಆದರೂ, ಈ ದಿನಗಳಲ್ಲಿ ಎಟಿಎಂಗಳು, ಮೊಬೈಲ್ ಬ್ಯಾಂಕಿಂಗ್ ಮತ್ತು ಆನ್‌ಲೈನ್ ಬ್ಯಾಂಕಿಂಗ್ ಸೇವೆಗಳು ಲಭ್ಯವಿರುತ್ತವೆ ಎಂಬುದನ್ನು ಗ್ರಾಹಕರು ಗಮನಿಸಬಹುದು.

Published by: Sushma Chakre
First published: April 1, 2021, 1:11 PM IST