ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)
HOME » NEWS »NATIONAL-INTERNATIONAL » AUSTRALIA SUSPENDS ALL DIRECT PASSENGER FLIGHTS FROM INDIA TILL MAY 15 AMID COVID 19 SCARE LG

ಕೋವಿಡ್​ ಬಿಕ್ಕಟ್ಟು: ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿರ್ಬಂಧ ಹೇರಿದ ಆಸ್ಟ್ರೇಲಿಯಾ ಸರ್ಕಾರ

ಸೋಮವಾರ ಭಾರತದಲ್ಲಿ 3,52,000 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಸತತ ಐದನೇ ದಿನವೂ ಇದೇ ಮಟ್ಟದಲ್ಲಿ ಕೊರೋನಾ ಕೇಸ್​​ಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ಅಮೆರಿಕದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು.

ನವದೆಹಲಿ(ಏ.27): ಭಾರತದಲ್ಲಿ ಕೊರೋನಾ ಪರಿಸ್ಥಿತಿ ಕೈ ಮೀರಿದ್ದು, ಪ್ರತಿದಿನ ಮೂರು ಲಕ್ಷಕ್ಕೂ ಅಧಿಕ ಕೇಸ್​ಗಳು ಪತ್ತೆಯಾಗುತ್ತಿವೆ. ಕೊರೋನಾ ಭಾರತೀಯರಿಗೆ ನರಕ ದರ್ಶನ ಮಾಡಿಸುತ್ತಿದೆ. ಭಾರತದಲ್ಲಿನ ಮಹಾಮಾರಿ ಕೊರೋನಾ ಆರ್ಭಟವನ್ನು ನೋಡಿ ಉಳಿದ ದೇಶಗಳು ಬೆಚ್ಚಿ ಬಿದ್ದಿವೆ. ಹೀಗಾಗಿ ಅನೇಕ ದೇಶಗಳು ಭಾರತದ ವಿಮಾನಗಳಿಗೆ ನಿಷೇಧ ಹೇರಿವೆ. ಅಂತೆಯೇ ಆಸ್ಟ್ರೇಲಿಯಾ ಸರ್ಕಾರ ಕೂಡ ಸದ್ಯಕ್ಕೆ ಭಾರತೀಯ ವಿಮಾನಗಳಿಗೆ ನಿರ್ಬಂಧ ವಿಧಿಸಿದೆ. ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್​​ ಮಾರಿಸನ್​​ ಭಾರತದ ವಿಮಾನಗಳಿಗೆ ನಿರ್ಬಂಧ ವಿಧಿಸಿ ಆದೇಶ ಹೊರಡಿಸಿದ್ದಾರೆ.


ಭಾರತದಲ್ಲಿ ದಿನೇ ದಿನೇ ಕೊರೋನಾ ಕೇಸ್​ ಹೆಚ್ಚುತ್ತಿರುವ ಹಿನ್ನೆಲೆ, ಮೇ 15ರವರೆಗೆ ಭಾರತದ ವಿಮಾನಗಳಿಗೆ ನಿಷೇಧ ಹೇರಿ ಆಸ್ಟ್ರೇಲಿಯಾ ಸರ್ಕಾರ ಆದೇಶಿಸಿದೆ. ತಮ್ಮ ದೇಶಕ್ಕೆ ಕೊರೋನಾ ಹರಡುವ ಭೀತಿಯಿಂದ ಮುಂಜಾಗ್ರತೆಯಿಂದ ಈ ಕ್ರಮ ತೆಗೆದುಕೊಂಡಿದ್ದಾರೆ. ಇಡೀ ವಿಶ್ವದಲ್ಲೇ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ಎರಡನೇ ದೇಶವಾಗಿರುವ ಭಾರತದಲ್ಲಿ ಅತೀ ಹೆಚ್ಚು ಕೋವಿಡ್-19 ಪ್ರಕರಣಗಳು ಪತ್ತೆಯಾಗುತ್ತಿರುವ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದೆ. ಕಳೆದ ವರ್ಷದಂತೆ ಪರಿಸ್ಥಿತಿ ಹದಗೆಡಬಾರದೆಂಬ ಉದ್ದೇಶದಿಂದ ಆಸ್ಟ್ರೇಲಿಯಾ ಪ್ರಧಾನಿ ಈ ನಿರ್ಧಾರಕ್ಕೆ ಬಂದಿದ್ದಾರೆ.


ಭೂಗರ್ಭದಂತೆ ಮಂಗಳನ ಅಂಗಳದ ಕೆಳಗೆ ಸೂಕ್ಷ್ಮಜೀವಿಗಳು ವಾಸಿಸಬಲ್ಲವು..!: ಅಧ್ಯಯನ


‘ಭಾರತದಿಂದ ಬರುವ ಎಲ್ಲಾ ವಿಮಾನಗಳನ್ನು ಸ್ಥಗಿತಗೊಳಿಸುವಂತೆ ನಾನು ಕಳೆದ ವಾರದ ಕೊನೆಯಲ್ಲಿ ಭಾರತದ ಪ್ರಧಾನಿಗೆ ಪತ್ರವೊಂದನ್ನು ಕಳುಹಿಸಿದ್ದೆ. ಅವರು ಪತ್ರವನ್ನು ಪರಿಗಣಿಸಿದ್ದಾರೆ ಎಂದು ತಿಳಿದು ಬಂದಿದೆ‘ ಎಂದು ಪ್ರಧಾನಿ ಸ್ಕಾಟ್​ ಮಾರಿಸನ್ ಹೇಳಿದ್ದಾರೆ. ಭಾರತದ ವಿಮಾನಗಳನ್ನು ಸ್ಥಗಿತಗೊಳಿಸುವ ವಿಚಾರವಾಗಿ ಆಸ್ಟ್ರೇಲಿಯಾದ ರಾಷ್ಟ್ರೀಯ ಭದ್ರತಾ ಸಮಿತಿ ಇಂದು ಸಭೆ ಸೇರಿ ನಿರ್ಧಾರ ತೆಗೆದುಕೊಂಡಿದೆ.

ಕೊರೋನಾ ನಿಯಂತ್ರಣಕ್ಕಾಗಿ ಆಸ್ಟ್ರೇಲಿಯಾವು ಕಳೆದ ಮಾರ್ಚ್​ ತಿಂಗಳಿನಿಂದ ಎಲ್ಲಾ ಗಡಿಗಳನ್ನು ಮುಚ್ಚಿದೆ. ಮರಳಿ ದೇಶಕ್ಕೆ ಬಂದಿರುವ ಪ್ರಯಾಣಿಕರು ಕಡ್ಡಾಯವಾಗಿ ಕೊರೋನಾ ಪರೀಕ್ಷೆ ಮಾಡಿಸಿಕೊಳ್ಳಬೇಕು. ಜೊತೆಗೆ ಎರಡು ವಾರಗಳ ಕಾಲ ಹೋಟೆಲ್​ನಲ್ಲಿ ಕ್ವಾರಂಟೈನ್​ನಲ್ಲಿರಬೇಕು. ಚಿಕಿತ್ಸೆಯ ಖರ್ಚು-ವೆಚ್ಚ ಎಲ್ಲವೂ ನಿಮ್ಮದೇ ಎಂದು ಆಸ್ಟ್ರೇಲಿಯಾ ಸರ್ಕಾರ ದೇಶದ ಜನರಿಗೆ ಖಡಕ್ ಆದೇಶ ನೀಡಿದೆ.


ಸೋಮವಾರ ಭಾರತದಲ್ಲಿ 3,52,000 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಸತತ ಐದನೇ ದಿನವೂ ಇದೇ ಮಟ್ಟದಲ್ಲಿ ಕೊರೋನಾ ಕೇಸ್​​ಗಳು ಕಾಣಿಸಿಕೊಳ್ಳುತ್ತಿವೆ. ಕಳೆದ ವರ್ಷ ಅಮೆರಿಕದಲ್ಲಿ ಅತೀ ಹೆಚ್ಚು ಕೊರೋನಾ ಪ್ರಕರಣಗಳು ಪತ್ತೆಯಾಗಿದ್ದವು. ಆದರೆ ಈ ವರ್ಷ ಭಾರತ ಅಮೆರಿಕವನ್ನು ಮೀರಿಸುತ್ತಿದೆ. ಕಳೆದ 24 ಗಂಟೆಗಳಲ್ಲಿ 2,800 ಮಂದಿ ಕೊರೋನಾಗೆ ಬಲಿಯಾಗಿದ್ದಾರೆ.

Published by: Latha CG
First published: April 27, 2021, 1:27 PM IST