ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

ಆದಾಯಕ್ಕೆ ನಷ್ಟವಾಗದೆ ಸರ್ಕಾರ ಪೆಟ್ರೋಲ್ ಬೆಲೆಯನ್ನು 8.5 ರೂ. ತಗ್ಗಿಸಬಹುದು! ವಿಶ್ಲೇಷಕರು ಹೇಳೋದು ಹೀಗೆ..

Petrol Price Today: ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ಎರಡು ಇಂಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯದ ಗುರಿಯ ಮೇಲೆ ಪರಿಣಾಮ ಬೀರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್​ಗೆ 8.5 ರೂ.ಗಳವರೆಗೆ ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.

ನವದೆಹಲಿ: ದೇಶಾದ್ಯಂತ ಇಂಧನ ದರ ಏರುತ್ತಲೇ ಇದ್ದು, ಕೆಲವೆಡೆ ಈಗಾಗಲೇ ಪೆಟ್ರೋಲ್ ಬೆಲೆ ಶತಕ ಬಾರಿಸಿದೆ. ಡೀಸೆಲ್ ಬೆಲೆ ಸಹ ಐತಿಹಾಸಿಕ ಗರಿಷ್ಠ ಮಟ್ಟದಲ್ಲಿದೆ. ಈ ಹಿನ್ನೆಲೆ ಇಂಧನ ಬೆಲೆ ಏರಿಕೆಯ ಶಾಕ್ ಅನುಭವಿಸುತ್ತಿರುವ ಸಾಮಾನ್ಯ ಜನತೆ ಖರ್ಚು ಕಡಿಮೆ ಮಾಡುವ ಇತರೆ ವಿಧಾನಗಳ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಿದ್ದಾರೆ. ಕೇಂದ್ರ ಸರ್ಕಾರ ತೈಲದ ಮೇಲಿನ ಅಬಕಾರಿ ಸುಂಕ ಕಡಿಮೆ ಮಾಡಲಿ ಎಂದು ವಿರೋಧ ಪಕ್ಷಗಳು ಮತ್ತು ಹಲವರು ಮೋದಿ ಸರ್ಕಾರವನ್ನು ಈಗಾಗಲೇ ಒತ್ತಾಯಿಸಿವೆ.


ಈ ಹಿನ್ನೆಲೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಕಡಿಮೆ ಮಾಡಲು ಎರಡು ಇಂಧನಗಳ ಮೇಲಿನ ತೆರಿಗೆಯಿಂದ ಬರುವ ಆದಾಯದ ಗುರಿಯ ಮೇಲೆ ಪರಿಣಾಮ ಬೀರದಂತೆ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್​ಗೆ 8.5 ರೂ.ಗಳವರೆಗೆ ಕಡಿತಗೊಳಿಸಲು ಸರ್ಕಾರಕ್ಕೆ ಅವಕಾಶವಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ. ಕಳೆದ ಒಂಬತ್ತು ತಿಂಗಳುಗಳಲ್ಲಿ ದರಗಳು ಪಟ್ಟುಬಿಡದೆ ಹೆಚ್ಚಿದ ಬೆನ್ನಲ್ಲೇ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳು ಐತಿಹಾಸಿಕ ಗರಿಷ್ಠ ಮಟ್ಟದಲ್ಲಿವೆ.


"ನಾವು ಇಂಧನಗಳ ಮೇಲಿನ ಅಬಕಾರಿ ಸುಂಕವನ್ನು ಆರ್ಥಿಕ ವರ್ಷ (ಎಫ್​ವೈ) 22 ರಲ್ಲಿ (ಏಪ್ರಿಲ್ 2021 ರಿಂದ ಮಾರ್ಚ್ 2022 ರವರೆಗೆ) ಅಂದಾಜು ಮಾಡಿದ್ದೇವೆ. ಸುಂಕ ಕಡಿಮೆ ಮಾಡದಿದ್ದರೆ, 4.35 ಲಕ್ಷ ಕೋಟಿ ರೂ. ಆದಾಯ ಸಂಗ್ರಹವಾಗಲಿದೆ. ಆದರೆ, ಕೇಂದ್ರ ಸರ್ಕಾರದ ಗುರಿ 3.2 ಲಕ್ಷ ಕೋಟಿ ರೂ. ಆಗಿದೆ. ಈ ಹಿನ್ನೆಲೆ 2021 ರ ಏಪ್ರಿಲ್ 1 ರಂದು ಅಥವಾ ಅದಕ್ಕೂ ಮೊದಲು ಅಬಕಾರಿ ಸುಂಕವನ್ನು ಪ್ರತಿ ಲೀಟರ್ಗೆ 8.5 ರೂ.ಗಳಷ್ಟು ಕಡಿತಗೊಳಿಸಿದರೂ, ಎಫ್ವೈ 22 ಬಜೆಟ್ ಅಂದಾಜು ಪೂರೈಸಬಹುದು" ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ ಎಂದು ಪಿಟಿಐ ವರದಿ ಮಾಡಿದೆ.


ಬೇಡಿಕೆ ಚೇತರಿಕೆ, ಸನ್ನಿಹಿತವಾಗುತ್ತಿರುವ ಖಾಸಗೀಕರಣ ಮತ್ತು ಹಣದುಬ್ಬರ ಕಾಳಜಿಗೆ ಇದು ಅಬಕಾರಿ ಸುಂಕ ಕಡಿತಕ್ಕೆ ಆಶಾವಾದವನ್ನು ವ್ಯಕ್ತಪಡಿಸಿದೆ. ಆದರೆ, ಲೀಟರ್ಗೆ 8.5 ರೂ. ಕಡಿತ ಮಾಡುವುದು ಅಸಂಭವ. ಅದಕ್ಕಿಂತ ಸಾಧಾರಣ ಮಟ್ಟದಲ್ಲಿ ಬೆಲೆ ಕಡಿತವಾಗಬಹುದು ಎನ್ನಲಾಗಿದೆ. ಅಬಕಾರಿ ಸುಂಕವನ್ನು ಮಾರ್ಚ್ 2020 ಮತ್ತು ಮೇ 2020 ರ ನಡುವೆ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 13 ಮತ್ತು 16 ರೂ.ಗಳಷ್ಟು ಹೆಚ್ಚಿಸಲಾಯಿತು. ಒಟ್ಟಾರೆ ಪೆಟ್ರೋಲ್ಗೆ 32.9 ರೂ. ಅಬಕಾರಿ ಸುಂಕ ಇದ್ದರೆ, ಡೀಸೆಲ್ ಮೇಲೆ 31.8 ರೂ. ಅಬಕಾರಿ ಸುಂಕ ವಿಧಿಸಲಾಗಿದೆ.

ಇದನ್ನೂ ಓದಿ: Elections 2021: ಪ್ರಧಾನಿ ಮೋದಿ ಫೋಟೋ ಇರುವ ಹೋರ್ಡಿಂಗ್​ಗಳನ್ನು ತೆಗೆಯಲು ಪೆಟ್ರೋಲ್ ಬಂಕ್​ಗಳಿಗೆ ಚುನಾವಣಾ ಆಯೋಗ ಸೂಚನೆ


ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆಗಳು ಎರಡು ದಶಕದಷ್ಟು ಕನಿಷ್ಠ ಮಟ್ಟಕ್ಕೆ ಇಳಿದ ಕಾರಣ ಅಬಕಾರಿ ಸುಂಕ ಹೆಚ್ಚಿಸಲಾಗಿತ್ತು. ಆದರೆ, ತೈಲ ಬೆಲೆಗಳು ಚೇತರಿಸಿಕೊಳ್ಳುತ್ತಿದ್ದರೂ, ತೆರಿಗೆಯನ್ನು ಮೂಲ ಮಟ್ಟಕ್ಕೆ ಇಳಿಸಿಲ್ಲ. ಅಬಕಾರಿ ಸುಂಕ ಕಡಿತ ಸಾಧಾರಣ ಮಟ್ಟದಲ್ಲಿದ್ದರೆ, ನಾವು ನಿರೀಕ್ಷಿಸಿದಂತೆ, ಆರ್ಥಿಕ ವರ್ಷ 2022 ರಲ್ಲಿ ಬಜೆಟ್ ಅಂದಾಜಿಗಿಂತ ಹೆಚ್ಚಾಗುತ್ತದೆ" ಎಂದು ಐಸಿಐಸಿಐ ಸೆಕ್ಯುರಿಟೀಸ್ ಹೇಳಿದೆ.

ಕೇಂದ್ರ ಮತ್ತು ರಾಜ್ಯ ತೆರಿಗೆಗಳು ಪೆಟ್ರೋಲ್ನ ಚಿಲ್ಲರೆ ಮಾರಾಟದ ಬೆಲೆಯ ಶೇಕಡಾ 60 ಮತ್ತು ಡೀಸೆಲ್ನ ಶೇಕಡಾ 54 ಕ್ಕಿಂತ ಹೆಚ್ಚಾಗಿದೆ. ಕಳೆದ ತಿಂಗಳು ರಾಜಸ್ಥಾನ ಮತ್ತು ಮಧ್ಯಪ್ರದೇಶದ ಕೆಲವು ಸ್ಥಳಗಳಲ್ಲಿ 100 ರೂ. ದಾಟಿತ್ತು ಪೆಟ್ರೋಲ್ ಬೆಲೆ.


ಜಾಗತಿಕ ತೈಲ ಬೆಲೆಗಳು ಕುಸಿಯುತ್ತಿರುವುದರಿಂದ, ಅದರ ಲಾಭ ಪಡೆದುಕೊಳ್ಳಲು ಕೇಂದ್ರ ಸರ್ಕಾರ 2014 ರ ನವೆಂಬರ್ ಮತ್ತು 2016 ರ ಜನವರಿ ನಡುವೆ 9 ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಒಟ್ಟಾರೆಯಾಗಿ, ಪೆಟ್ರೋಲ್ ದರದ ಸುಂಕವನ್ನು ಆ 15 ತಿಂಗಳಲ್ಲಿ ಪ್ರತಿ ಲೀಟರ್ಗೆ 11.77 ರೂ.ಗೆ ಹೆಚ್ಚಿಸಲಾಗಿದ್ದರೆ, ಡೀಸೆಲ್ಗೆ 13.47 ರೂ. ನಷ್ಟು ಹೆಚ್ಚಳವಾಗಿದೆ. ಇದರಿಂದ 2014-15ರಲ್ಲಿ 99,000 ಕೋಟಿ ರೂ. ಅಬಕಾರಿ ಸುಂಕ ಸಂಗ್ರಹವಾಗಿದ್ದರೆ, 2016-17ರಲ್ಲಿ ಅದಕ್ಕಿಂತ ಎರಡು ಪಟ್ಟಿಗಿಂತ ಹೆಚ್ಚು ಏರಿಕೆ ಅಂದರೆ 2,42,000 ಕೋಟಿ ರೂ.ಗೆ ಏರಿಕೆಯಾಗಿತ್ತು.


ನಂತರ ಮೋದಿ ಸರ್ಕಾರ 2017 ರ ಅಕ್ಟೋಬರ್​ನಲ್ಲಿ 2 ರೂ. ಅಬಕಾರಿ ಸುಂಕ ಕಡಿಮೆ ಮಾಡಿತ್ತು, ನಂತರ, ಒಂದು ವರ್ಷದ ಬಳಿಕ 1.50 ರೂ. ಕಡಿತಗೊಳಿಸಿತ್ತು. ಆದರೆ, 2019 ರ ಜುಲೈನಲ್ಲಿ ಅಬಕಾರಿ ಸುಂಕವನ್ನು ಲೀಟರ್​ಗೆ 2 ರೂ.ಗೆ ಮತ್ತೆ ಹೆಚ್ಚಿಸಿತ್ತು. ಮತ್ತೆ 2020 ರ ಮಾರ್ಚ್​ನಲ್ಲಿ ಅಬಕಾರಿ ಸುಂಕವನ್ನು ತಲಾ 3 ರೂ.ಗೆ ಏರಿಸಿತು. ಅದೇ ವರ್ಷ ಮೇ ತಿಂಗಳಲ್ಲಿ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್​ಗೆ 10 ರೂ ಮತ್ತು ಡೀಸೆಲ್ ಮೇಲೆ ಲೀಟರ್​ಗೆ 13 ರೂ. ಗಳ ಏರಿಕೆ ಮಾಡಿತ್ತು.

Published by: Sushma Chakre
First published: March 5, 2021, 8:26 AM IST