ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Health Tips: ಮೌತ್​ವಾಶ್ ಬಳಕೆಯ ಪ್ರಯೋಜನ ಮತ್ತು ಪರಿಣಾಮಗಳೇನು?

ಮೌತ್‌ವಾಶ್ ಬಳಸುವುದರಿಂದ ಎಷ್ಟು ಪ್ರಯೋಜನಗಳಿದೆಯೋ, ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಇದೆ ಎಂಬುದು ತಿಳಿದಿರಲಿ. ಹಾಗಿದ್ರೆ ಮೌತ್​ವಾಶ್ ಬಳಕೆಯಿಂದ ಸಿಗುವ ಅನುಕೂಲಗಳೇನು-ಅನಾನುಕೂಲಗಳೇನು ನೋಡೋಣ.

ಆಧುನಿಕ ಜೀವನಶೈಲಿಯಲ್ಲಿ ಮೌತ್​ವಾಶ್​ ಅನ್ನು ಬಳಸದವರು ವಿರಳ ಎಂದೇ ಹೇಳಬಹುದು. ಕೆಲವರು ಬಾಯಿ ಸ್ವಚ್ಛಗೊಳಿಸಲು ಇದನ್ನು ಬಳಸಿದರೆ, ಇನ್ನು ಕೆಲವರು ಬಾಯಿ ದುರ್ವಾಸನೆಯನ್ನು ದೂರವಾಗಿಸಲು ಮೌತ್‌ವಾಶ್ ಬಳಸುತ್ತಾರೆ. ಆದರೆ ಮೌತ್‌ವಾಶ್ ಬಳಸುವುದರಿಂದ ಎಷ್ಟು ಪ್ರಯೋಜನಗಳಿದೆಯೋ, ಸರಿಯಾದ ರೀತಿಯಲ್ಲಿ ಬಳಸದಿದ್ದರೆ ಅಷ್ಟೇ ಅಡ್ಡ ಪರಿಣಾಮಗಳು ಕೂಡ ಇದೆ ಎಂಬುದು ತಿಳಿದಿರಲಿ. ಹಾಗಿದ್ರೆ ಮೌತ್​ವಾಶ್ ಬಳಕೆಯಿಂದ ಸಿಗುವ ಅನುಕೂಲಗಳೇನು-ಅನಾನುಕೂಲಗಳೇನು ನೋಡೋಣ.


ಅನುಕೂಲಗಳು:-


- ಮೌತ್​ವಾಶ್ ಬಳಕೆಯಿಂದ ಹಲ್ಲಿನಲ್ಲಿ ಕುಳಿ ಹಾಗೂ ಹುಳುಕು ಉಂಟಾಗದಂತೆ ತಡೆಯುತ್ತದೆ. ಹಾಗೆಯೇ ಇದು ಹಲ್ಲುಗಳಲ್ಲಿನ ಕುಳಿಗಳ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಈಗಾಗಲೇ ಅಸ್ತಿತ್ವದಲ್ಲಿರುವ ಕುಳಿಗಳು ಬೆಳೆಯದಂತೆ ತಡೆಯಲು ತುಂಬಾ ಸಹಾಯಕ.


- ಒಸಡುಗಳು ಮತ್ತು ಹಲ್ಲುಗಳಲ್ಲಿ ಪ್ಲೇಕ್ ರೂಪುಗೊಳ್ಳುವುದನ್ನು ತಡೆಯಲು ಮೌತ್‌ವಾಶ್ ಅನ್ನು ಬಳಸಬಹುದು.

- ಪ್ರತಿದಿನ ಮೌತ್‌ವಾಶ್ ಬಳಸುವುದರಿಂದ ಬಾಯಿ ಹುಣ್ಣನ್ನು ದೂರ ಮಾಡಬಹುದು.


- ಮೌತ್‌ವಾಶ್‌ನ ಬಳಕೆಯು ಬಾಯಿಯಲ್ಲಿರುವ ಬ್ಯಾಕ್ಟೀರಿಯಾವನ್ನು ನಿರ್ನಾಮ ಮಾಡುತ್ತದೆ. ಇದರೊಂದಿಗೆ, ಬಾಯಿಯಲ್ಲಿ ರೂಪುಗೊಂಡ ಎಲ್ಲಾ ಸಡಿಲ ಕಣಗಳನ್ನು ತೆರವುಗೊಳಿಸಲು ಸಹ ಇದು ಸಹಾಯ ಮಾಡುತ್ತದೆ.

- ಬಾಯಿಯ ದುರ್ವಾಸನೆಯನ್ನು ತೆಗೆದುಹಾಕುವಲ್ಲಿ ಮೌತ್‌ವಾಶ್ ವಿಶೇಷ ಪಾತ್ರ ವಹಿಸುತ್ತದೆ. ಇದನ್ನು ಬಳಸುವುದರಿಂದ, ಬಾಯಿಯ ಡಿಯೋಡರೆಂಟ್ ಜೊತೆಗೆ ಉಸಿರಾಟದ ತಾಜಾತನವೂ ಹೆಚ್ಚಾಗುತ್ತದೆ.


ಮೌತ್​ವಾಶ್ ಬಳಕೆಯ ಅನಾನುಕೂಲಗಳು:-


- ಮೌತ್‌ವಾಶ್‌ನ ಬಳಕೆಯಿಂದ ಬಾಯಿ ರುಚಿಯಲ್ಲಿ ಎರುಪೇರಾಗಬಹುದು.


- ಮೌತ್‌ವಾಶ್ ಬಳಕೆಯಿಂದ ಅಲರ್ಜಿ ಉಂಟಾಗುವ ಸಾಧ್ಯತೆ ಕೂಡ ಇದೆ.


- ಮೌತ್​ವಾಶ್ ಹಲ್ಲುಗಳಲ್ಲಿ ದದ್ದುಗೆ ಕಾರಣವಾಗಬಹುದು.


- ಇದರ ಬಳಕೆಯಿಂದಾಗಿ, ಬಾಯಿಯಲ್ಲಿ (ಒಣ ಬಾಯಿ) ಶುಷ್ಕತೆಯ ಸಮಸ್ಯೆಯೂ ಹೆಚ್ಚಾಗಬಹುದು.


ಮೌತ್​ವಾಶ್ ಬಳಕೆಯ ವಿಧಾನಗಳೇನು?


- ಮೌತ್‌ವಾಶ್ ಬಳಸುವ ಮೊದಲು ಹಲ್ಲುಗಳನ್ನು ಚೆನ್ನಾಗಿ ಬ್ರಷ್ ಮಾಡಿ.


- ಫ್ಲೋರೈಡ್ ಹೊಂದಿರುವ ಟೂತ್‌ಪೇಸ್ಟ್ ಬಳಸುವ ಸಂದರ್ಭದಲ್ಲಿ, ಹಲ್ಲುಜ್ಜಿದ ಕೂಡಲೇ ಮೌತ್‌ವಾಶ್ ಬಳಸಬೇಡಿ.


- ಬಾಟಲಿಯಿಂದ ನೇರವಾಗಿ ಬಾಯಿಗೆ ಸುರಿಯಬೇಡಿ. ಒಂದು ನಿರ್ದಿಷ್ಠ ಅಳತೆ ಕಪ್ ಬಳಸಿ ಉಪಯೋಗಿಸಿ.


- ಮೌತ್‌ವಾಶ್‌ನಿಂದ ಬಾಯಿ ಮುಕ್ಕಳಿಸಿ ಅದನ್ನು ನುಂಗದಿರಿ. ಇದರಿಂದ ಹೊಟ್ಟೆ ಸಮಸ್ಯೆಗಳು ತಲೆದೂರಬಹುದು.

Published by: zahir
First published: April 1, 2021, 7:31 AM IST