ಭಾಷೆಯನ್ನು ಆಯ್ಕೆಮಾಡಿ :

ಕನ್ನಡ (Kannada)
HOME » NEWS »CORONAVIRUS-LATEST-NEWS » GOOGLE CEO SUNDAR PICHAI OFFERS 135 CRORE HELP FOR COVID CRISIS IN INDIA SAYS HE IS DEVASTATED SKTV

Corona Crisis: ತವರಿನ ಪರಿಸ್ಥಿತಿ ನೋಡಿ ಸಂಕಟಪಟ್ಟ Google CEO ಸುಂದರ್ ಪಿಚಾಯ್, 135 ಕೋಟಿ ಸಹಾಯ

ಭಾರತದಲ್ಲಿ ಕೊರೊನಾ ಸ್ಥಿತಿ ಕೈಮೀರಿ ಹೋಗುತ್ತಿರುವುದರಿಂದ Google ಸಂಸ್ಥೆಯ CEO ಭಾರತೀಯ ಮೂಲದ ಸುಂದರ್ ಪಿಚಾಯ್ ತಾಯ್ನಾಡಿಗೆ 135 ಕೋಟಿ ರೂಪಾಯಿ ಸಹಾಯ ನೀಡಿದ್ದಾರೆ.

Covid Crisis: ಭಾರತದಲ್ಲಿ ಕೊರೊನಾ ಪರಿಸ್ಥಿತಿ ನೋಡಿ ನನಗೆ ಆಘಾತವಾಗಿದೆ. ಗೂಗಲ್ ಮತ್ತು ಇಲ್ಲಿನ ಸದಸ್ಯರು ಅಗತ್ಯ ಔಷಧ ಮತ್ತು ಉಪಕರಣಗಳ ಖರೀದಿಗೆ, ಹೆಚ್ಚು ಸೂಕ್ಷ್ಮ ಸಮುದಾಯದ ಬೆಂಬಲಕ್ಕೆ ನಿಂತಿರುವ ಸಂಸ್ಥೆಗಳಿಗೆ ಮತ್ತು ತುರ್ತು ಮಾಹಿತಿಗಳನ್ನು ತಲುಪಿಸಲು ಅಗತ್ಯವಿರು ಕಡೆ ಬಳಕೆಗಾಗಿ 135 ಕೋಟಿ ರೂಪಾಯಿಗಳನ್ನು UNICEF ಮತ್ತು GiveIndia ಸಂಸ್ಥೆಗಳ ಮೂಲಕ ತಲುಪಿಸುತ್ತಿದ್ದೇವೆ ಎಂದು Google ಸಂಸ್ಥೆಯ ಸಿಇಒ ಸುಂದರ್ ಪಿಚಾಯ್ ಟ್ವೀಟ್ ಮೂಲಕ ತಿಳಿಸಿದ್ದಾರೆ. ಭಾರತೀಯ ಮೂಲದ ಇವರು ತಮ್ಮ ದೇಶದ ಜನ ನರಳುವುದನ್ನು ಕಂಡು ಬಹಳ ನೋವಾಗಿದೆ, ಯುಎಸ್​ ಸರ್ಕಾರ ಈ ಸಂದರ್ಭದಲ್ಲಿ ಭಾರತಕ್ಕೆ ಅಗತ್ಯ ನೆರವು ನೀಡುತ್ತಿರುವುದು ಸ್ವಾಗತಾರ್ಹ ವಿಚಾರ ಎಂದೂ ತಿಳಿಸಿದ್ದಾರೆ.


ಈ ಹಣದ ಮೊದಲ ಭಾಗ GiveIndia ಎನ್ನುವ ಸ್ವಸಹಾಯ ಸಂಸ್ಥೆಗೆ 20 ಕೋಟಿ ರೂಪಾಯಿಗಳನ್ನು ನೀಡಲಿದ್ದು ಇದು ಕೋವಿಡ್​ನಿಂದ ಅತೀ ಹೆಚ್ಚು ಹೊಡೆತಕ್ಕೊಳಗಾದ ಕುಟುಂಗಳಿಗೆ ಅವರ ದೈನಂದಿನ ಖರ್ಚುಗಳಿಗೆ ಅಗತ್ಯವಾದ ಹಣವನ್ನು ನೀಡಲು ಬಳಸಲಾಗುತ್ತದೆ. ಎರಡನೇ ಭಾಗ ತುರ್ತು ಔಷಧ, ಆಕ್ಸಿಜನ್, ಪರೀಕ್ಷಾ ಸಲಕರಣೆಗಳು ಅತ್ಯಂತ ಅವಶ್ಯಕವಾಗಿ ಭಾರತದ ಯಾವ ಭಾಗಕ್ಕೆ ಬೇಕೋ ಅಲ್ಲಿಗೆ ತಲುಪಿಸಲು ಯೂನಿಸೆಫ್​ಗೆ ನೀಡಲಾಗುತ್ತದೆ. ಗೂಗಲ್ ಸಂಸ್ಥೆಯ 900ಕ್ಕೂ ಹೆಚ್ಚು ನೌಕರರು ಸುಮಾರು 3.7 ಕೋಟಿ ರೂಪಾಯಿಗಳನ್ನು ಇದಕ್ಕಾಗಿ ನೀಡಿದ್ದಾರೆ.



Published by: Soumya KN
First published: April 26, 2021, 11:36 AM IST