ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)

Actor Vivek: ತಮಿಳಿನ ಹಾಸ್ಯ ನಟ ವಿವೇಕ್​ ಹೃದಯಾಘಾತ; ಐಸಿಯುನಲ್ಲಿ ಮುಂದುವರೆದ ಚಿಕಿತ್ಸೆ..!

ವಿವೇಕ್​ಗೆ ತೀವ್ರ ಹೃದಯಾಘಾತವಾಗಿರೋದು ತಿಳಿದು ಬಂದಿದೆ. ವಿವೇಕ್ ದೇಹಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಚೆನ್ನೈ (ಏ. 16): ತಮಿಳು ಚಿತ್ರರಂಗದ ಖ್ಯಾತ ಹಾಸ್ಯ ನಟ ವಿವೇಕ್​ಗೆ ಹೃದಯಾಘಾತವಾಗಿದ್ದು ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 59 ವರ್ಷದ ವಿವೇಕ್ ಇಂದು ಬೆಳಗ್ಗೆ ಮನೆಯಲ್ಲಿ ಏಕಾಏಕಿ ಕುಸಿದು ಬಿದ್ದು ಪ್ರಜ್ಞೆ ತಪ್ಪಿದ್ದಾರೆ. ಕೂಡಲೇ ಅವರನ್ನು ಎಸ್​ಐಎಂಎಸ್​ ಆಸ್ಪತ್ರೆಗೆ ದಾಖಲಿಸಲಾಗಿದೆ. ವಿವೇಕ್​ಗೆ ತೀವ್ರ ಹೃದಯಾಘಾತವಾಗಿರೋದು ತಿಳಿದು ಬಂದಿದೆ. ವಿವೇಕ್ ದೇಹಸ್ಥಿತಿ ಗಂಭೀರವಾಗಿದ್ದು, ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿವೇಕ್ ಹಿಂದಿನ ದಿನವಷ್ಟೇ ಕೋವಿಡ್ ವ್ಯಾಕ್ಸಿನ್ ಪಡೆದಿದ್ದರು. ಈ ಹಿನ್ನೆಲೆಯಲ್ಲಿ ಅಭಿಮಾನಿಗಳು ಆತಂಕ ವ್ಯಕ್ತಪಡಿಸಿದ್ದಾರೆ.


ಗುರುವಾರವಷ್ಟೇ ನಟ ವಿವೇಕ್ ಖಾಸಗಿ ಆಸ್ಪತ್ರೆ ಬದಲು ಸರ್ಕಾರಿ ಆಸ್ಪತ್ರೆಗೆ ತೆರಳಿ ಲಸಿಕೆ ಪಡೆದುಕೊಂಡಿದ್ದರು. ಎಲ್ಲರೂ ಲಸಿಕೆ ಪಡೆಯುವಂತೆ ಜನರಲ್ಲಿ ಮನವಿ ಮಾಡಿದ್ದರು. ಲಸಿಕೆ ಪಡೆದ ಬಳಿಕವೂ ಮಾಸ್ಕ್, ಸಾಮಾಜಿಕ ಅಂತರ ಮರೆಯದಂತೆ ಸಮಾಜಿಕ ಜಾಲತಾಣಗಳ ಮೂಲಕ ಜಾಗೃತಿ ಮೂಡಿಸಿದ್ದರು. ಈಗ ವಿವೇಕ್ ಅನಾರೋಗ್ಯಕ್ಕೆ ತುತ್ತಾಗಿರೋದು ಚರ್ಚೆಗೆ ಗ್ರಾಸವಾಗಿದೆ.



ವಿಜಯ್ ಆಪ್ತರು ಮಾಧ್ಯಮಗಳೊಂದಿಗೆ ಮಾತನಾಡಿ ವ್ಯಾಕ್ಸಿವೇಷನ್ ಬಳಿಕ ವಿವೇಕ್​ಗೆ ಹೃದಯಾಘಾತವಾಗಿದೆ ಎಂಬುವುದನ್ನು ತಳ್ಳಿ ಹಾಕಿದ್ದಾರೆ. ವಿವೇಕ್ ನಿನ್ನೆ ಮೊದಲ ಡೋಸ್ ಪಡೆದುಕೊಂಡಿದ್ದರು. ಲಸಿಕೆ ಪಡೆದ ಬಳಿಕ ವಿವೇಕ್ ಆರಾಮಾಗೇ ಇದ್ದರು, ಆರೋಗ್ಯದಲ್ಲಿ ಯಾವುದೇ ಏರುಪೇರು ಕಾಣಿಸಿಕೊಂಡಿರಲಿಲ್ಲ. ಇಂದು ಬೆಳಗ್ಗೆ ಹೃದಯಾಘಾತ ಸಂಭವಿಸಿದೆ. ಲಸಿಕೆಯಿಂದ ವಿವೇಕ್ ಗೆ ತೊಂದರೆಯಾಗಿದೆ ಎಂದು ಹೇಳಲು ಬರೋದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ವೈದ್ಯರು ನಟ ವಿಜಯ್​ಗೆ ಆಂಜಿಯೋಗ್ರಫಿ ಮಾಡಿದ್ದಾರೆ. ವಿಜಯ್ ಈಗ ಕೊಂಚ ಚೇತರಿಸಿಕೊಂಡಿದ್ದು, ನಮ್ಮೊಂದಿಗೆ ಮಾತನಾಡಿದರು ಎಂದು ಆಪ್ತರು ತಿಳಿಸಿದ್ದಾರೆ.


1980ರಿಂದಲೂ ತಮಿಳು ಚಿತ್ರರಂಗದಲ್ಲಿ ಹಾಸ್ಯ ನಟರಾಗಿ ಗುರುತ್ತಿಸಿಕೊಂಡಿರುವ ವಿವೇಕ್ ಅಪಾರ ಅಭಿಮಾನಿಗಳನ್ನು ಗಳಿಸಿದ್ದಾರೆ. ಕಳೆದ ವರ್ಷ ಕಾರ್ಯಕ್ರಮವೊಂದರಲ್ಲಿ ಕರ್ನಾಟಕದ ಸಾಲುಮರದ ತಿಮ್ಮಕ್ಕನ ಬಗ್ಗೆ ಮಾತನಾಡಿ ಕನ್ನಡಿಗರ ಮೆಚ್ಚುಗೆಗೂ ವಿವೇಕ್ ಪಾತ್ರರಾಗಿದ್ದರು.

Published by: Seema R
First published: April 16, 2021, 3:55 PM IST